ರಸ್ತೆ ದುರಸ್ಥಿ, ಪ್ಲಾಸ್ಟಿಕ್ ನಿಷೇದಿಕ್ಕೆ ಜೈ ಕರವೇ ಆಗ್ರಹ

1
22

ಕಲಬುರಗಿ: ಹೃದಯ ಭಾಗದಲ್ಲಿರುವ ಅಪ್ಪಾ ಪಬ್ಲಿಕ್ ಶಾಲೆ ಎದುರುಗಡೆ ಇರುವ ಟ್ಯಾಂಕ್ ಬಂಡ್ ರಸ್ತೆ ಸಂಪೂರ್ಣ ಹದೆಗಟ್ಟಿರುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೂ ತುಂಬಾ ತೊಂದರೆಯಾಗುತ್ತದೆ ಎಂದು ಒತ್ತಾಯಿಸಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಂದ್ ಮಾಡಬೇಕೆಂದು ಒತ್ತಾಯಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಹಾನಗರ ಪಾಲಿಕೆಯ ಎದುರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವವಹಿಸಿದರುವ ಸಂಘಟನೆ ರಾಜ್ಯಾಧ್ಯಕ್ಷರಾದ ಮಂಜುನ್ನಾಥ ಬಿ. ಹಾಗರಗಿ ಮಾತನಾಡಿ, ಈ ರಸ್ತೆ ಹದೆಗೆಟ್ಟು ಹಲವಾರು ತಿಂಗಳು ಕಳೆದರೂ ಸಹ ಇದನ್ನು ದುರಸ್ತೀಗೊಳಿಸುವ ಬಗ್ಗೆ ಯಾರು ಯೋಚನೆ ಮಾಡುತ್ತಿಲ್ಲ, ಪ್ರಮುಖ ಆಕರ್ಷಣೆ ಸ್ಥಳವಾಗಿರುವ ಅಪ್ಪಾ ಪಬ್ಲಿಕ್ ಗಾರ್ಡನ ಸಹ ಇದೆ. ಪಾಲಕರು ಹಾಗೂ ಮಕ್ಕಳು ಸಹ ಓಡಾಡುತ್ತಾರೆ. ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸಿವೆ. ಹಲವಾರು ಜನರಿಗೆ ಪೆಟ್ಟುಬಿದ್ದು ಆಸ್ಪತ್ರೆಗೆ ದಾಖಲಾಗಿರುವ ಘಟನೆಗಳು ಸಹ ನಡೆದಿವೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.

Contact Your\'s Advertisement; 9902492681

ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮನದ ಭೀತಿ ನಿವಾರಿಸಿರಿ: ಶಾಸಕ ಅಜಯ್ ಸಿಂಗ್

ಜಿಲ್ಲೆಯಲ್ಲಿ ಇನ್ನು ಜಾಸ್ತಿ ಪ್ರಮಾಣದಲ್ಲಿ ಪ್ಲಾಸ್ಟಿಕ ಮತ್ತು ನಾನ್ ಓವನ ಚೀಲಗಳು ಬಳಕೆಯಾಗುತ್ತಿವೆ. ಮಹಾನಗರ ಪಾಲಿಕೆಯ ಕೆಲವು ಅಧಿಕಾರಿಗಳು ಇದರಲ್ಲಿ ಶ್ಯಾಮೀಲಾಗಿರುವುದು ಕಂಡು ಬರುತ್ತದೆ. ಇದನ್ನು ಉಗ್ರವಾಗಿ ಖಂಡಿಸುತ್ತದೆ.

ಈ ಮೇಲಿನ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿ ಈಗಲಾದರೂ ಕಣ್ಣು ತೆರೆದು ನೋಡಿ ಹದೆಗೆಟ್ಟಿರುವ ರಸ್ತೆಯನ್ನು ದುರಸ್ತೀಗೊಳಿಸಬೇಕು ಮತ್ತು ಪ್ಲಾಸ್ಟಿಕ್‌ನ್ನು ಸಹ ಸಂಪೂರ್ಣವಾಗಿ ರದ್ದುಗೊಳಿಸಬೇಕು ಯಾವುದೇ ಕ್ರಮ ಕೈಗೊಳ್ಳದೇ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಮೂರು ತಿಂಗಳ ಉಚಿತ ಹೊಲಿಗೆ ತರಬೇತಿ ಶಿಬಿರ

ಜಗನ್ನಾಥ ಪಟ್ಟಣಶೆಟ್ಟಿ, ಮಹಿಮೂದ ಯಲಗಾರ, ಬಾಲರಾಜ ಕೊನಳ್ಳಿ, ಶರಣು ಖಾನಾಪೂರೆ, ವಿವೇಕಾನಂದ ಪಾಂಡವ, ರಾಚಣ್ಣ ಪಾಟೀಲ, ರಜನೀಶ ಕೌಂಟೆ, ಪ್ರಭು,  ಸಂತೋಷ ಪಾಟೀಲ, ಶಾಂತಕುಮಾರ, ಆರ್. ಎಸ್. ಪಾಟೀಲ, ಸಿದ್ದು ಹರಸೂರ, ಮಹಿಪಾಲ್, ವಿವೇಕ, ಸಂಗಮೇಶ, ಗುರುರಾಜ, ಮುಂತಾದವರು..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here