ದಿ. ಡಿ.ವಿ. ಪಾಟೀಲ್‌ರಂತೆ ಪರೋಪಕಾರಿಯಾಗಲು ಕರೆ

0
59

ಕಲಬುರಗಿ: ಬಸವತತ್ವವೇ ತಮ್ಮ ಬದುಕಿನ ಉಸಿರಾಗಿಸಿಕೊಂಡು ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸಿದ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದ ಲಿಂಗೈಕ್ಯ ಡಿ.ವಿ.ಪಾಟೀಲ ರವರು ಸಮಾಜ ಕಂಡ ಅಪರೂಪದ ವ್ಯಕ್ತಿಯಾಗಿದ್ದರು ಎಂದು ಮಾಜಿ ಸಚಿವ ಕೆ.ಬಿ. ಶಾಣಪ್ಪ ಹಾಗೂ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಇಲ್ಲಿ ಹೇಳಿದರು.

ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದ ಲಿಂಗೈಕ್ಯ ಡಿ.ವಿ. ಪಾಟೀಲ್ ಸ್ಮರಣಾರ್ಥ ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕ್ಯಾಡೆಮಿಯು ನಗರದ ವಿ.ವಿ.ಹಾಸ್ಟೆಲ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ಸಮಾರಂಭದಲ್ಲಿ ಸಾಧಕರಿಗೆ ‘ಧೈರ್ಯನಿಧಿ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ವಥಯಕ್ತಿಕ ಹಿತಾಸಕ್ತಿಗಿಂತ ಸಮಾಜದ ಹಿತವನ್ನೇ ಸದಾ ಬಯಸಿದ್ದ ಲಿಂ.ಡಿ.ವಿ.ಪಾಟೀಲ ರವರು ಪರೋಪಕಾರಿಯಾಗಿದ್ದರು. ಪರೋಪಕಾರಿ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

Contact Your\'s Advertisement; 9902492681

ದಿವ್ಯ ಸಾನಿಧ್ಯ ವಹಿಸಿದ್ದ ಸಾರಂಗಮಠದ ಜಗದ್ಗುರು ಡಾ. ಸಾರಂಗಧರ್ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಸಮಾಜಸೇವೆಯಲ್ಲೇ ದೇವರನ್ನು ಕಾಣುತ್ತಿದ್ದ ಡಿ.ವಿ.ಪಾಟೀಲ ರವರನ್ನು ಶಾಶ್ವತವಾಗಿ ನೆನಪಿಡುವ ನಿಟ್ಟಿನಲ್ಲಿ ಕಲಬುರಗಿ ನಗರದ ಯಾವುದಾದರೊಂದು ರಸ್ತೆಗಾಗಲೀ ಅಥವಾ ಮಾರ್ಗಕ್ಕಾಗಲೀ ಅವರ ಹೆಸರನ್ನು ಇಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಲಿಂಗೈಕ್ಯ ಡಿ.ವಿ. ಪಾಟೀಲ್ ಅವರು ಸಮಾಜದ ಮಟ್ಟಿಗೆ ಒಬ್ಬ ವ್ಯಕ್ತಿಯಾಗಿರದೇ ಒಂದು ದೊಡ್ಡ ಶಕ್ತಿಯಾಗಿದ್ದರು. ಅವರನ್ನು ಕಳೆದುಕೊಂಡ ಕಲಬುರ್ಗಿ ಜನತೆ ಬಡವಾಗಿದೆ ಎಂದು ಅವರು ಹೇಳಿದಾಗ ಸಭಿಕರ ಕಣ್ಣುಗಳು ತೇವಗೊಂಡವು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಡಾ. ಅರುಣಕುಮಾರ್ ಎಸ್. ಪಾಟೀಲ್ ಅವರು ಮಾತನಾಡಿ, ಲಿಂ. ಡಿ.ವಿ. ಪಾಟೀಲ್ ಅವರ ಬದುಕು ತೆರೆದಿಟ್ಟ ಪುಸ್ತಕವಾಗಿತ್ತು. ನುಡಿ ಪ್ರಾಧಾನ್ಯತೆಗಿಂತ ನಡತೆಗೆ ಆದ್ಯತೆಯನ್ನು ನೀಡಿದವರಾಗಿದ್ದರು ಎಂದರು.

