ಕಲಬುರಗಿ: ನಾಲ್ಕು ತಿಂಗಳಿಂದ ಮಸ್ಜಿದ್ ಮೌಲಾನಾ, ಮೌಜನ್ ಗಳ ಖಾತಗೆ ಖಾತೆಗೆ ಹಣ ಜಮಾ ಆಗಿಲ್ಲ, ಶೀಘ್ರದಲ್ಲಿ ಖಾತೆ ಹಣ ಪಾತಿ ಮಾಡಬೇಕೆಂದು ಒತ್ತಾಯಿಸಿ ನಯಾ ಸವೇರಾ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಕೊರೊನಾ ಮಹಾಮಾರಿ ಯಲ್ಲಿ ಮತ್ತು ಲಾಕ್ಡೌನ್ ನಲ್ಲಿ ಜನರು ತೊಂದರೆಗೀಡಾಗಿದ್ದು, ವಿಶೇಷವಾಗಿ ಮೌಲಾನಾ ಮತ್ತು ಮೌಜನ್ ಸಂಕಷ್ಟ ಅನುಭವಿಸಿದ್ದು, ಇವರ ಖಾತೆಗೆ ಪಾವತಿಯಾಗಬೇಕಿರುವ ಹಣ ಜಮಾ ಮಾಡಬೇಕೆಂದು ಆಗ್ರಹಿಸಿದರು.
ಎಸ್ ಡಿಎಂಸಿ ನೂತನ ಅಧ್ಯಕ್ಷರಾಗಿ ಗಾಲಿಬಾಖಾನ್ ಇನಾಮದಾರ್ ಆಯ್ಕೆ
ಪಾವತಿಯಾಗಬೇಕಿರುವ ಹಣ ಸಂದಾಯ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಸಂಘಟನೆಯ ಸರಕಾರಕ್ಕೆ ಎಚ್ಚರಿಕೆ ನೀಡುತ್ತದೆ. ಈ ವೇಳೆಯಲ್ಲಿ ಕಲಬುರಗಿ ನಗದ ಮುಖ್ಯ ಖಾಜಿಯಾಗಿರುವ ಹಾಗೂ ಖಾಜಿ ಸಂಸ್ಥೆಯ ಅಧ್ಯಕ್ಷರಾದ ಡಾ. ಖಾಜಿ ಹಾಮಿದ್ ಫೈಸಲ್ ಸಿದ್ದಿಕಿ ಹಾಜರಿದ್ದರು.
ಸಂಘಟನೆಯ ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ, ಸಲೀಂ ಅಹ್ಮದ್ ಚಿತಾಪುರ್, ಸೈರಾ ಬಾನು ಅಬ್ದುಲ್ ವಾಹಿದ್, ಗೀತಾ ಮುದುಗಲ್, ಖಾಜಾ ಪಟೇಲ್ ಸರಡಗಿ, ಸಾಧಿಕ್ ಪಟೇಲ್ ಯಳವಂತಗಿ, ಬಾಬಾ ಫಕೃದ್ದಿನ್ ಅನ್ಸಾರಿ ,ಮೊಹಮ್ಮದ್ ಆಜಂ ಮೂಸಾ, ತನಿಯತ್ ಫಾತಿಮಾ, ರುಕ್ನುದ್ದಿನ್, ಹಲವಾರು ಜನರು ಹಾಜರಿದ್ದರು.
ಕಡಕೋಳ ಮಡಿವಾಳೇಶ್ವರರ ಸಿನೆಮಾದಲ್ಲಿ ಕಲಬುರ್ಗಿ ಪ್ರತಿಭೆಗಳು: ಇಂದು ರಾಜ್ಯದಾಧ್ಯಂತ ಬಿಡುಗಡೆ