ಶಾಲೆಗೆ ಹೋಗಲು 12 ಕಿ.ಮೀ. ನಡೆದುಕೊಂಡು ಹೋಗಬೇಕು!

0
52

ಆಳಂದ: ತಾಲೂಕಿನ ಮಾದನಹಿಪ್ಪರಗಾ ಸಮೀಪದ ಚಲಗೇರಾ, ನಿಂಬಾಳ, ಝಳಕಿ, ದರ್ಗಾಶಿರೂರ, ಇಕ್ಕಳಕಿ ಗ್ರಾಮಗಳ ವಿಧ್ಯಾರ್ಥಿಗಳು ತಮ್ಮೂರಿಂದ ಮಾದನಹಿಪ್ಪರಗಾಗೆ ಬಸ್ ಪಾಸ್ ತೆಗೆದುಕೊಂಡರೂ ಶಾಲೆಯ ಸಮಯಕ್ಕೆ ಸರಿಯಾದ ಒಂದು ಬಸ್ ಇಲ್ಲದೆ ದಿನನಿತ್ಯ ನಡೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಗೊತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೂ ತಮಗೇಗೂ ಸಂಭಂಧವಿಲ್ಲವೇನೋ ಎನ್ನುವಂತೆ ವರ್ತಿಸುತ್ತಿದ್ದಾರೆ. ಇದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ವಿಧ್ಯಾರ್ಥಿಗಳ ಬಳಿ ಬಸ್ ಪಾಸ್ ಇವೆ. ಆದರೆ ಸಮಯಕ್ಕೆ ಸರಿಯಾಗಿ ಬಸ್ ಓಡಾಡುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ೧೨ ರಿಂದ ೨೦ ಕಿ.ಮೀ. ನಡೆದುಕೊಂಡು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ವಿಧ್ಯಾರ್ಥಿಗಳ ಪರಿಸ್ಥಿತಿ ನೋಡಲಾಗದೆ ಪಾಲಕರು ಶಾಲೆ ಬಿಡುವಂತೆ ಹೇಳುತ್ತಿದ್ದಾರೆ.

Contact Your\'s Advertisement; 9902492681

ರಾಜ್ಯ ಬಜೆಟ್ ರಾಜಕೀಯ ಪ್ರಹಸನ: ಎಸ್‌ಯುಸಿಐ

ಜನವರಿಯಿಂದ ಬಸ್ ಪಾಸ್ ತೆಗೆದುಕೊಂಡಿದ್ದೆವೆ. ಎರಡೂ ತಿಂಗಳಾದರೂ ಬಸ್ಸಿನಲ್ಲಿ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಚಲಗೇರಾದಿಂದ ಮಾದನಹಿಪ್ಪರಗಾ ಶಾಲೆ ೬ ಕಿ.ಮೀ. ದೂರ ದಿನಾಲೂ ೧೨ ಕಿ.ಮೀ. ನಡೆಯಬೇಕು. ಮುಂಜಾನೆ ೮:೦೦ ಘಂಟೆಗೆ ಮನೆ ಬಿಟ್ಟರೆ ಸಂಜೆ ೬:೦೦ ಘಂಟೆಗೆ ಮನೆ ಸೇರಿಕೊಳ್ಳುತ್ತೆವೆ. ಎಂದು ಚಲಗೇರಾ ಗ್ರಾಮದ ವಿಧ್ಯಾರ್ಥಿನಿಯರು ಹೇಳಿದರೆ, ೧೦ ಕಿ.ಮೀ. ದೂರ ನಿಂಬಾಳದಿಂದ ಬರುವ ವಿಧ್ಯಾರ್ಥಿಗಳು ಶಾಲೆಗೆ ಬರುವಷ್ಟರಲ್ಲಿ ಶಾಲೆ ಪ್ರಾರಂಭಗೊಂಡು ಕೆಲವು ಕ್ಲಾಸ್ ಮುಕ್ತಾಯಗೊಂಡಿರುತ್ತವೆ. ಇಕ್ಕಳಕಿ ಗ್ರಾಮದ ವಿಧ್ಯಾರ್ಥಿಗಳು ಸಂಜೆ ೭:೦೦ ಘಂಟೆಗೆ ಮನೆ ಸೇರಿಕೊಳ್ಳುತ್ತಾರೆ.

ದುಡ್ಡು ಕೊಟ್ಟು ಪಾಸ್ ಪಡೆದು ಪ್ರಯೋಜನೆ ಇಲ್ಲದಂತಾಗಿದೆ. ಈಗಾಗಲೇ ಸಂಭಂಧಪಟ್ಟ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದರೂ ಯಾವುದೇ ವ್ಯವಸ್ಥೆ ಮಾಡಿಲ್ಲವೆಂದು ವಿಧ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧ್ಯಾರ್ಥಿಗಳು ಶಿಕ್ಷಣ ಮುಂದುವರಿಸಬೇಕಾದರೆ ಬೆಳಿಗ್ಗೆ ೮:೩೦ಘಂಟೆಗೆ ನಿಂಬಾಳ ಮತ್ತು ಚಲಗೇರಾದಿಂದ ಮಾದನಹಿಪ್ಪರಗಿಗೆ ಒಂದು ಬಸ್ ಓಡಿಸಬೇಕು. ಸಂಜೆ ೪:೩೦ಕ್ಕೆ ನಿಂಬಾಳದ ಕಡೆಗೆ ಬಸ್ಸು ಓಡಿಸಬೇಕು. ಚಲಗೇರಾ ವಿಧ್ಯಾರ್ಥಿಗಳಿಗೆ ಹಾಗೂ ನಿಂಬಾಳದವರಿಗೂ ಅನುಕೂಲವಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರಿಗೆ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಇಲ್ಲವಾದಲ್ಲಿ ವಿಧ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಿಂಬರ್ಗಾ ವಲಯ ಯುವ ಹೋರಾಟಗಾರ ಹಾಗೂ ಕರ್ನಾಟಕ ರಕ್ಷಣಾ ವೇಧಿಕೆ ಅಧ್ಯಕ್ಷರಾದ ಬಸವರಾಜ ಯಳಸಂಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here