ಶಹಾಬಾದ:ನಗರದಲ್ಲಿ ಒಂದು ವಾರದೊಳಗೆ ಮೂರು ವ್ಯಕ್ತಿಗಳು ಕೋವಿಡ್-೧೯ ನಿಂದ ಸಾವನಪ್ಪಿದ್ದಾರೆ.ಅಲ್ಲದೇ ಒಬ್ಬ ಶಾಲಾ ಬಾಲಕನಿಗೆ ಸೊಂಕು ತಗುಲಿದ್ದರಿಂದ ನಗರದಲ್ಲಿ ಆತಂಕದ ಮನೆ ಮಾಡಿದೆ ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.
ಪಕ್ಕದ ಮಹಾರಾಷ್ಟ್ರದಲ್ಲಿ ಕೋವಿಡ್-೧೯ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೆಲವು ನಗರವನ್ನು ಲಾಕಡೌನ್ ಘೋಷಿಸಿದ್ದಾರೆ.ಈಗ ನಗರದಲ್ಲೂ ಕೊರೊನಾ ಹರಡುತ್ತಿರುವುದರಿಂದ ಸಾರ್ವಜನಿಕರು ಮುಂಜಾಗೃತ ಕ್ರಮವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು.ಸ್ಯಾನಿಟೈಜರ್ ಬಳಕೆ ಮಾಡಲೇಬೇಕು.ಆದರೆ ಸಾರ್ವಜನಿಕರು ಮಾತ್ರ ಈ ಬಗ್ಗೆ ಅಸಡ್ಡೆ ತೋರುತ್ತಿರುವುದು ಮಾತ್ರ ದುರಂತ. ವೈರಸ್ ಹರಡುವ ವೇಗವನ್ನು ಗಮನಿಸಿದರೇ ಮುಂದೆ ಗಡಾಂತರ ಕಾಡಬಹುದು.
ಉದ್ಯೋಗ ಖಾತ್ರಿಯಿಂದ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ
ಈ ಬಗ್ಗೆ ಎಷ್ಟೇ ಹೇಳಿದರೂ ಜನರು ಮಾತ್ರ ನಿರ್ಲಕ್ಷ್ಯ ಭಾವನೆ ತೋರುತ್ತಿದ್ದಾರೆ. ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ ಹಾಗೂ ಹಣ್ಣಿನ ಅಂಗಡಿಗಳು ಒಂದೇ ಕಡೆ ಇರುವುದರಿಂದ ಎಲ್ಲೆಡೆ ಜನಜಂಗುಳಿಯಿಂದ ಕಂಡುಬರುತ್ತಿದೆ. ನೂರಾರು ಜನರು ತರಕಾರಿ ಮಾರುಕಟ್ಟೆಯಲ್ಲಿ ಅಂತರ ಕಾಪಾಡಿಕೊಳ್ಳದೇ ವ್ಯಾಪಾರ ಮಾಡುತ್ತಿದ್ದಾರೆ.ಇದೇ ರೀತಿ ಮುಂದುವರೆದರೇ, ಈ ಹಿಂದೆ ಲಾಕ್‌ಡೌನ್ ಆದಂತೆ ಮತ್ತೆ ಮರುಕಳಿಸಬಹುದು. ಆದ್ದರಿಂದ ಜನರು ಗಂಬೀರವಾಗಿ ತೆಗೆದುಕೊಳ್ಳಬೇಕು.ಸದ್ಯ ನಗರದಲ್ಲಿನ ವಾತಾವರಣವನ್ನು ನೋಡಿದರೇ ಬಹಳ ಆತಂಕ ವ್ಯಕ್ತವಾಗುತ್ತಿದೆ.
ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಅನಾವಶ್ಯಕವಾಗಿ ಹೊರಗಡೆ ಬರಬೇಡಿ. ಹಿರಿಯರನ್ನು ಹೊರಗಡೆ ಬರದಂತೆ ನೋಡಿಕೊಳ್ಳಿ. ಗುಂಪಾಗಿ ಕೂಡುವುದನ್ನು ನಿಲ್ಲಿಸಿ. ನಿಮ್ಮ ಆರೋಗ್ಯ, ನಿಮ್ಮ ಜೀವ ನಿಮ್ಮ ಕೈಯಲ್ಲಿದೆ. ತಾಲೂಕಾಢಳಿತದಿಂದ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಮಾಡುತ್ತಿದ್ದೆವೆ.ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ. ನಗರದ ಸಮುದಾಯ ಕೇಂದ್ರದಲ್ಲಿ ೪೫ ವಯಸ್ಸು ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ವಾರದ ಏಳು ದಿನಗಳು ಹಾಕಲಾಗುತ್ತಿದೆ. ಅಲ್ಲದೇ ಯಾರಿಗಾದರೂ ನೆಗಡಿ, ಜ್ವರ, ಕೆಮ್ಮಿನ ಲಕ್ಷ್ನಗಳು ಕಂಡುಬಂದರೆ ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ತಪಾಸಣೆಗೆ ಒಳಗಾಗಬೇಕೆಂದು ತಹಸೀಲ್ದಾರರು ತಿಳಿಸಿದ್ದಾರೆ.