ರಾಜ್ಯ ಬಜೆಟ್ ರಾಜಕೀಯ ಪ್ರಹಸನ: ಎಸ್‌ಯುಸಿಐ

0
40

ವಾಡಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಡಿಸಿರುವ ರಾಜ್ಯ ಬಜೆಟ್ ಜನತೆ ಎದುರಿಸುತ್ತಿರುವ ಯಾವೂದೇ ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ. ಈ ಬಜೆಟ್ ಅಕ್ಷರಶಃ ರಾಜಕೀಯ ಪ್ರಹಸನದಿಂದ ಕೂಡಿದೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಆರೋಪಿಸಿದ್ದಾರೆ.

ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ತೀವ್ರವಾದ ಬೆಲೆ ಎರಿಕೆಯಿಂದ ಜನ ಕಂಗೆಟ್ಟಿದ್ದಾರೆ. ಪರಿಣಾಮ ಹೊಸ ಬಜೆಟ್‌ನಲ್ಲಿ ತೆರಿಗೆಗಳನ್ನು ಹಾಕಲಾಗಿಲ್ಲ ಎಂಬಂತೆ ಸರಕಾರ ಚಿತ್ರಿಸಿದೆ. ತೆರಿಗೆ ಕಡಿತ, ಪಡಿತರ ವಿತರಣೆಯಲ್ಲಿ ಹೆಚ್ಚಳದ ಮೂಲಕ ಜನರಿಗೆ ನೀಡಬಹುದಾದ ಅಲ್ಪ ಕ್ರಮಗಳ ಬಗ್ಗೆಯೂ ಕಾಳಜಿ ವಹಿಸಿಲ್ಲ. ಬೆಲೆ ಎರಿಕೆಗೆ ತಕ್ಕಂತೆ ಜನರ ಆದಾಯ ಹೆಚ್ಚಿಸುವ ಕ್ರಮಗಳೂ ಸಹ ಇಲ್ಲ. ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಬಹುಕಾಲದ ಬೇಡಿಕೆಗಳನ್ನು ಕಡೆಗಣಿಸಲಾಗಿದೆ. ಕನಿಷ್ಠ ಕೂಲಿಯಲ್ಲಿ ಯಾವೂದೇ ಹೆಚ್ಚಳವಿಲ್ಲ. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಕ್ಷೇತ್ರಗಳಿಗೆ ಅವಶ್ಯಕತೆಗೆ ತಕ್ಕಂತೆ ಅನುದಾನ ನೀಡಿಲ್ಲ ಎಂದು ದೂರಿದ್ದಾರೆ.

Contact Your\'s Advertisement; 9902492681

ಜಿಲ್ಲಾಧಿಕಾರಿ ಕಚೇರಿ‌ ಮುಂದೆ ವೈದ್ಯನಿಗೆ ಚಾಕಿವಿನಿಂದ ಕೊಲೆಗೆ ಯತ್ನ

ಜಾತಿ ಓಲೈಕೆ ಮೂಲಕ ಬ್ಯಾಂಕ್ ರಾಜಕಾರಣಕ್ಕೆ ಪೂರಕವಾಗಿ ಮಠಗಳಿಗೆ, ಜಾತಿ ಮಂಡಳಿಗಳಿಗೆ ಕೋಟಿಗಟ್ಟಲೆ ಅನುದಾನ ನೀಡಲಾಗಿದೆ. ಇನ್ನೊಂದೆಡೆ ಸರಕಾರದ ಮೇಲಿನ ಸಾಲದ ಹೊರೆ ತೀವ್ರವಾಗಿ ಏರುತ್ತಿದೆ. ೨.೪೩ ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ ದಾಖಲೆಯ ೭೧.೩೩೨ ಕೋಟಿ ರೂ. ಸಾಲವಿದ್ದು, ಇದರ ಬಡ್ಡಿಯನ್ನೂ ಜನರೇ ಭರಿಸಬೇಕಾಗುತ್ತದೆ. ಇಷ್ಟಾದರೂ ಉದ್ಯೋಗ ಸೃಷ್ಠಿಗೆ ಸರಿಯಾದ ಯೋಜನೆಗಳಿಲ್ಲ. ನಿರುದ್ಯೋಗಿಗಳಿಗೆ ಭತ್ತೆಯೂ ಪ್ರಕಟಿಸಿಲ್ಲ. ಸರಕಾರದ ದುಂದುವೆಚ್ಚಗಳ ತಡೆಗೆ ಸೂಕ್ತ ಕ್ರಮಗಳೂ ಕೈಗೊಂಡಿಲ್ಲ.

ನೀಡಲಾದ ಅನುದಾನಗಳ ಸಮರ್ಪಕ ಬಳಕೆಯ ಬಗ್ಗೆ ಉತ್ತರದಾಯುತ್ವವೂ ಇಲ್ಲದಿರುವುದರಿಂದ ಜನರ ಆಶೋತ್ತರಗಳ ಪ್ರತಿಬಿಂಬವಾಗುವ ಬದಲು ಬಜೆಟ್ ಎಂಬುದೇ ಒಂದು ರಾಜಕೀಯ ಗಿಮಿಕ್ ಆಗುತ್ತಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕಾಮ್ರೇಡ್ ವೀರಭದ್ರಪ್ಪ, ಜನವಿರೋಧಿ ಈ ರಾಜ್ಯ ಬಜೆಟ್ ವಿರುದ್ಧ ಹೋರಾಡಲು ಮುಂದೆ ಬರಬೇಕೆಂದು ಜನತೆಗೆ ಕರೆ ನೀಡಿದ್ದಾರೆ.

ಪ್ರಬಲ ಜಾತಿಗಳನ್ನು 2(ಎ) ಸಮುದಾಯಕ್ಕೆ ಸೇರ್ಪಡೆಗೊಳಿಸಬಾರದೆಂದು ಸಿಎಂ ಬಳಿ ನಿಯೋಗ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here