ಸುರಪುರ: ಸಾವಯವ ಕೃಷಿ ಪದ್ಧತಿ ಕುರಿತು ಸಂವಾದ ಕಾರ್ಯಕ್ರಮ

0
130

ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಾವಯವ ಕೃಷಿ ಬಗ್ಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಸಂವಾದಕರಾಗಿ ಆಗಮಿಸಿರುವ ಮಾನವ ಸಂಪನ್ಮೂಲ ವ್ಯಕ್ತಿಗಳಾದ ಬಸ್ಸಯ್ಯ ಹಿರೇಮಠ ಇವರು ಸಾವಯವ ಕೃಷಿ ಪದ್ಧತಿ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಮಾಹತಿಯನ್ನು ನೀಡಿದರು ಮತ್ತು ಸಾವಯವ ಕೃಷಿ ಪದ್ಧತಿ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಾವಯವ ಕೃಷಿಯಿಂದ ಭೂಮಿಯು ಹೆಚ್ಚು ಇಳುವರಿಯನ್ನು ಕೊಡುವ ಮೂಲಕ ಆಧುನಿಕ ಜಗತ್ತಿನಲ್ಲಿ ಹಲವು ಕಾಯಿಲೆಗಳು ನಿವಾರಣೆಗೆ ಮತ್ತು ಈಗಿನ ಮಕ್ಕಳ ಆರೋಗ್ಯ ದೃಷ್ಠಿಯಿಂದ ಸಾವಯವ ಕೃಷಿ ಪದ್ದತಿಯು ಪೂರಕವಾಗಿದೆ ಹೇಳಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿದ್ದ ಡಾ.ರವೀಂದ್ರಕುಮಾರ ಗುಂಡಪ್ಪಗೋಡ ಕೃಷಿ ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ ಇವರು ಮಾತನಾಡಿ, ನುಗ್ಗೆ ಗಿಡದ ತಪ್ಪಲು ಸೇವಿಸುವುದರಿಂದ ಹಲವು ಕಾಯಿಲೆಗಳಿಗೆ ಉತ್ತಮ ಔಷಧವಾಗಿದೆ. ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ನುಗ್ಗೆಯ ಪೌಡರ ಅವಶ್ಯಕವಾಗಿದೆ ಎಂದು ಹೇಳಿದರು. ನುಗ್ಗೆ ಕಾಯಿ ಊಟದಲ್ಲಿ ಬಳಸುವುದರಿಂದ ಕೀಲು ಸಂಬಂದಿತ ಕಾಯಿಲೆಗಳು ಮತ್ತು ಕ್ಯಾನಸರ್‌ನಂತ ಮಾರಕ ಕಾಯಿಲೆಗಳಿಂದ ಗುಣಮುಖರಾಗುತ್ತಾರೆ ಎಂದು ಹೇಳಿದರು.

ಇನ್ನೊರ್ವ ಮುಖ್ಯ ಅತಿಥಿಗಳಾಗಿ ಚನ್ನಬಸವ ಹಿರೇಮಠ ವೇದಿಕೆ ಮೇಲಿದ್ದರು. ದೊಡ್ಡಪ್ಪ ಎಸ್ ನಿಷ್ಠಿ ಅಧ್ಯಕ್ಷತೆ ವಹಿಸಿದ್ದರು, ಮೋಹನ ರೆಡ್ಡಿ ದೇಸಾಯಿ ನಿರೂಪಿಸಿದರು,ಪ್ರಾಂಶುಪಾಲ ಡಾ. ರವೀಂದ್ರಕುಮಾರ ನಾಗರಾಳೆ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಭೋಧಕ ಮತ್ತು ಭೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here