ಚಿಂಚೋಳಿ : ತಾಲೂಕಿನ ದೇಗುಲಮಡಿ ಗ್ರಾಮದ ಮುಖ್ಯಾ ರಸ್ತೆಯು ತೀರ ಹದಗೆಟ್ಟಿ ಮಾರ್ಗ ಮಧ್ಯದಲ್ಲಿ ಗುಂಡಿಗಳು ಹಾಗೂ ಕಲ್ಲುಗಳು ಬಿದ್ದಿದೆ. ಹಲವಾರು ತಿಂಗಳಿಂದ ದುರಸ್ತಿಗಾಗಿ ಒತ್ತಾಯಿದರು ಅಧಿಕಾರಿಗಳು ಕ್ಯಾರೆ ಎನ್ನುತಿಲ್ಲಿ ಎಂದು ಸಾಮಾಜಿಕ ಕಾರ್ಯಕರ್ತ ಸಂತೋಷ ಜಾಬೀನ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಲು ರೈತ ಸಂಘದಿಂದ ಪಾದಯಾತ್ರೆ
ಗುತ್ತಿಗೆದಾರರು ರಸ್ತೆ ಪೂರ್ಣಗೊಳಿಸದೆ, ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ್ದಾರೆ ಎಂದು ಆಕ್ರೋಶ ಹೋರಹಾಕಿದ್ದಾರೆ. ಇನ್ನೂ ಡಾಂಬರಿಕರಣ ಮಾಡಿಲ್ಲ ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಬೈಕ ಸವಾರರು ಆಯಾತಪ್ಪಿ ಬಿದ್ದು ಗಾಯ ಮಾಡಿಕೊಂಡಿರುವ ಉದಾಹರಣೆಗಳು ದಿನ ನಿತ್ಯ ನಡೆಯುತ್ತಿರುತ್ತವೆ ಎಂದು ತಿಳಿದಿದ್ದಾರೆ.
ಜನರಿಗೆ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ ರಸ್ತೆ ದುರಸ್ತಿಯ ಬಗ್ಗೆ ಇಲ್ಲಿನ ಜನರು ಸಾಕಷ್ಟು ಬಾರಿ ಸಂಭಂದಪಟ್ಟ ಅಧಿಕಾರಿಗಳು ಮನವಿ ಮಾಡಿದ್ಧಾರೆ ಆದರೂ ಪ್ರಯೋಜನೆವಾಗಿಲ್ಲ ಇನ್ನಾದರೂ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೋಳಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಸಂತೋಷ ಜಾಬೀನ್ ಅವರು ಆಗ್ರಹೀಸಿದ್ದಾರೆ.