ತ್ರಿವಿಧದಾಸೋಹಿ ಶ್ರೀ ಮಹಾಂತಪ್ಪಗಳವರು

1
43

ಕಲಬುರಗಿ: ಬಸವಣ್ಣ ಈಧರೆಗೆ ಕಾರಣಿಕ ಶಿಶುವಾಗಿ ಉದಯಿಸಿದನು. ಈ ಭೂಮಿಗೆ ಮಾದರಸ-ಮಾದಲಾಬಿಕೆಯರ ಮಗನಾಗಿ ಜನಿಸಿದ ಬಸವಣ್ಣ ಭಕ್ತಿ ಭಂಡಾರಿಯಾಗಿ, ಅನುಭವ ಮಂಟಪದರೂವಾರಿಯಾಗಿ, ಬಿಜ್ಜಳನ ಮಂತ್ರಿಯಾಗಿ ಬೆಳಗುತ್ತಾನೆ. ಕಾಯಕ- ದಾಸೋಹಗಳ ವಿನೂತನಕಲ್ಪನೆಯನ್ನುಜಗತ್ತಿಗೆಕೊಟ್ಟ ಶ್ರೇಯಸ್ಸು ಬಸವಣ್ಣನಿಗೆ ಸಲ್ಲುತ್ತದೆ.

ಬಸವ ಸಮಿತಿಯಅನುಭವ ಮಂಟಪದಲ್ಲಿ ಲಿಂ. ಸಿದ್ರಾಮಪ್ಪ ಸಿದ್ಧಬಸಪ್ಪಅಂಗಡಿಇವರ ಸ್ಮರಣಾರ್ಥಅವಿರಿನ ಮನೆ ೬೬೦ ನೆಯದತ್ತಿಕಾರ್ಯಕ್ರಮದಲ್ಲಿ ಲಿಂ. ಪೂಜ್ಯಶ್ರೀ ಮ.ನಿ.ಪ್ರ. ಮಹಾಂತಪ್ಪಗಳವರ ಜೀವನ-ಸಾಧನೆ’ ಎಂಬ ವಿಷಯದ ಮೇಲೆ ಅನುಭಾವ ನೀಡುತ್ತಾ ಮಾತನಾಡಿದಧಾರವಾಡ ಮುರುಘಾ ಮಠದ ಪೂಜ್ಯಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮೀಜಿಗಳು ಬಸವಣ್ಣನವರ ಹನ್ನೆರಡನೆಯ ಶತಮಾನದಲ್ಲಿಅನುಭವ ಮಂಟಪ ಸ್ಥಾಪಿಸಿ ಸರ್ವಜನಾಂಗದವರನ್ನು ತನ್ನಲ್ಲಿ ಇಂಬಿಟ್ಟುಕೊಂಡು ಸರ್ವಸಮಾನತೆಯಆಧಾರದ ಮೇಲೆ ಕಾಯಕ ದಾಸೋಹಗಳ ಕ್ರಾಂತಿಯನ್ನು ಬಿತ್ತಿದ್ದು ಇಂದಿಗೂ ಅಭೂತಪೂರ್ವ ಸಂಗತಿ.ಇಂತಹ ಪರಂಪರೆಯು ೧೨ ನೆಯ ಶತಮಾನದಿಂದ ಇಂದಿನ ವರೆಗೂಹಲವು ಮಠ-ಮಾನ್ಯಗಳಲ್ಲಿ ಉಳಿದುಕೊಂಡು ಬಂದಿದೆ.ಅಂತಹ ಮಠಗಳಲ್ಲಿ ಧಾರವಾಡದ ಮುರುಘಾಮಠವೂಒಂದು.ಉತ್ತರಕರ್ನಾಟಕದಲ್ಲಿತ್ರಿವಿಧದಾಸೋಹಕ್ಕೆಧಾರವಾಡದ ಮುರುಘಾಮಠವಾದರೆ ದಕ್ಷಿಣಕರ್ನಾಟಕದಲ್ಲಿ ಸಿದ್ಧಗಂಗಾ ಮಠವುತ್ರಿವಿಧದಾಸೋಹಕ್ಕೆಹೆಸರುವಾಸಿ.

