ಕಡಕೋಳ ಮಡಿವಾಳೇಶ್ವರರ ಸಿನೆಮಾದಲ್ಲಿ ಕಲಬುರ್ಗಿ ಪ್ರತಿಭೆಗಳು: ಇಂದು ರಾಜ್ಯದಾಧ್ಯಂತ ಬಿಡುಗಡೆ

0
88

ವಾಡಿ: ಕಲ್ಯಾಣ ನಾಡು ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಸುಕ್ಷೇತ್ರ ಕಡಕೋಳ ಗ್ರಾಮದ ಮಹಾತತ್ವಜ್ಞಾನಿ ಶ್ರೀಮಡಿವಾಳೇಶ್ವರರ ಜೀವನಾಧಾರಿತ ಭಕ್ತಿಪ್ರಧಾನ ಚಲನಚಿತ್ರ ಮಾ.೫ ರಂದು ಶುಕ್ರವಾರ ರಾಜ್ಯದಾಧ್ಯಂತ ತೆರೆಗೆ ಬರುತ್ತಿದ್ದು, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳು ಸೇರಿದಂತೆ ನಾಡಿನ ವಿವಿಧೆ ಭಾಗಗಳ ನೂರಾರು ಜನ ಕಲಾವಿದರು ಈ ಸಿನೆಮಾದಲ್ಲಿ ನಟಿಸಿರುವುದು ವಿಶೇಷ.

ವಿಜಯಪುರ ಮೂಲದ ಶಿವುಕುಮಾರ ತೇಲಿ ಎಂಬುವವರು ಮಹಾತತ್ವಜ್ಞಾನಿ ಕಡಕೋಳ ಮಡಿವಾಳೇಶರು ಸಿನೆಮಾದ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದು, ಚಿತ್ತಾಪುರ ತಾಲೂಕಿನ ಸನ್ನತಿ ಗ್ರಾಮದ ಗುರುಪ್ರಸಾದ ಶಾಸ್ತ್ರೀ ಎಂಬ ಯುವ ಪ್ರತಿಭೆ, ಶ್ರೀಮಡಿವಾಳೇಶ್ವರರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿವಮೊಗ್ಗಾದ ನಿಖಿತಾ ಸಾಗರ, ಶಹಾಪುರದಲಕ್ಷ್ಮೀ ದೇಸಾಯಿ ಹಾಗೂ ನೀತಾ ಹಿರೇಮಠ ಎಂಬುವವರು ನಾಯಕಿಯರಾಗಿ ಮತ್ತು ತಾಯಿ ಪಾತ್ರಗಳಲ್ಲಿ ನಟಿಸಿದ್ದಾರೆ.

Contact Your\'s Advertisement; 9902492681

ನಾಡು-ನುಡಿ ಉಳಿಸಲು ಸಂಘಟಿತರಾಗಿ: ಮಹೇಶ್ ಕಾಶಿ

೨೦೧೬/೧೭ರಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲಾದ ಈ ಸಿನೆಮಾ ಮಡಿವಾಳೇಶ್ವರರ ತಪೋಭೂಮಿ ಯಡ್ರಾಮಿ ತಾಲೂಕಿನ ಕಡಕೋಳ ಸೇರಿದಂತೆ ಸುಂಬುಡ, ಯಡ್ರಾಮಿ, ಕಾಚಾಪುರ, ಕೋಣಸಿರಸಗಿ, ಅರಳಗುಂಡಗಿ, ಅಫಜಲಪುರ ತಾಲೂಕಿನ ಚಿನ್ಮಯಗಿರಿ, ಸೇಡಂ ಮತ್ತು ಶ್ರೀಶೈಲದ ಅರಣ್ಯ ಪರಿಸರದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಬೆಂಗಳೂರು ಹೊರೆತುಪಡಿಸಿ ವಿಜಯಪುರ, ಬೀದರ, ಕಲಬುರಗಿ, ಶಹಾಪುರ, ರಾಯಚೂರ, ಕೊಪ್ಪಳ, ಗಂಗಾವತಿ, ಬೆಳಗಾಂವಿ, ಮಸ್ಕಿ, ಭಾಲ್ಕಿ, ಬಾಗಲಕೋಟೆ ಸೇರಿದಂತೆ ರಾಜ್ಯಾಧ್ಯಂತ ಮಾ.೫ ರಂದು ಸಿನೆಮಾ ಬಿಡುಗಡೆಯಾಗುತ್ತಿರುವುದು ಸಂತಸದ ಗಳಿಗೆಯಾಗಿದೆ.

