ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮನದ ಭೀತಿ ನಿವಾರಿಸಿರಿ: ಶಾಸಕ ಅಜಯ್ ಸಿಂಗ್

0
38

ಕಲಬುರಗಿ: ಬ್ಯಾಂಕುಗಳ ಖಾಸಗಿಕರಣ ತಪ್ಪಿಸುವ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳ ಸಾವಿರಾರು ನೌಕರರ ಮನದಲ್ಲಿನ ದುಗುಡು- ದುಮ್ಮಾನ ನಿವಾರಣೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಒತ್ತಾಯಿಸಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಅವರು ಟ್ವೀಟ್ಟರ್ ಮೂಲಕ ಈ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಇನ್ನೂ 2 ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ ಖಾಸಗೀಕರಣ ಮಾಡಲು ಕೇಂದ್ರ ಹೊರಟಿದೆ ಎಂಬ ಸುದ್ದಿಯೇ ಬ್ಯಾಂಕ್ ನೌಕರರ ಮನದಲ್ಲಿ ಭೀತಿ ಹುಟ್ಟು ಹಾಕಿದೆ. ಈ ವಿಚಾರದಲ್ಲಿ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರು ಕೇಂದ್ರದಿಂದ ಸ್ಪಷ್ಟ ಭರವಸೆ ನಿರೀಕ್ಷೆಯಲ್ಲಿದ್ದಾರೆಂದೂ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

Contact Your\'s Advertisement; 9902492681

ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಮೂರು ತಿಂಗಳ ಉಚಿತ ಹೊಲಿಗೆ ತರಬೇತಿ ಶಿಬಿರ

ಭಾರತ ಸರ್ಕಾರ ಲಾಭವನ್ನ ಖಾಸಗೀಕರಣಗೊಳಿಸುತ್ತ ಹಾನಿಯನ್ನ ರಾಷ್ಟ್ರೀಕರಣ ಮಾಡಲು ಹೊರಟಂತಿದೆ. ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಕೇಂದ್ರದ ಕ್ರಮದಿಂದ ಭಾರತದ ಬಲವಾದಂತಹ ಆರ್ಥಿಕತೆಗೆ ಭಾರಿ ಪೆಟ್ಟು ಬೀಳಲಿದೆ, ಇದನ್ನು ತಪ್ಪಿಸಲೇಬೇಕಾಗಿದೆ, ಕೇಂದ್ರ ತಕ್ಷಣ ಮುಷ್ಕರ ನಿರತ ಬ್ಯಾಂಕ್ ಉದ್ಯೋಗಿಗಳೊಂದಿಗೆ ಮಾತುಕತೆ ನಡೆಸಿ ಅವರ ಮನಲ್ಲಿನ ಬೀತಿ ನಿವಾರಿಸುವ ಕೆಲಸಕ್ಕೆ ಮುಂದಾಗಲಿ ಎಂದೂ ಡಾ. ಅಜಯ್ ಸಿಂಗ್ ಟ್ವಿಟ್ಟರ್ ಸಂದೇಶದ ಮೂಲಕ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here