Contact Your\'s Advertisement; 9902492681

ಮಹಿಳಾ ಸಾಹಿತಿಯ ಸನ್ಮಾನಿಸಿ ಬಹುತ್ವ ಭೂಮಿಕೆ ಮಹಿಳಾ ದಿನ ಆಚರಣೆ

ಈ ಎರಡು ಮಠಗಳು ದಾಸೋಹದಎರಡು ಕಣ್ಣಗಳಿದ್ದಂತೆ.ಧಾರವಾಡದ ಮುರುಘಾಮಠದಇತಿಹಾಸ ಸುಮಾರು ೩೦೦ ವರ್ಷಗಳ ಇತಿಹಾಸ ಪರಂಪರೆಗೆ ಸೇರಿದ್ದು. ಈ ಮಠಕ್ಕೆ ಕಾಲ-ಕಾಲಕ್ಕೆ ಅನೇಕ ಮಠಾಧೀಶರುದಾಸೋಹ ಪರಂಪರೆಯ ಸೂತ್ರ ಹಿಡಿದು ಮುನ್ನಡೆಸಿರುವುದು ಐತಿಹಾಸಿಕ ಸಂಗತಿಯಾಗಿದೆ. ಇಂತಹ ದಿವ್ಯ ಪರಂಪರೆಯುಳ್ಳ ಧಾರವಾಡದ ಮುರುಘಾ ಮಠಕ್ಕೆ ೧೯೧೬ ರಲ್ಲಿ ಲಿಂ.ಮೃತ್ಯುಂಜಯ ಮಹಾಸ್ವಾಮಿಗಳು ಚಿತ್ರದುರ್ಗದಜಯದೇವ ಜಗದ್ಗುರುಗಳ ಅಪ್ಪಣೆಯ ಮೇರೆಗೆಅಧಿಪತ್ಯವನ್ನು ವಹಿಸಿಕೊಂಡು ಕಾರ್ಯಪ್ರವೃತ್ತರಾಗುತ್ತಾರೆ.

ಮುರುಕು ಮೂರಂಕಣದ ಮುರುಘಾಮಠವನ್ನು ಭೂ ಲೋಕದ ಕೈಲಾಸವನ್ನಾಗಿಸಿದ ಶ್ರೇಯಸ್ಸು ಲಿಂ.ಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳಿಗೆ ಸಲ್ಲುತ್ತದೆ.೧೯೧೭ ರಲ್ಲಿಜಗದ್ಗುರು ಮುರುಘರಾಜೇಂದ್ರಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಚಾಲನೆ ನೀಡುತ್ತಾರೆ.ಇದು ಶತಮಾನೋತ್ಸವವನ್ನುಕಂಡಿದೆ.ಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳು.ಲಿಂಗೈಕ್ಯರಾದ ಮೇಲೆ ಶ್ರೀಮಠದ ಸೂತ್ರ ಹಿಡಿದವರು ಪೂಜ್ಯ ಮಹಾಂತಪ್ಪಗಳವರು.

ಕೆ.ಕೆ.ಆರ್.ಡಿ.ಬಿ 2 ಸಾವಿರ ಕೋಟಿ ಅನುದಾನದ ನಿರೀಕ್ಷೆಗೆ ಅಪ್ಪುಗೌಡರು ಪ್ರಯತ್ನಿಸಿಲ್ಲ: ನಾಲವಾರಕರ್ ಆಕ್ರೋಶ

