ಶಹಾಬಾದ: ತಾಲೂಕಿನ ಭಂಕೂರ ಗ್ರಾಪಂಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಓ ಹಾಗೂ ಅಂವಿಕಲರ ಎಆರ್‌ಡಬ್ಲೂ ಅವರು ಅಂಗವಿಕಲರ ಸಭೆಯನ್ನು ಪಂಚಾಯತಿ ಸದಸ್ಯರ ಗಮನಕ್ಕೂ ತರದೇ ಬೇಕಾಬಿಟ್ಟಿಯಾಗಿ ಮಾಡಿದ್ದಾರೆ ಎಂದು ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಪಂಗೆ ಸಂಬಂಧಿಸಿದ ಯಾವುದೇ ಸಭೆ ನಡೆಸಬೇಕಾದರೆ ಗ್ರಾಪಂ ಸರ್ವ ಸದಸ್ಯರ ಗಮನಕ್ಕೆ ತರುವುದು ಅಧಿಕಾರಿಗಳ ಕರ್ತವ್ಯ.ಆದರೆ ಅದ್ಯಾವುದು ಮಾಡದೇ ಅಧಿಕಾರಿಗಳು ಅಶಿಸ್ತು ಪ್ರದರ್ಶನ ಮಾಡಿದ್ದಾರೆ.
ಕೋವಿಡ್ ಗೆ ಮೂವರು ಸಾವು: ತಹಸೀಲ್ದಾರ ಸುರೇಶ ವರ್ಮಾ
ಅಂಗವಿಕಲರಿಗೆ ಯಾವ ಅನುದಾನವಿದೆ. ಅದಕ್ಕಾಗುವ ಯಾವ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂಬ ವಿವರವಾದ ಮಾಹಿತಿ ಸದಸ್ಯರ ಗಮನಕ್ಕೆ ಬಂದರೆ ಮಾತ್ರ ಯೋಜನೆಗಳು ಫಲಪ್ರದವಾಗುತ್ತವೆ.ಅಲ್ಲದೇ ನಾನೊಬ್ಬ ಗ್ರಾಪಂ ಅಂಗವಿಕಲ ಸದಸ್ಯನಾಗಿದ್ದರೂ, ನನ್ನ ಗಮನಕ್ಕೂ ತರದೇ ಸಭೆ ನಡೆಸಿದ್ದಾರೆ. ಭಂಕೂರ ಗ್ರಾಪಂ ಕೇಂದ್ರದಲ್ಲಿ ಸುಮಾರು ನೂರು ಜನ ಅಂಗವಿಕಲರಿದ್ದಾರೆ.ಅವರಲ್ಲಿ ಕೇವಲ ಏಳೆಂಟು ಅಂಗವಿಕಲರು ಸಭೆಯಲ್ಲಿ ಬಾಗಿಯಾಗಿದ್ದರು.
ತರಾತುರಿಯಲ್ಲಿ ಸಭೆ ಕರೆದು ಜಾಬ್‌ಕಾರ್ಡ ಬಗ್ಗೆ ಮಾಹಿತಿ ತಿಳಿಸಿ ತಮ್ಮ ಕೈ ತೊಳೆದುಕೊಂಡು ಹೋಗಿದ್ದಾರೆ. ಅಂವಿಕಲರ ಎಆರ್‌ಡಬ್ಲೂ ಸರುಬಾಯಿ ಅವರಿಗೆ ಕೇಳಿದರೆ ನನಗೆ ಅಧಿಕಾರಿ ಸಭೆಯ ದಿನ ಬೆಳಿಗ್ಗೆ ತಿಳಿಸಿದ್ದಾರೆ.ಒಂದು ದಿನ ಮೊದಲೇ ಹೇಳಿದರೇ ಜನರು ಬರುತ್ತಾರೆ ಎಂದೆ.ಆದರೆ ಅವರು ಎಷ್ಟು ಜನ ಬರುತ್ತಾರೆ ಬರಲಿ ಎಂದು ಹೇಳಿದರು.ಅದಕ್ಕೆ ನನ್ನ ಕೈಲಾದಷ್ಟು ಜನರಿಗೆ ಹೇಳಿದ್ದೆನೆ.ಸಭೆಗೆ ಬೆಳಣಿಕೆಯಷ್ಟೇ ಜನರು ಬಂದಿದ್ದಾರೆ.ಅದಕ್ಕೆ ನಾನೇನು ಮಾಡಲಿ ಎಂದು ತಿಳಿಸಿದ್ದಾರೆ.
ಹೊಟ್ಟೆ ನೋವಿಗೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಅಂಗವಿಕಲರ ಸಭೆ ಕೇವಲ ಕಾಟಾಚಾರಕ್ಕೆ ಮಾಡಿರುವ ಅಧಿಕಾರಿಗಳ ವಿರುದ್ಧ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.ಅಲ್ಲದೇ ಕೂಡಲೇ ಮತ್ತೊಮ್ಮೆ ಸಭೆ ಕರೆದು ಅಂಗವಿಕಲರಿಗೆ ಮಾಹಿತಿ ಒದಗಿಸಬೇಕೆಂದು ಈರಣ್ಣ ಕಾರ್ಗಿಲ್ ಆಗ್ರಹಿಸಿದ್ದಾರೆ.