ಜೇವರ್ಗಿ: ತಾಲ್ಲೂಕಿನ ಹರನೂರ್ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಹನುಮಾನ್ ಮಂದಿರದ ಉದ್ಘಾಟನೆ ಹಾಗೂ ಶ್ರೀ ಶ್ರೀಶೈಲ್ ಸೂರ್ಯಸಿಂಹಾಸನಾಧಿಶ್ವರ್ ಜಗದ್ಗುರು ಡಾ. ಚನ್ನಸಿದ್ಧರಾಮ್ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಸಭೆಯು ಜೂನ್ ೨೭ರಂದು ಬೆಳಿಗ್ಗೆ ೧೦ ಗಂಟೆಗೆ ಜರುಗಲಿದೆ ಎಂದು ಪಂಚಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗೂಡಕರ ತಿಳಿಸಿದ್ದಾರೆ.
ಪ್ರತಿ ದಿವಸ ರಾತ್ರಿ ೮ ಗಂಟೆಗೆ ಶ್ರೀ ದೇವಿಯ ಮಹಾ ಪುರಾಣ ಪ್ರಾರಂಭವಾಗಿದ್ದು, ೨೮ರಂದು ಮುಕ್ತಾಯಗೊಳ್ಳುವುದು. ಶಕಾಪೂರದ ಸದ್ಗುರು ವಿಶ್ವಾರಾಧ್ಯರ ತಪೋವನ ಮಠದ ಡಾ. ಸಿದ್ಧರಾಮ್ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗುವವು. ಕಡಿಕೋಳ ಮಠದ ರುದ್ರಮುನಿ ಶಿವಾಚಾರ್ಯರು ನೇತೃತ್ವ ವಹಿಸುವರು. ಪಾಳಾದ ಡಾ. ಗುರುಮೂರ್ತಿ ಶಿವಾಚಾರ್ಯರು ಹಾಗೂ ಆಂದೋಲಾದ ಕರುಣೇಶ್ವರ್ ಮಠದ ಸಿದ್ಧಲಿಂಗ್ ಮಹಾಸ್ವಾಮಿಗಳು ನುಡಿನೈವೈದ್ಯ ಜರುಗುವುದು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಶಾಸಕರಾದ ಡಾ. ಅಜಯಸಿಂಗ್, ರಾಜಕುಮಾರ್ ತೇಲ್ಕೂರ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಜೆಡಿ(ಎಸ್) ಮುಖಂಡ ಕೇದಾರಲಿಂಗಯ್ಯ ಹಿರೇಮಠ್, ರಮೇಶ್ ಕುಲಕರ್ಣಿ, ರಾಜಶೇಖರ್ ಶೀರಿ, ಶಿವರಾಜ್ ಪಾಟೀಲ್ ರದ್ದೇವಾಡಿ, ದುಂಡಪ್ಪ ಸಾಹು, ರೇವಣಸಿದ್ದಪ್ಪ ಂಕಾಲಿ, ಶ್ರೀಮತಿ ಕಮಲಾಬಾಯಿ ಬಡಿಗೇರಾ, ಶಾಂತಪ್ಪ ಕೂಡಿ ಹೆಚ್ಚಿನ ಸಂಖೆಯಲ್ಲಿ ಹರಗುರು ಚರಮೂರ್ತಿ, ರಾಜಕೀಯ ಮುಂಖಡರು ಕಾರ್ಯಕ್ರಮಕ್ಕೆ ಪಾಲ್ಗೋಳ್ಳುವರು ಅವರು ತಿಳಿಸಿದ್ದಾರೆ.