ಸುರಪುರ: ತಾಲ್ಲೂಕಿನ ಕವಡಿಮಟ್ಟಿಯಲ್ಲಿರುವ ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರ, ಕವಡಿಮಟ್ಟಿ ಮತ್ತು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಯಾದಗಿರಿ ವತಿಯಿಂದ ಕವಡಿಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಒಂದು ದಿನದ ಪಶು ವೈದ್ಯರ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಡಾ. ಅಮರೇಶ. ವೈ.ಎಸ್. ಅವರು ಯಾದಗಿರಿಯ ಸಮಗ್ರ ಕೃಷಿ ಪದ್ಧತಿಗಳು ಮತ್ತು ಪಶು ಪಾಲನಾ ಮಹತ್ವವನ್ನು ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ಕುರಿ ಹಾಗೂ ಆಡು ಸಾಕಾಣಿಕೆ ರೈತರಿಗೆ ಆದಾಯದ ಮೂಲವಿದ್ದಂತೆ ಹಾಗೂ ರೈತರು ಹೆಚ್ಚಿನ ಲಾಭಗಳಿಸಬಹುದು ಎಂದು ಹೇಳಿದರು.
ಸರಕಾರದ ಯೋಜನೆಗಳ ಅಡಿ ಅರ್ಜಿ ಸಲ್ಲಿಸಿದವರಿಗೆ ಸಾಲ ನೀಡಿ ಇಒ ಅಂಬ್ರೇಶ ಸೂಚನೆ
ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಡಾ. ಐಗಳಿ ಭುಜಬಲಿ, ಉಪ ನಿರ್ದೇಕರು, ಪಶು ಪಾಲನಾ ಇಲಾಖೆ, ಯಾದಗಿರಿ, ಇವರು ಮಾತನಾಡುತ್ತಾ ಜಾನುವಾರುಗಳ ಲಸಿಕೆ ಕಾರ್ಯಕ್ರಮಗಳು, ರಾಷ್ಟ್ರೀಯ ಕೃತಕ ಗರ್ಭದಾರಣಾ ಯೋಜನೆಗಳ ಮಹತ್ವ ಹಾಗೂ ಯುವ ಪಶು ವೈದ್ಯರು ರೈತರ ನಿಸ್ವಾರ್ಥ ಸೇವೆ ಮಾಡಬೇಕು ಹಾಗೂ ಹೊಸ ವಿಧಾನಗಳನ್ನು ಚಿಕಿತ್ಸೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಡಾ. ಚನ್ನಪ್ಪಗೌಡ ಬಿರಾದಾರ, ಅವರು ಪಶು ವೈದ್ಯರು ತಮ್ಮ ವಿಸ್ತರಣಾ ಶಿಕ್ಷಣದ ಜ್ಞಾನವನ್ನು ಬಳಿಸಿಕೊಂಡು ಯಾದಗಿರಿ ಜಿಲ್ಲೆಯಲ್ಲಿ ಪಶುಪಾಲನೆಯ ಮಹತ್ವವನ್ನು ರೈತರಿಗೆ ತಿಳಿಸಿಕೊಡಬೇಕು ಎಂದು ಕರೆ ಕೊಟ್ಟರು.ಡಾ. ಕೊಟ್ರೇಶ ಪ್ರಸಾದ್, ಅವರು ರೋಗಗಳ ಪರೀಕ್ಷೆ ಮಹತ್ವ, ಮೇವಿನ ಬೆಳೆಗಳ ಮಹತ್ವ ಮತ್ತು ರೈತರಿಗೆ ಮಾರುಕಟ್ಟೆಯ ನೇರ ಸಂಪರ್ಕ ಒದಗಿಸುವಲ್ಲಿ ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹೈದ್ರಾಬಾದನ ಎನ್.ಪಿ.ಎ.ಬಿ ಯ ವಿಜ್ಞಾನಿಗಳಾದ ಡಾ. ಪಂಕಜ್ ಸುಮನ್, ಡಾ. ಅಭಿಜಿತ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಡಾ. ಸತೀಶಕುಮಾರ ಕಾಳೆ ತಮ್ಮ ಉಪನ್ಯಾಸ ನೀಡಿದರು.
ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಪಾಡಲು ಬದ್ದ: ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಡಾ. ಶರಣಭೂಪಾಲ ರೆಡ್ಡಿ, ಅವರು ಎಮ್ಮೆ ಸಾಕಾಣಿಕೆ ಹಾಗೂ ಕೆಂಗುರ ಸಾಕಾಣಿಕೆಯ ವಿವಿದ ಆಯಾಮಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಸ್ವಾಗತವನ್ನು ಡಾ.ಸತೀಶಕುಮಾರ ಕಾಳೆ ಮಾಡಿದರು, ಡಾ. ಗುರುಪ್ರಸಾದ ವಂದನಾರ್ಪಣೆ ಹಾಗೂ ಡಾ. ಕೊಟ್ರೇಶ ಪ್ರಸಾದ್ ನಿರೂಪಿಸಿದರು ಮತ್ತು ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲಾ ಕೆ.ವಿ.ಎ ಅಧ್ಯಕ್ಷರು ಡಾ. ಶಣ್ಮುಖ ಗೊಂಗಡಿ, ಡಾ. ಸುರೇಶ ಹಚ್ಚಡ ಹಾಗೂ ೩೦ಕ್ಕೂ ಹೆಚ್ಚು ಪಶು ವೈದ್ಯರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.