ಕಲಬುರಗಿ: ಕಲ್ಯಾಣ ಕರ್ನಾಟಕ ಮಾನವ ಸಂಪ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ (ರಿ) ಕಲಬುರಗಿ ಮತ್ತು ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ (ರಿ) ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ೧೩ ರಂದು ಕಲಬುರಗಿ ರಂಗಾಯಣದಲ್ಲಿ ಕಲ್ಯಾಣ ಕರ್ನಾಟಕದ ಆಧುನಿಕ ಮತ್ತು ಸಮಕಾಲೀನ ದೃಶ್ಯಕಲೆ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ಈ ವಿಚಾರ ಸಂಕಿರಣವನ್ನು ಅಂದು ಬೆಳ್ಳಿಗೆ ೧೦:೦೦ ಗಂಟೆಗೆ ಬೆಂಗಳೂರಿನ ಹಿರಿಯ ದೃಶ್ಯಕಲಾ ಬರಹಗಾರ ಮತ್ತು ವಿಮರ್ಶಕ ಶ್ರೀ ಕೆ.ವಿ. ಸುಬ್ರಮಣ್ಯಂ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಭೀಮಾಶಂಕರ ತೆಗ್ಗಳ್ಳಿ, ಕಲಬುರಗಿ ರಂಗಾಯಣದ ನಿರ್ದೇಶಕರಾದ ಶ್ರೀ ಪ್ರಭಾಕರ ಜೋಶಿ, ಶರಣಬಸವ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಗೌರವ ಡೀನರಾದ ಡಾ. ಶಾಂತಲಾ ಬಿ. ಅಪ್ಪ ಅವರು ಆಗಮಿಸಲಿದ್ದಾರೆ. ನಗರದ ಹಿರಿಯ ಚಿತ್ರಕಲಾವಿದರಾದ ಡಾ. ಎ.ಎಸ್. ಪಾಟೀಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಪೊರೇಟ್ ಕೋಟ್ರೇಗೌಡ, ಅಂಬಿಗ ನಾಟಕಗಳು ಪ್ರದರ್ಶನ
ಬೆಳಿಗ್ಗೆ ೧೧:೩೦ ರಿಂದ ಮಧ್ಯಾಹ್ನ ೧:೦೦ ಗಂಟೆಯ ವರೆಗೆ ನಡೆಯುವ ಮೊದಲನೆಯ ಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯರೋತ್ತರ ದೃಶ್ಯಕಲಾ ಚಟುವಟಿಕೆಗಳು ಕುರಿತು ಹಿರಿಯ ಚಿತ್ರಕಲಾವಿದರಾದ ಬಸವರಾಜ ರೇ ಉಪ್ಪಿನ ಅವರು ಮಾತನಾಡಲಿದ್ದಾರೆ. ಕಲ್ಯಾಣ ಕರ್ನಾಟಕ ಆಧುನಿಕ ಮತ್ತು ಸಮಕಾಲೀನ ಚಿತ್ರಕಲೆ, ವಿಷಯದ ಕುರಿತು ಎಂ.ಎ.ಕೆ. ಕಾಲೇಜ ಆಫ್ ವಿಜ್ಯುವಲ್ ಆರ್ಟಿನ್ ಉಪನ್ಯಾಸಕರಾದ ಶ್ರೀ ಚಂದ್ರಹಾಸ್ ವಾಯ್ ಜಾಲಿಹಾಳ ಅವರು ಮಾತನಾಡಲಿದ್ದಾರೆ. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಚಿತ್ರಕಲಾವಿದರಾದ ಬಸವರಾಜ ಎಲ್. ಜಾನೆ ಅವರು ವಹಿಸಲಿದ್ದಾರೆ.
ಮಧ್ಯಾಹ್ನ ೧:೪೫ ರಿಂದ ಸಂಜೆ ೩:೩೦ ರ ವರೆಗೆ ನಡೆಯುವ ಎರಡನೇ ಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ಆಧುನಿಕ ಮತ್ತು ಸಮಕಾಲೀನ ಶಿಲ್ಪಕಲೆ ಕುರಿತು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾದ ಶ್ರೀ ನಟರಾಜ ಎಂ. ಶಿಲ್ಪಿ ಅವರು ಮಾತನಾಡಲಿದ್ದಾರೆ. ಕಲ್ಯಾಣ ಕರ್ನಾಟಕ ಆಧುನಿಕ ಮತ್ತು ಸಮಕಾಲೀನ ದೃಶ್ಯಕಲಾ ಸಾಹಿತ್ಯ ಮತ್ತು ವಿಮರ್ಶೆ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಸವರಾಜ ಕಲೆಗಾರ ಮಾತನಾಡಲಿದ್ದಾರೆ. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀ ವಿ.ಬಿ. ಬಿರಾದಾರ ಅವರ ವಹಿಸಲಿದ್ದಾರೆ.
ವಿದ್ಯಾರ್ಥಿಗೆ ಕೋವಿಡ್ ಪಾಜಿಟಿವ್: ಶಾಲಾ ವಿದ್ಯಾರ್ಥಿಗಳು ಸೇರಿ ಸಿಬ್ಬಂದಿಗಳ ಸ್ಯಾಂಪಲ್ ಸಂಗ್ರಹಕ್ಕೆ ಸೂಚನೆ
ಸಂಜೆ ೩:೩೦ ರಿಂದ ೪:೩೦ರ ವರೆಗೆ ನಡೆಯುವ ಸಮನಾಂತರ ಗೋಷ್ಠಿಯಲ್ಲಿ ಪ್ರತಿನಿಧಿಗಳು ಪ್ರಬಂಧ ಮಂಡಿಸಲಿದ್ದು, ಮುಖ್ಯ ಅತಿಥಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜ ಮಹಾಗಾಂವ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಲ್ಲಿಕಾರ್ಜುನ ಶೆಟ್ಟಿ ಭಾಗವಹಿಸಲಿದ್ದಾರೆ. ಸಮನಾಂತರ ಗೋಷ್ಠಿಯ ಅಧ್ಯಕ್ಷತೆಯನ್ನು ಇಂಡಿಯನ್ ರಾಯಲ್ ಅಕಾಡೆಮಿಯ ಮುಖ್ಯಸ್ಥರಾದ ಡಾ. ರೆಹಮಾನ್ ಪಟೇಲ್ ವಹಿಸಲಿದ್ದಾರೆ.
ಸಂಜೆ ೪:೩೦ ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ಸಾಹಿತಿಗಳು ಮತ್ತು ಅನುವಾದಕರಾದ ಡಾ. ಕಾಶಿನಾಥ ಅಂಬಲಗೆ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್‌ನ ಸದಸ್ಯರಾದ ಶ್ರೀ ಎನ್.ಎಸ್. ಹಿರೇಮಠ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ವಿಚಾರ ಸಂಕಿರಣದ ಸಂಯೋಜಕರು ಮತ್ತು ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ಪರಶುರಾಮ ಪಿ. ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.