ಸುರಪುರ: ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಡಿಸಿರುವ ಈಬಾರಿಯ ಬಜೆಟ್ ತೀವ್ರ ನಿರಾಶದಾಯಕವಾಗಿದೆ ಎಂದು ನಿವೃತ್ತ ಎಸ್ಪಿ ಹಾಗು ನೊಂದಾಯಿತ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದ ಗೌರವಾಧ್ಯಕ್ಷರಾದ ಚಂದ್ರಕಾಂತ ಭಂಡಾರೆಯವರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು,ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮಂಡಳಿಯಿಂದ ಸರಕಾರಕ್ಕೆ ಮನವಿ ಮಾಡಿಕೊಂಡಾಗ ೧೯೯೫ ರಿಂದ ೨೦೦೦ ವರೆಗಿನ ಶಿಕ್ಷಣ ಸಂಸ್ಥೆಗಳಿಗೆ ಅನುದಾನಕ್ಕೊಳಪಡಿಸುವ ಭರವಸೆಯನ್ನು ನೀಡಿದ್ದರು,ಆದರೆ ಈಗ ಮಂಡಿಸಿರುವ ಬಜೆಟ್ಲ್ಲಿ ಈ ನಮ್ಮ ಬೇಡಿಕೆಗೆ ಯಾವುದೇ ಆದ್ಯತೆ ನೀಡದೆ ಅನ್ಯಾಯ ಮಾಡಿದ್ದಾರೆ.ಶಿಕ್ಷಣಕ್ಕೆ ಒತ್ತು ನೀಡದ ಈ ಬಜೆಟ್ ತೀವ್ರ ನಿರಾಶಾದಾತಕ ಬಜೆಟಾಗಿದೆ ಎಂದಿದ್ದಾರೆ.