ಕಲಬುರಗಿ: ನಗರದ ಗೋಲ್ಡ್ ಹಬ್ ನ ೪ನೇ ಮಹಡಿಯಲ್ಲಿ ಮಹಿಳಾ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಇನ್ನರವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿ ವತಿಯಿಂದ “ಸನ್ ಸಿಟಿ ಉತ್ಸವ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ”ವನ್ನು ರೋಟರಿ ಕ್ಲಬ್ ಆಫ್ ಗುಲಬರ್ಗಾ ಮಿಡಟೌನ್ ಅಧ್ಯಕ್ಷೆ ಡಾ. ಸುಧಾ ಹಾಲಕಾಯಿ ಉದ್ಘಾಟಿಸಿದರು.
ಲಕ್ಷ್ಮೀ ದತ್ತಾತ್ರೇಯ ಪಾಟೀಲ ರೇವೂರ, ಸುಶ್ಮಿತಾ ಮಾರ್ಟಿನ್, ಪ್ರಿಯಾಂಕ, ಇನ್ನರವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿಯ ಅಧ್ಯಕ್ಷೆ ಸಪ್ನಾ ಲೋಯಾ, ಇನ್ನರವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿಯ ಕಾರ್ಯದರ್ಶಿ ಯೋಗಿತಾ ಗಿಲ್ಡಾ, ಖಜಾಂಚಿ ಸುನೀತಾ ಬೋರಾ, ಉಪಾಧ್ಯಕ್ಷೆ ಪಲ್ಲವಿ ಮುಕ್ಕಾ, ಮಾಜಿ ಅಧ್ಯಕ್ಷರಾದ ಸಪ್ನಾ ದೇಶಪಾಂಡೆ, ಪ್ರಿಯಾ ಕಾವೇರಿ, ಶ್ವೇತಾ ಎಂ.ಜಿ., ನಿರ್ದೇಶಕರಾದ ವಿಜಯಲಕ್ಷ್ಮೀ ರೆಡ್ಡಿ, ಶೀತಲ್ ಗಿಲ್ಡಾ, ರೋಟರಿ- ಕೋ ಆರ್ಡಿನೇಟರ್ ಮಲ್ಲಿಕಾರ್ಜುನ ಬಿರಾದಾರ ಇದ್ದರು.