ಮಹಿಳಾ ದಿನಾಚರಣೆ ನಿಮಿತ್ತ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

0
31

ಕಲಬುರಗಿ: ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ತಿಮ್ಮಾಪೂರಿ ಚೌಕನಲ್ಲಿ (ಕಲಬುರಗಿ) ದೆಹಲಿ ರೈತರ ಹೋರಾಟ ಹಾಗೂ ಎಲ್ಲಾ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಗೆ ಕರೆಯನ್ನು ನೀಡುತ್ತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಎಐಎಂಎಸ್‌ಎಸ್ (ಮಹಿಳಾ ಸಾಂಸ್ಕೃತಿಕ ಸಂಘಟನೆ) ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಗುಂಡಮ್ಮ ಮಡಿವಾಳ ಮಾತನಾಡಿ ಪ್ರತಿವರ್ಷವೂ ಸಹ ಅಂತರಾಷ್ಟ್ರೀಯ ಮಹಿಳಾ ದಿನವೂ ನಮ್ಮೆಲರನ್ನೂ ಹೊಸ ಹುರುಪಿನೊಂದಿಗೆ, ಒಂದೆಡೆ ಪ್ರಸ್ತುತ ಪುರುಷ ಪ್ರಧಾನ ಸಮಾಜ ಒಡ್ಡುತ್ತಿರುವ ಸವಾಲುಗಳ ವಿರುದ್ಧ ಮತ್ತೊಂಡೆದೆ ಬಂಡವಾಡ ಶಾಹಿ ವ್ಯವಸ್ಥೆಯಲ್ಲಿನ ಅಸಮಾನತೆ, ಬೆಲೆ ಏರಿಕೆ, ನಿರುದ್ಯೋಗ, ನಾಗರಿಕ ಹಕ್ಕುಗಳ ಹಗರಣ ಹೀಗೆ ಹತ್ತು ಹಲವು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಪ್ರೇರೆಪಿಸುತ್ತದೆ.

Contact Your\'s Advertisement; 9902492681

ಇಂದು ದೇಶದಾದ್ಯಂತ ಒಂದಡೆ ಮಹಿಳೆಯರ ಮೇಲೆ ಎಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ಹಾಗೂ ಮತ್ತೊಂದಡೆ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಐತಿಹಾಸಿಕ ಹೋರಾಟದಲ್ಲಿ ಹಾಗೂ ಹಿಂದಿನ ಸಂದರ್ಭದ ಎಲ್ಲಾ ಬೆಲೆ ಏರಿಕೆಯ ವಿರುದ್ಧ ಇನ್ನಿತರ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟದಲ್ಲಿ ಸಕ್ರಿಯ ಪಾತ್ರವಹಿಸಿರುವ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಇಡಿ ಮಹಿಳಾ ಸಮುದಾಯಕ್ಕೆ ಉನ್ನತ ಹೋರಾಟಗಳಿಗೆ ಸಜ್ಜಾಗಲು ಮಹಿಳಾ ದಿನದ ಸಂದರ್ಭದಲ್ಲಿ ಕರೆನೀಡುತ್ತಿದೆ.

ಮಹೀಳೆಯರ ಸ್ವಾತಂತ್ರ ಸಮಾನತೆಗೆ ಅಡಚಣೆಯಾಗಿರುವ ಉಳಿಗಮಾನ್ಯ ಮೌಲ್ಯ ಮತ್ತು ರೂಡಿಗಳ ಪ್ರತಿಯಾಗಿ ಪ್ರಜಾತಾಂತ್ರಿಕ ವಿಚಾರಗಳನ್ನು ಮತ್ತು ಮೌಲ್ಯಗಳನ್ನು ಸ್ಥಾಪಿಸಬೇಕಾಗಿದೆ. ನವೋದಯದ ಮಹಾನಚೇತನಗಳಾದ ರಾಜರಾಮ ಮೋಹನರಾಯ್, ಈಶ್ವರಚಂದ್ರ ವಿದ್ಯಾಸಾಗರ, ಜ್ಯೋತಿಬಾ ಫೂಲೆ, ಸಾವಿತ್ರಿಬಾಯಿ ಫೂಲೆ, ಸುಬ್ರಮಣ್ಯ ಭಾರತಿ ಮುಂತಾದ ಅನೇಕ ವ್ಯಕ್ತಿಗಳು ನಮ್ಮ ಅದರ್ಶವಾಗಬೇಕು ಎಂದು ಹೇಳಿದರು.

