ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕರು ಹಾಗೂ ಶಿವಯೋಗ ಮಂದಿರ ನಿರ್ಮಾತೃರು ಪೂಜ್ಯನೀಯ ಪರಮ ಶಿವಯೋಗಿ ಹಾನಗಲ್ ಗುರು ಕುಮಾರ ಮಹಾಶಿವಯೋಗಿಗಳ ಪುಣ್ಯ ಸ್ಮರಣೆಯನ್ನು ಕಲಬರುಗಿ ಜಿಲ್ಲಾ ವೀರಶೈವ ಮಹಾಸಭಾದ ವತಿಯಿಂದ ಆಚರಿಸಲಾಯಿತು.
ಜಿಲ್ಲಾ ಅಧ್ಯಕ್ಷ ಡಾ:ಶರಣಕುಮಾರ ಮೋದಿ ಅವರು ಪೂಜ್ಯರ ಭಾವಚಿತ್ರಕ್ಕೆ ಮಾಲಾಪರ್ಣೆಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಡಾ: ಶರಣ ಬಿ.ಪಾಟೀಲ. ಪದಾಧಿಕಾರಿಗಳಾದ ಸಿದ್ದುಗೌಡ ಅಫಜಲಪೂರಕರ್, ಗೌರಿ ಚಿಚಕೋಟೆ, ಶೀಲಾ ಮುತ್ತಿನ್, ಸೋಮಶೇಖರ್ ಹಿರೇಮಠ, ಮಚಂದ್ರನಾಥ ಮೂಲಗೆ, ಡಾ.ನಾಗವೇಣಿ ಪಾಟೀಲ ರೇವೂರ, ನಾಗಲಿಂಗಯ್ಯ ಮಠಪತಿ, ಭೀಮಾಶಂಕರ ಮೀಟೇಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.