ಕಲಬುರಗಿ: ಇಂದಿನ ದಿನಗಳು ಸ್ಪರ್ಧಾತ್ಮಕದಿಂದ ಕೂಡಿವೆ. ಶಿಕ್ಷಣ ಕ್ಷೇತ್ರ ಅಷ್ಟೇ ಅಲ್ಲದೇ ಎಲ್ಲಾ ಕ್ಷೇತ್ರದಲ್ಲಿ ಪೈಪೋಟಿ ಇದೆ. ಅದನ್ನು ಎದುರಿಸಲು ನಮ್ಮ ಯುವಕರಲ್ಲಿ ಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಾತ್ಮಕ ಪ್ರಯೋಗಗಳು ಹೆಚ್ಚಾಗಿ ನಡೆಯಬೇಕಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗಯತ್ತೇದಾರ ಹೇಳಿದರು.
ನಗರದ ಶಹಾಬಜಾರದಲ್ಲಿರುವ ಆರಾಧನ ಪಿಯು ಕಾಲೇಜಿನಲ್ಲಿ ಬುಧವಾರ ಪ್ರೊ.ಎಸ್.ಎಸ್.ಪಾಟೀಲ್ ರೇವೂರ ಅವರ ಆಲ್ ಇನ್ ಒನ್ ಸ್ಪೋಕನ್ ಮತ್ತು ಇಂಗ್ಲೀಷ್ ಗ್ರಾಮರ್ ಪುಸ್ತಕ ಲೋಕಾರ್ಪಣೆ ಗೊಳಿಸಿ ಅವರು ಮಾತನಾಡಿದರು.
ಶಾಸಕ ಪ್ರಿಯಾಂಕ ಖರ್ಗೆ ಪ್ರಕಾಶ್ ಅವರದಕರ್ ಸನ್ಮಾನ
ವಿದ್ಯಾರ್ಥಿ, ವಿಧ್ಯಾರ್ಥಿನಿಯರು ತಮ್ಮ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪಾಟೀಲರ ಈ ಪುಸ್ತಕ ವಿದ್ಯಾರ್ಥಿ/ನಿ ಸಮುದಾಯಕ್ಕೆ ಮೀಸಲಿರದೇ ವಿಶೇಷವಾಗಿ ಗ್ರಾಮೀಣದ ಬಡ ಮಕ್ಕಳಿಗೆ ಪ್ರೇರಣೆಯಾಗಲಿದೆ ಎಂದರು.
ಈ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ತರಬೇತಿ ಪಡೆಯಲು ಗ್ರಾಮೀಣ ಬಡ ಮಕ್ಕಳಿಗೆ ಹಣಕಾಸಿನ ತೊಂದರೆ ಇರುತ್ತದೆ. ಈ ನಿಟ್ಟಿನಲ್ಲಿ ಪಾಟೀಲರ ಈ ಪುಸ್ತಕ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲ ಮತ್ತು ಆದರ್ಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಿಲೆನಿಯಂ ಕಾಲೇಜಿನ ಪ್ರಾಂಶುಪಾಲ ಎಸ್.ಕೆ.ಕುಂಬಾರ, ಆರ್.ಜೆ. ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಪ್ರಲ್ಹಾದ್ ಬುರ್ಲಿ ಮಾತನಾಡಿ, ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಕನಿಯರು ಈ ಪುಸ್ತಕದ ಲಾಭ ಪಡೆಯಬೇಕು ಎಂದು ಕರೆ ನೀಡಿದರು.
ಶಾಸಕ ಪ್ರಿಯಾಂಕ ಖರ್ಗೆ ಪ್ರಕಾಶ್ ಅವರದಕರ್ ಸನ್ಮಾನ
ಆರಾಧನಾ ಕಾಲೇಜಿನ ಪ್ರಾಂಶುಪಾಲ ಚೇತನಕುಮಾರ ಗಾಂಗಜಿ, ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಪಾಟೀಲ, ಪ್ರೊ.ಶಿವರಾಜ ಪಾಟೀಲ, ಮಹಾತ್ಮ ಜ್ಯೋತಿಬಾ ಫುಲೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಕೋಡ್ಲಾ, ಸಂಪಾದಕ ಮಲ್ಲಿಕಾರ್ಜುನ ಗೌರ್, ವಕೀಲರಾದ ಬಸವರಾಜ ಅಟ್ಟೂರ ಇದ್ದರು. ಬಸವರಾಜ ಎಸ್.ಇಟಗಿ ನಿರಝಪಿಸಿದರು. ಸ್ವಾತಿ ಮಲ್ಲಿಕಾರ್ಜುನ ಪ್ರಾರ್ಥನಾಗೀತೆ ಹಾಡಿದರು.