ಜಿಲ್ಲಾ ಸಕ್ರೇಟ್ರಿಯೇಟ ಸದಸ್ಯರಲ್ಲಿ ಒಬ್ಬರಾದ ರಾಧ ಮಾತನಾಡಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಎಲ್ಲಾ ಮಹಿಳೆಯರು ಅತ್ಯಂತ ಬಾವ ಪೂರ್ಣವಾಗಿ ಈ ದಿನವನ್ನು ಆಚರಿಸುತ್ತಾರೆ. ಏಕೆಂದರೆ ೧೧೦ ವರ್ಷಗಳ ಹಿಂದೆ ೧೯೦೮ ರಲ್ಲಿ ಅಮೇರಿಕದಲ್ಲಿ ಸಿದ್ಧ ಉಡುಕುಗಳ ಕಾರ್ಖಾನೆಗಳಲ್ಲಿ ದುಡಿಯುವ ಸುಮಾರು ೨೦ ರಿಂದ ೩೦ ಸಾವಿರ ಮಹಿಳಾ ಕಾರ್ಮಿಕರು ಕೊರೆಯುವ ಚಳಿಯನ್ನು ಲೆಕ್ಕಿಸದೆ ಉತ್ತಮ ದುಡಿಯುವ ಪರಿಸ್ಥಿತಿಗೆ ಒತ್ತಾಯಿಸಿ, ಸತತವಾಗಿ ೧೩ವಾರಗಳ ಕಾಲ ಹೋರಾಟ ನಡಿಸಿ, ರಕ್ತಹರಿಸಿದರು, ಅನೇಕರು ಹುತಾತ್ಮರಾದರು. ನಂತರ ೮ಗಂಟೆಗಳ ದುಡಿಮೆಯ ಅವಧಿ ಉತ್ತಮ ದುಡಿಯುವ ಪರಿಸ್ಥಿತಿ, ಹೆರಿಗೆ ರಜೆ, ಇತ್ಯಾದಿ ಹಕ್ಕುಗಳನ್ನು ಪಡೆದರು.

ಈ ಹೋರಾಟದಿಂದ ಸ್ಪೂರ್ತಿ ಪಡೆದ ಇಡಿ ವಿಶ್ವದಾದ್ಯಂತ ಇನ್ನೂ ಅನೇಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಮಾಜವಾದಿ ನಾಯಕಿಯಾದ ಕ್ಲಾರಾ ಜೆಟ್ಕಿನ್ರವರು ಮಾರ್ಚ ೮ನ್ನು ಮಹಿಳಾ ದಿನವಾಗಿ ಆಚರಿಸಬೇಕೆಂದು ೧೯೧೦ ರಲ್ಲಿ ಡೆನ್ಮಾರ್ಕನ ಕೂಪೆನ್ ಹೆಗನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನದಲ್ಲಿ ಕರೆ ನೀಡಿದರು. ಅಂದಿನಿಂದ ಇಂದಿನವರೆಗೂ ವಿಶ್ವದಾದ್ಯಂತ ಮಹಿಳೆಯರು ಈ ದಿನವನ್ನು ಹೋರಾರಾಟದ ದಿನವನ್ನಾಗಿ ಆಚರಿಸಿದ್ದಾರೆ.

ಇಂದು ಮೂರು ತಿಂಗಳುಗಳಿಂದ ದೆಹಲಿಯಲ್ಲಿ ರೈತರು ಹೋರಾಟನಿರತರಾಗಿದ್ದು ಹಾಗೂ ಈ ಕರೋನದ ಮಹಾಮಾರಿಯಿಂದ ಜನರ ಜೀವನ ತತ್ತರಿಸಿದ್ದು ಹಲವಾರು ವರ್ಗದ ಜನರು ಉದ್ಯೋಗ ಕಳೆದುಕೊಂಡಿದ್ದು ಜೀವನ ನಡೆಸಲು ಆಗದ ಸಂಕಷ್ಟದಲ್ಲಿದ್ದಾರೆ. ಅದರ ಮೇಲೆ ಬರೆ ಎಳೆಯುವಂತೆ ಇಂದಿನ ಕೇಂದ್ರ ಸರ್ಕಾರವು ಎಲ್ಲಾ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿದ್ದು ಜನರ ಜೀವನ ಅದೋಗತಿಗೆ ಇಳಿದಿದೆ. ಇಂದು ಎಲ್ಲಾ ಜನ ಸಾಮಾನ್ಯರು ಒಗ್ಗಟ್ಟಾಗಿ ಈ ಮಹಿಳಾ ದಿನದ ಹೋರಾಟವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ನಮ್ಮ ಎಲ್ಲಾ ಸಮಸ್ಯೆಗಳಿಗೆ ಹೋರಾಟವೆ ದಾರಿದೀಪವಾಗಬೇಕು ಎಂದು ಹೇಳಿದರು.

ಎಐಎಂಎಸ್‌ಎಸ್ ಕಾರ್ಯದರ್ಶಿ ಕಾಮ್ರೇಡ ಗೌರಮ್ಮ ಸಿ.ಕೆ. ಹಾಗೂ ರೂಪಾ, ಸಾಬಮ್ಮ, ಮಹಾದೇವಿ ಎಂ., ಶರಣಮ್ಮ, ಜಯಶ್ರೀ, ರೇಣುಕಾ, ಗೀತಾ, ಕಲಾವತಿ, ಗುಂಡಮ್ಮ ಮುಂತಾದವರು ಹೋರಾಟದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here