ಮಹಿಳೆಯರ ಆರೋಗ್ಯವೇ ದೇಶದ ಭಾಗ್ಯ: ಡಾ. ರಾಜೇಶ್ರೀ

1
48

ಕಲಬುರಗಿ: ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದರ ಮುಖಾಂತರ ಮುಂದಿನ ದಿನಗಳಲ್ಲಿ ಬರಬಹುದಾದ ಅನೇಕ ಮಾರಕ ರೋಗಗಳನ್ನು ತಡೆಗಟ್ಟವುದು ತುಂಬಾ ಪ್ರಾಮುಖ್ಯತೆ ಹೊಂದಿದೆ ಎಂದು ನಗರದ ಪ್ರತಿಷ್ಠಿತ ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞೆ ಡಾ. ರಾಜೇಶ್ರೀ ಪಾಲಾಡಿ ಅವರು ಅಭಿಪ್ರಾಯಪಟ್ಟರು.

ನಗರದ ಆದಿತ್ಯ ಮಲ್ಟಿಸ್ಪೇಷಾಲಿಟಿ ಆಸ್ಪತ್ರೇಯಲ್ಲಿ ಇನ್ನರ್ ವ್ಹೀಲ್ ಕ್ಲಬ್ಸ್ ಆಫ್ ಗುಲಬರ್ಗಾದ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರಾರ್ಥಿಗಳನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು, ಕ್ಯಾನ್ಸರ್‌ನಂತಹ ಮಾರಕ ರೋಗಗಳು, ಗ್ರಂಥಿ ಸಮಸ್ಯೆಗಳು, ಋತುಚಕ್ರ, ಋತುಬಂಧ, ಬೊಜ್ಜು ಕುರಿತು ಮಹಿಳೆಯರು ವಹಿಸಬೇಕಾದ ಜಾಗೃತಿ ಕುರಿತು ವಿವರಿಸಿದರು.

Contact Your\'s Advertisement; 9902492681

ಸುಸ್ಥಿರ ಅಭಿವೃದ್ಧಿ ಪರ ಬಜೆಟ್: ಶಾಸಕ ಗುತ್ತೇದಾರ

ಹೊಸದಾಗಿ ಲಭ್ಯವಿರುವ ಸರ್ವರಿಕ್ಸ್ ವಾಕ್ಸಿನ್ ಮುಖಾಂತರ ಸರ್ವೆಕಲ್ ಕ್ಯಾನ್ಸರ್‌ನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು. ೧೨ನೇ ವಯಸ್ಸಿನಿಂದ ೪೦ನೇ ವಯಸ್ಸಿನ ಮಹಿಳೆಯರು ಈ ವಾಕ್ಸೀನನ್ನು ಪಡೆಯಬಹುದು ಎಂದರು.

ಥೈರಾಡ್ ಸಮಸ್ಯೆ, ಅದರ ಆರಂಭಿಕ ಲಕ್ಷಣಗಳು, ವಿಟಮಿನ್ ಕೊರತೆ ಮುಂತಾದ ಸಮಸ್ಯೆಗಳ ನಿವಾರಣಾ ಉಪಾಯಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಡಾ. ವಿಶ್ವರಾಜ ತಡಕಲ್ ಅವರು ಮತನಾಡುತ್ತಾ, ಮಹಿಳೆಯರು ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಪಡುವುದರ ಅಗತ್ಯ ಕುರಿತು ತಿಳಿಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ನ್ಯಾಯ ಮತ್ತು ಒಗ್ಗೂಡುವಿಕೆ ಕಾರ್ಯಕ್ರಮ

ಡಾ. ಲವಕುಮಾರ ಲೋಯಾ ಮಾತನಾಡುತ್ತಾ ಅವರು, ಮೂಳೆಗಳ ಆರೋಗ್ಯ ಕಾಲಕ್ರಮೇಣ ಹೇಗೆ ಮಹಿಳೆಯರನ್ನು ಕಾಡುವುದು, ವಯಸ್ಸಾದಂತೆ ಸಾಂದ್ರತೆ ಕಡಿಮೆಯಾಗಿ ಉಂಟಾಗುವ ಸಮಸ್ಯೆಗಳ ಬಗ್ಗೆ ಸವಿಸ್ತಾರವಾಗಿ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here