ಸುರಪುರ : ಬಂಧಿಖಾನೆ ಸಿಬ್ಬಂದಿ ಕುಟುಂಬ ಕಲ್ಯಾಣ ನಿಧಿ ಕಾರ್ಯಕ್ರಮ

1
47

ಸುರಪುರ: ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲವ ನಿರ್ವಹಿಸಬೇಕಾದ ಅನಿವಾರ್ಯತೆ ಇರುವ ಕೆಲವೊಂದು ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಒತ್ತಡಮಯ ಕರ್ತವ್ಯದ ಮಧ್ಯೆ ಅವರ ಎಲ್ಲಾ ಕುಟುಂಬ ವರ್ಗದವರು ಒಂದು ಕಡೆ ಸೇರಿ ಪರಸ್ಪರ ಭೇಟಿಯಾಗುವ ಇಂತಹ ಕಾರ್ಯಕ್ರಮಗಳಿಂದ ಒಬ್ಬರಿಗೊಬ್ಬರು ಮಾತನಾಡಿದಾಗ ಮನಸ್ಸು ಹಗುರಗೊಳ್ಳುವುದು ಎಂದು ಇಲ್ಲಿನ ಜೆಎಂಎಫ್‌ಸಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಚಿದಾನಂದ ಬಡಿಗೇರ ಹೇಳಿದರು.

ನಗರದ ಬಂಧಿಖಾನೆ ಬಳಿ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರಾಗೃಹ ಇಲಾಖೆಯ ಸಿಬ್ಬಂದಿ ಕುಟುಂಬ ಕಲ್ಯಾಣ ನಿಧಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿ ಕೊರೋನಾ ಸೋಂಕು ತಡೆಯಲು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಹೇಳಲಾಯಿತು.

Contact Your\'s Advertisement; 9902492681

ಮಹಿಳಾ ಸ್ವ-ಸಹಾಯ ಗುಂಪುಗಳ ಬಲವರ್ಧನೆಗೆ ಯೋಜನೆಗಳು ಜಾರಿ: ಶಶಿಕಲಾ ಜೊಲ್ಲೆ

ಸರಕಾರದ ಕೆಲವೊಂದು ಇಲಾಖೆಗಳಲ್ಲಿ ನೌಕರರು ತಾವು ನೌಕರಿಗೆ ಸೇರಿದಾಗಿನಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೆಲಸವನ್ನು ನಿರ್ವಹಿಸಬೇಕಾಗುತ್ತದೆ ಅಂತಹ ಇಲಾಖೆಗಳಲ್ಲೊಂದಾಗಿರುವ ಬಂಧಿಖಾನೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ತಮ್ಮ ದಿನನಿತ್ಯದ ಕರ್ತವ್ಯದ ಒತ್ತಡ ಮಧ್ಯೆ ಮನಸ್ಸು ಹಗುರವಾಗಲು ಹಾಗೂ ನಮ್ಮತನವನ್ನು ಮರುಕಳಿಸಲು ಇಂತಹ ಸಭೆ ಸಮಾರಂಭಗಳು ತುಂಬಾ ಅವಶ್ಯಕ ಎಂದ ಅವರು ಹೇಳಿದರು, ಇಲಾಖೆಯ ನೌಕರರ ಕುಟುಂಬಗಳು ಒಂದು ಕಡೆ ಸೇರಿಕೊಂಡು ತಮ್ಮ ಸುಖ ದು:ಖಗಳನ್ನು ಹಂಚಿಕೊಳ್ಳಲು ನೆರವಾಗುವುದು ಎಂದು ಹೇಳಿದರು.

ಸುರಪುರ: ಸಾವಯವ ಕೃಷಿ ಪದ್ಧತಿ ಕುರಿತು ಸಂವಾದ ಕಾರ್ಯಕ್ರಮ

ಮುಖ್ಯ ಅತಿಥಿಗಳಾಗಿದ್ದ ಉಪ ಖಜಾನಾಧಿಕಾರಿ ಡಾ.ಎಂ.ಎಸ್.ಶಿರವಾಳ, ಮುಖಂಡರಾದ ವೇಣುಗೋಪಾಲ ನಾಯಕ ಜೇವರ್ಗಿ ಮಾತನಾಡಿದರು, ಬಂಧಿಖಾನೆ ಅಧಿಕ್ಷಕಿ ವಿಜಯಲಕ್ಷ್ಮೀ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು, ಸಹಾಯಕ ಜೈಲರುಗಳಾದ ಅರುಣಕುಮಾರ ಪಾಟೀಲ,ಪುಂಡಲೀಕ ಟಿ.ಕೆ ಉಪಸ್ಥಿತರಿದ್ದರು, ಬಂಧಿಖಾನೆ ವೀಕ್ಷಕರಾದ ಬಸವರಾಜ ನಾಯಕ ಡೊಣ್ಣಿಗೇರಿ ನಿರೂಪಿಸಿದರು ಹಾಗೂ ಪ್ರವೀಣ ತಗೋಣಿ ವಂದಿಸಿದರು.

ಈ ಸಂದರ್ಭದಲ್ಲಿ ಪಿಯುಸಿ ದ್ವಿತೀಯ ವರ್ಷದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಂಶಿಕೃಷ್ಣ ಪುಂಡಲೀಕ ಅವರಿಗೆ ೨೦ಸಾವಿರ ರೂ ಪ್ರೋತ್ಸಾಹ ಧನ ವಿತರಿಸಲಾಯಿತು, ಅಲ್ಲದೆ ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ವಿವಿಧ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here