ಇವರುಧಾರವಾಡಜಿಲ್ಲೆ ಕುಂದಗೋಳ ತಾಲೂಕಿನ ಪಶುಪತಿಹಾಳಗ್ರಾಮದ ಹಿರೇಮಠದ ಶಿವಸಂಗಯ್ಯನವರ ಸುಪುತ್ರರು.ಬಾಲ್ಯದಲ್ಲಿ ಮಹಾಂತೇಶನೆಂಬ ಹೆಸರಿನ ಈ ಬಾಲಕ ಪ್ರಾರಂಭದಲ್ಲಿ ಮುಳುಗುಂದ ಮಠಕ್ಕೆಉತ್ತಾರಾಧಿಕಾರಿಯಾಗಿದ್ದರು. ಈ ಬಾಲಕನನ್ನುತಮ್ಮೊಂದಿಗೆಕರೆದೊಯ್ದು ಮೃತ್ಯುಂಜಯ ಸ್ವಾಮಿಗಳು ಅವನಿಗೆ ಸರ್ವವಿಧದ ಸೌಕರ್ಯನೀಡಿ ಮರುಘಾ ಮಠದ ಉತ್ತರಾಧಿಕಾರಿಯನ್ನಾಗಿ ಮಾಡುತ್ತಾರೆ. ಮಹಾಂತೇಶ ಮಹಾಂತಸ್ವಾಮಿಯಾಗಿ ಪರಿವರ್ತನೆಯಾಗುತ್ತಾರೆ.ಈ ಸಂಸ್ಕಾರವನ್ನು ನೀಡಿದವರುಅಥಣಿಗಚ್ಚಿನ ಮಠದ ಮುರಘೇಂದ್ರ ಶಿವಯೋಗಿಗಳ ಪರಮಶಿಷ್ಯರಾದ ಸಿದ್ಧಲಿಂಗ ಅಪ್ಪಗಳು.

ಇದೇ ಕಾಲಕ್ಕೆ ಮುರುಘಾಮಠದ ಆದಿಪತ್ಯವೂ ಸಹ ಮಹಾಂತಪ್ಪಗಳಿಗೆ ಸಿಗುತ್ತ್ತದೆ.೧೯೬೪ ರಲ್ಲಿ ಮೃತ್ಯುಂಜಯ ಮಹಾಸ್ವಾಮಿಗಳು ಲಿಂಗೈಕ್ಯರಾದನಂತರ ಪೂಜ್ಯ ಮಹಾಂತಪ್ಪಗಳು ಶ್ರೀಮಠವನ್ನು ಸಮಾಜ ಮುಖಿಯಾನ್ನಾಗಿಸಿ.ದೀನದಲಿತರ ದೀವಿಗೆಯನ್ನಾಗಿಸುತ್ತಾರೆ. ತ್ರಿಕಾಲ ಪೂಜೆತ್ರಿವಿಧ ದಾಸೋಹಗಳಿಂದ ಜನಮನವನ್ನು ಸೂರೆಗೊಳ್ಳುತ್ತಾರೆ. ಮುರುಘಾ ಮಠಕ್ಕೆಕಾಯಕಲ್ಪ ನೀಡಿಅದನ್ನು ನಾಡಿನ ಸಾಮಾನ್ಯರಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಗಾಗಿ ಅಣಿಗೊಳಿಸುತ್ತಾರೆ.

ಬಜೆಟ್ ನಲ್ಲಿ ರಾಯಚೂರು ವಿವಿಗೆ ಕಡೆಗಣನರ: SFI  ಆಕ್ರೋಶ

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಡಾ. ಬಿ. ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ. ವೀರಣ್ಣದಂಡೆ, ಹಾಗೂ ದತ್ತಿ ದಾಸೋಹಿಗಳಾದ ಡಾ. ಜಯಶ್ರೀ ದಂಡೆ ಉಪಸ್ಥಿತ್ತರಿದ್ದರು. ಶ್ರೀ ಹೆಚ್.ಕೆ.ಉದ್ದಂಡಯ್ಯ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here