ನಗರೋತ್ಥಾನ ಯೋಜನೆಯ ಕಾಮಗಾರಿಗಳು ಕಳಪೆ ಮತ್ತು ಅವೈಜ್ಞಾನಿಕ

೧೭೮೦ ರಿಂದ ೧೮೫೫ರ ಕಾಲದ ಮಧ್ಯದಲ್ಲಿ ಕಲಬುರಗಿ ನಾಡಿನೊಳಗ ಕಾಯಕಮಾಡಿ ಜೀವಿಸುವ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಕಡಕೋಳದ ಶ್ರೀಮಡಿವಾಳೇಶ್ವರರು, ಯಾಕ ಚಿಂತಿ ಮಾಡತಿ ಎಲೆ ಮನವೇ ನಿನಗ್ಯಾತರ ಸು:ಖವಿಲ್ಲ ಎಲೆ ಮನವೇ, ನಾ ಬರಬಾರದಿತ್ತು ಈ ಊರೀಗ ಬಂದು ಬಿದ್ದೆನೋ ಮಾಯದ ಬಲೆಯೊಳಗ, ಏನಾಗತಾದೋ ಎಂತಾಗತಾದೋ ಈ ನಾಡ ನೀ ನೋಡೋ ತಮ್ಮಾ, ಮಾನಗೇಡಿ ಮಂದಿ ಹುಟ್ಟಿ ಮರತ್ಯಾ ಕೆಡಿಸ್ಯಾರು ಉಡಾಳ ಮಂದಿ ಊರಾ ಒಳಗ ಹಿಡಿಯಲು ಹೋದಾರೋ… ನಾ ಕಡಕೋಳದ ಗುಲಾಮ ನನ್ನ ಹೆಸರ ತೆಗಿಬ್ಯಾಡರಿ ಇನ್ನೊಮ್ಮ ಎಂಬ ಅಧ್ಬುತವಾದ ಸಾಹಿತ್ಯದ ಸಾಲುಗಳಲ್ಲೆ ಹಲವು ತತ್ವಪದಗಳನ್ನು ಕಟ್ಟಿಕೊಟ್ಟು ಸಮಾಜವನ್ನು ಎಚ್ಚರಿಸುವ ಕಾಯಕ ಮಾಡಿದ್ದರು. ಬಸವಾದಿ ಶರಣರ ಕ್ರಾಂತಿ ಮತ್ತು ಸ್ವರವಚನ ಸಾಹಿತ್ಯದ ಸಮ್ಮಿಳಿತಗೊಂಡ ವ್ಯಕ್ತಿತ್ವದ ಇಂತಹ ಮಹಾಜ್ಞಾನಿಯ ಜೀನ ಚರೀತ್ರೆಯನ್ನು ಕಲ್ಯಾಣ ನಾಡಿನ ಕಲಾವಿದರ ತಂಡ ತೆರೆಯಮೇಲೆ ತರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಶರಣರ ನಾಡಿನ ಮಹಾತತ್ವಜ್ಞಾನಿ ಕಡಕೋಳ ಮಡಿವಾಳೇಶ್ವರರ ಜೀವನಾಧಾರಿತ ಚಿತ್ರ ಮಾಡಬೇಕು ಎಂಬ ಮಹದಾಸೆ ಹೊತ್ತ ನಿದೇರ್ಶಕ ಶಿವುಕುಮಾರ ತೇಲಿ ಅವರ ನಾಲ್ಕು ವರ್ಷದ ಶ್ರಮದ ಫಲವಾಗಿ ಮಾ.೫ ರಂದು ಸಿನೆಮಾ ಬಿಡುಗಡೆಯಾಗುತ್ತಿದೆ. ಶರಣ ಮಡಿವಾಳೇಶನ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಇದು ನನಗೆ ಸಿಕ್ಕ ಮೊದಲ ಅವಕಾಶವಾಗಿದ್ದು, ಸ್ಥಳೀಯ ಕಲಾವಿದರು ಮತ್ತು ಸ್ಥಳೀಯ ದೃಶ್ಯಗಳನ್ನು ಸಿನೆಮಾದಲ್ಲಿ ಕಾಣಬಹುದಾಗಿದೆ. ರಾಜ್ಯದ ಜನರು ಸಿನೆಮಾ ನೋಡಿ ನಮ್ಮನ್ನು ಆಶೀರ್ವದಿಸುತ್ತಾರೆಂಬ ಭರವಸೆ ನನಗಿದೆ. -ಗುರುಪ್ರಸಾದ ಶಾಸ್ತ್ರೀ ಸನ್ನತಿ. ನಾಯಕ ನಟ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here