ಅಕ್ಯಾಡೆಮಿ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹನ್ನೇರಡನೇ ಶತಮಾನದ ಬಸವಾದಿ ಶರಣರ ವಚನಗಳಲ್ಲಿನ ಮೌಲ್ಯಗಳನ್ನು ಅರಿತು, ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಅಂಧಕಾರ, ಮೌಢ್ಯಾಚರಣೆ ವಿರುದ್ಧ ಹೋರಾಟ ಮಾಡಿದ ಡಿ.ವಿ.ಪಾಟೀಲ ರವರೊಬ್ಬ ಅಪ್ಪಟ ವೈಚಾರಿಕ ಚಿಂತಕರಾಗಿದ್ದರು ಎಂದರು. ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎನ್. ಪುಣ್ಯಶೆಟ್ಟಿ, ಶರಣ ಚಿಂತಕ ಜೇವರ್ಗಿಯ ರಾಜಶೇಖರ್ ಸಿರಿ, ಶ್ರೀ ಬಸವೇಶ್ವರ್ ಬ್ಯಾಂಕಿನ ನಿರ್ದೇಶಕಿ ಸುಶೀಲಾಬಾಯಿ ಡಿ.ವಿ.ಪಾಟೀಲ್, ಕಲ್ಯಾಣಪ್ಪ ಪಾಟೀಲ್ ಮಳಖೇಡ್, ಎಸ್.ಎಂ. ಪಟ್ಟಣಕರ್, ಶಿವರಾಜ್ ಅಂಡಗಿ, ಪರಮೇಶ್ವರ್ ಶಟಕಾರ್, ಶ್ರೀಕಾಂತ್ ಪಾಟೀಲ್ ತಿಳಗೂಳ್, ರವೀಂದ್ರಕುಮಾರ್ ಭಂಟನಳ್ಳಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ತಮ್ಮ ವೃತ್ತಿಯಲ್ಲಿದ್ದುಕೊಂಡು ಶರಣ ಚಿಂತನೆಯಲ್ಲಿ ತೊಡಗಿಸಿಕೊಂಡಿರುವ ಡಾ. ಮಲ್ಲಿಕಾರ್ಜುನ್ ವಡ್ಡನಕೇರಿ, ಬಸವರಾಜ್ ಸಾಲಿ, ಆರ್.ಎಸ್. ದೊಡ್ಡಮನಿ, ಸಿದ್ಧರಾಮ್ ಯಳವಂತಗಿ, ಗೀತಾ ಟಿ. ಕರೇಗೌಡರ್ ಅವರಿಗೆ ‘ಧೈರ್ಯನಿಧಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಬೇಸಿಗೆ ಕಾಲದಲ್ಲಿ ಕಳೆದ ಅನೇಕ ತಿಂಗಳುಗಳಿಂದ ವಿವಿಧ ಬಡಾವಣೆಗಳ ನಾಗರೀಕರಿಗೆ ಉಚಿತವಾಗಿ ಕುಡಿಯುವ ನೀರನ್ನು ಟ್ಯಾಂಕರ್ ಗಳ ಮೂಲಕ ಸರಬರಾಜು ಮಾಡುತ್ತಿರುವ ಪ್ರಶಾಂತ್ ಅಪ್ಪಣ್ಣ ಗುಡ್ಡಾ, ಶಿವಕುಮಾರ್ ತೋಳನೂರ್, ರೇವಣಸಿದ್ದಪ್ಪ ಬಡಾ ರಟಕಲ್, ಮಂಜುನಾಥ್ ಕಳಸ್ಕರ್ ಅವರನ್ನು ಸಹ ಇದೇ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಲಾಯಿತು.

ಪ್ರಮುಖರಾದ ಬಸವರಾಜ್ ಮೊರಬದ್, ಶಿವರಾಯ್ ಬಳಗಾನೂರ್, ಶಕುಂತಲಾ ಪಾಟೀಲ್ ಜಾವಳಿ, ಸವಿತಾ ಪಾಟೀಲ್ ಸೊಂತ, ಶ್ರೀಕಾಂತ್ ಚೌಕಾ, ಮಹಾಂತೇಶ್ ಪಾಟೀಲ್, ವಿಶ್ವನಾಥ್ ಮಂಗಲಗಿ, ಬಸವರಾಜ್ ಧೂಳಾಗುಂಡಿ, ಶಿವಶರಣ್ ದೇಗಾಂವ್, ಡಾ. ಬಾಬುರಾವ್ ಶೇರಿಕಾರ, ಜಗದೀಶ್ ಪಾಟೀಲ್, ಉದಯಕುಮಾರ್ ಸಾಲಿ, ಚಂದ್ರಶೇಖರ್ ತಳ್ಳಳ್ಳಿ, ಜಗದೀಶ್ ಮರಪಳ್ಳಿ, ಶರಣು ಪಪ್ಪಾ, ಓಂಪ್ರಕಾಶ್ ಪಾಟೀಲ್ ತರನಳ್ಳಿ, ಲಕ್ಷ್ಮೀನಾರಾಯಣ್ ಚಿಮ್ಮನಚೋಡಕರ್, ಹಣಮಂತ್ ಅಟ್ಟೂರ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here