ಮಹಾನಗರ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ

0
88

ಕಲಬುರಗಿ: ಕೇಂದ್ರ ಸರ್ಕಾರವೂ ಅಂಗನವಾಡಿ ಮತ್ತು ಆಶಾ ಕಾರ್ಯಕತೆರ್Àಯರಿಗೆ ಗೌರವ ಧನ ನೀಡುವ ಮೂಲಕ ಹಾಗೂ ರಾಜ್ಯ ಸರ್ಕಾರವೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಗೆ 31 ಸಾವಿರ ಕೋಟಿ ಹಣ ನೀಡುವ ಮೂಲಕ ಬಿಜೆಪಿ ಪಕ್ಷವು ದೇಶದಲ್ಲಿ ಮತ್ತು ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ ನಾರಾಯಣ ಹೇಳಿದ್ದಾರೆ.

ಅವರು ಶನಿವಾರ ನಗರದ ಜಗದ ಬಡಾವಣೆಯ ಇರುವ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಮಹಾನಗರ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಅಶ್ವಥ್ ನಾರಾಯಣ ಮಾತನಾಡಿ, ಪ್ರತಿ ಬಾರಿ ರಾಜ್ಯ ಸರ್ಕಾರವೂ ನೀರಾವರಿ ಸೇರಿದಂತೆ ಇನ್ನೀತರ ಇಲಾಖೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದೆ,ಆದರೆ ಈ ಬಾರಿ ಮುಖ್ಯಮಂತ್ರಿಯವರು ಮಹಿಳಾ ದಿನಾಚರಣೆ ದಿನವೇ ರಾಜ್ಯದ ಬಜೆಟ್ ಮಂಡನೆ ಮಾಡುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಅನೂಕುಲ ಮಾಡಿಕೊಟ್ಟಿದ್ದಾರೆ ಎಂದರು.

Contact Your\'s Advertisement; 9902492681

ಚಿಂಚೋಳಿ: ರಸ್ತೆ ದುರಸ್ತಿಗೆ ಆಗ್ರಹ

ದೇಶದ ಜನರು ಬಿಜೆಪಿ ಪಕ್ಷದ ಮೇಲೆ ನಿರೀಕ್ಷೆ ಮಾಡಿ ಅಧಿಕಾರ ನೀಡಿದ್ದು, ನೀರಿಕ್ಷೆಯಂತೆಯೇ ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾತ್ರ ನಮ್ಮಿಂದ ಆಗಬೇಕಿದೆ. ಗುಲಾಮಗಿರಿಯ ಸಂಕೇತವಾದ ಹೈದ್ರಾಬಾದ್ ಕರ್ನಾಟಕ ಹೆಸರನ್ನು ತೆಗೆದು ಕಲ್ಯಾಣ ಕರ್ನಾಟಕ ಎಂಬ ಮರು ನಾಮಕರಣ ಮಾಡಿ, ಈ ಆರಿ ಬಜೆಟ್ ನಲ್ಲಿ 1500 ಕೋಟಿ ಹಣವನ್ನು ಈ ಭಾಗಕ್ಕೆ ಯಡಿಯೂರಪ್ಪ ನೀಡಿದ್ದಾರೆ ಎಂದರು.

ಮಹಿಳಾ ಮೋರ್ಚಾದ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ ಮಾತನಾಡಿ, ಪಕ್ಷವೆಂದರೆ ವ್ಯಕ್ತಿ ಪರವಾಗಿ ಇರಬಾರದು. ಸಂಘಟನೆ ಪರವಾಗಿರಬೇಕು. ರಾಜ್ಯ ಸರ್ಕಾರದ ನಿರ್ದೇಶನದಂತೆ ಮಹಿಳೆಯರು ಜಿಲ್ಲಾ ಸ್ಥರದಲ್ಲಿ ಕೆಲಸ ಮಾಡಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿ ಮಹಿಳೆಯರಿಗೆ ಸಂಪರ್ಕ ಮಾಡಿ ಸಮಾಜಮುಖಿ ಕೆಲಸವಾಗಬೇಕು ಎಂದರು.

ಕಲಬುರಗಿಯ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಇವರಿಂದ ಭರತನಾಟ್ಯ 

ಈ ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಗೀತಾ ವಿವೇಕಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧ್ಯಕ್ಷರಾದ ಶಶಿಕಲಾ ಟೆಂಗಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಅಶ್ವತ್ ನಾರಾಯಣ, ನಗರ ಅಧ್ಯಕ್ಷರಾದ ಸಿದ್ಧಾಜಿ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಮಾಹಾದೇವ ಬೆಳಮಗಿ, ಉಪಾಧ್ಯಕ್ಷ ವಿಜಯಲಕ್ಷ್ಮಿ ಗೊಬ್ಬುರಕರ, ಶ್ರೀದೇವಿ ಬೈರಾಮಡಗಿ, ನಗರ ಮಹಿಳಾ ಮೋರ್ಚಾದ ಅಧ್ಯಕ್ಷ ರಾದ ಶೋಭಾ ಭಾಗೆವಾಡಿ, ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಮ್ಮ ಪಾಟೀಲ್ ಮತ್ತು ಶಿಲ್ಪಾ ಸುವರ್ಣ, ರಾಜ್ಯ ಮಹಿಳಾ ಮೋರ್ಚಾದ ಉಪಾಧ್ಯಕ್ಷ ರಾದ ಲಲಿತಾ ಅನ್ನಪೂರ, ಪ್ರೇಮಾ ಭಂಡಾರಿ ಸಫಾಯಿ ಕರ್ಮಚಾರಿ ಇಲಾಖೆ ಸದಸ್ಯರಾದ ಗೀತಾ ವಾಡೇಕರ, ಬಿಜೆಪಿ ಪಕ್ಷದ ಮಂಡಲ ಪದಾಧಿಕಾರಿಗಳು, ನಗರ ಪದಾಧಿಕಾರಿಗಳು, ಕಾರ್ಯಕರಣಿ ಸದಸ್ಯರು ಹಾಗೂ ಪಕ್ಷದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಸವಿತಾ ಪಾಟೀಲ ಸ್ವಾಗತ ಗೀತೆಯನ್ನು ಹಾಡಿದರು. ಸುವರ್ಣ ವಾಡೆ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here