ಸುರಪುರ: ನಗರದ ಮಹಾತ್ಮ ಗಾಂಧಿ ಪುತ್ಥಳಿಯ ಮೇಲಿನ ಚಾವಣೆ ಸಂಪೂರ್ಣ ಕುಸಿದು ಬೀಳುವ ಹಂತದಲ್ಲಿದ್ದು ಕೂಡಲೆ ಅದನ್ನು ಬದಲಾಯಿಸುವಂತೆ ಯುವ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ನಗರಸಭೆಗೆ ಆಗ್ರಹಿಸಿದರು.
ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಮಹಾತ್ಮನಿಗೆ ಅವಮಾಣಿಸುವ ರೀತಿಯಲ್ಲಿ ನಿರ್ಲಕ್ಷಿಸಲಾಗುತ್ತಿದೆ,ಕೂಡಲೆ ನಗರಸಭೆಯಿಂದ ಅದನ್ನು ಬದಲಾಯಿಸಲು ಮುಂದಾಗಬೇಕು ಮತ್ತು ಬೇಸಿಗೆ ಆರಂಭಗೊಂಡಿದ್ದು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು,ಕೂಡಲೆ ಮುಂಜಾಗ್ರತೆವಹಿಸಿ ಎಲ್ಲಾ ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಧಿಕಾರಿ ಪ್ರತಾಪ ಸಿಂಗ್ ಠಾಕೂರ್ ನಿಧನಕ್ಕೆ ಸಂತಾಪ
ನಂತರ ನಗರಸಭೆ ಪೌರಾಯುಕ್ತರಿಗೆ ಬರೆದ ಮನವಿಯನ್ನು ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಅವರ ಮೂಲಕ ಸಲ್ಲಿಸಿದರು,ಈ ಸಂದರ್ಭದಲ್ಲಿ ನಗರಸಭೆಯ ಓಂಕಾರೆಪ್ಪ ಹಾಗು ಸಂಘಟನೆಯ ತಾಲೂಕು ಗೌರವಾಧ್ಯಕ್ಷ ರಾಜಾ ಚೆನ್ನಪ್ಪ ನಾಯಕ ತಾಲೂಕು ಅಧ್ಯಕ್ಷ ತಿಮ್ಮಪ್ಪ ಹೆಳವರ ನಗರ ಅಧ್ಯಕ್ಷ ಸಚಿನಕುಮಾರ ನಾಯಕ ನಬೀಸಾಬ ಸೇರಿದಂತೆ ಅನೇಕರಿದ್ದರು.