ಮನಾಲಿಯಲ್ಲಿ ಖಾಸಗಿ ಬಸ್ ಕಣಿವೆಗೆ ಬಿದ್ದು 34 ಮಂದಿ ಸಾವು, 35 ಮಂದಿ ಗಂಭೀರ ಗಾಯ

0
66

ಮನಾಲಿ: ಸುಂದರ ನಗರ ಮನಾಲಿಯ ಕುಲು ಜಿಲ್ಲೆಯ ಸಮೀಪ ಖಾಸಗಿ ಬಸ್ ವೊಂದು ಕಣಿವೆಯಲ್ಲಿ ಬಿದ್ದ ಪರಿಣಾಮ 34 ಮಂದಿ ಸಾವನಪ್ಪಿ, 35 ಮಂದಿ ಗಂಭೀರ ರೀತಿಯಲ್ಲಿ ಗಾಯಗೊಂಡಿರುವ ದಾರುಣ ಘಟನೆ ಸಂಭವಿಸಿದೆ.

ಘಟನೆಯಲ್ಲಿ 10 ಮಕ್ಕಳು ಸೇರಿ 10 ಮಹಿಳೆಯರು ಮೃತಪಟ್ಟಿದ್ದಾರೆಂದು ಕುಲು ಜಿಲ್ಲೆಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿ, ಗಾಯಗೊಂಡ ಪ್ರಯಾಣಿಕರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರಯಾಣಿಕರು ಹೊತ್ತು ಒಯ್ಯುತ್ತಿರುವ ಬಸ್ ಕಾಲುವೆಯಿಂದ 200 ಅಡಿ ಆಳದ ಕಣಿವೆಗೆ ಬಿದ್ದಿದ್ದ ಪರಿಣಾಮ ಘಟನೆ ಸಂಭವಿಸಿದೆ. ಘಟನಾ ಸಂದರ್ಭದಲ್ಲಿ ಸ್ಥಳೀಯರು ಆಗಮಿಸಿ ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಎಂ.ಎಚ್ 65/7065 ಹಿಮಾಚಲ್ ಪ್ರದೇಶದ ನೊಂದಣಿ ಸಂಖ್ಯೆ ಹೊಂದಿ ಈ ಬಸ್, ಕುಲು-ಗದಗುಶಾಯಿನಿಗೆ ಮರಳಿ ಬರುವಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಬಸ್ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಘಟನೆಯಲ್ಲಿ ಪ್ರಯಾಣಿಕರ ರಕ್ಷಣೆಗೆ ಹರಸಹಾಸ ಪಡುವಂತಾಗಿದೆ.

ಘಟನಾ ಸ್ಥಳಕ್ಕೆ ಸಾರಿಗೆ ಸಚಿವ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದರು. ಸ್ಥಳೀಯ ಆಡಳಿತ ಅಧಿಕಾರಿಗಳು ಘಟನೆಯಲ್ಲಿ ತೀವ್ರವಾಗಿ ಹಿಮಾಚಲ್ ಪ್ರದೇಶ ಸರಕಾರ 50 ಸಾವಿರ ಪರಿಹಾರ ಘೋಷಿಸಿದೆ.

ಘಟನೆಯ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿ, ಘಟನೆಯಲ್ಲಿ ಗಾಯಗೊಂಡವರಿಗೆ ಶೀಘ್ರ ಗುಣಮುಖ್ಯವಾಗಲೆಂದು ಹಾರೈಸಿದ್ದಾರೆ. ಅಲ್ಲದೇ ತಮ್ಮ ಟ್ವೀಟ್ ನಲ್ಲಿ ಘಟನೆಯ ಕುರಿತು ಸರಕಾರ ಅಗತ್ಯ ಕ್ರಮ ಕೈಗೊಳಬೇಕೆಂಬು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here