ಶಹಾಬಾದ: ನಗರಸಭೆಯ ವಾರ್ಡ್ ನಂ.೧೮ರ ಸದಸ್ಯ ಭೀಮಣ್ಣ ಖಂಡ್ರೆ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಮಂಗಳವಾರ ಬಿಜೆಪಿ ಅಭ್ಯರ್ಥಿಯಾಗಿ ಜಗದೇವ ಸುಬೇದಾರ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು.
ಪರಿಶಿಷ್ಟ ಪಂಗಡ ಮೀಸಲಾತಿಗೆ ನಡೆಯುವ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಜಗದೇವ ಸುಬೇದಾರ ಅವರು ನಾಮಪತ್ರ ಸಲ್ಲಿಸಿದ ನಂತರ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ನಗರಸಭೆಯ ವಾರ್ಡ ನಂ. ೧೮ರ ತೆರವಾದ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯು ನಾಮಪತ್ರ ಸಲ್ಲಿಸಿದ್ದು, ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲುವು ನಿಶ್ಚಿತ ಇದಕ್ಕೆ ಎರಡು ಮಾತಿಲ್ಲ. ಈ ಹಿಂದೆ ನಮ್ಮ ಪಕ್ಷದ ಅಭ್ಯರ್ಥಿಯೇ ಈ ವಾರ್ಡನಿಂದ ಗೆಲುವು ಸಾಧಿಸಿದ್ದರು. ವಾರ್ಡ ನಂ.೧೮ ಬಿಜೆಪಿ ಮತದಾರರ ಭದ್ರಕೋಟೆಯಾಗಿದ್ದು, ಇಲ್ಲಿ ಬೇರೆ ಪಕ್ಷದ ಅಭ್ಯರ್ಥಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ.ಆದರೂ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರತಿಯೊಬ್ಬ ಮತದಾರರ ಮನೆಮನೆಗೆ ತೆರಳಿ, ನಮ್ಮ ಅಭ್ಯರ್ಥಿ ಅತಿ ಹೆಚ್ಚು ಮತಗಳಿಂದ ಗೆಲ್ಲಿಸುವಂತಹ ಕಾರ್ಯಕ್ಕೆ ಮುಂದಾಗಬೇಕೆಂದು ಹೇಳಿದರು.
ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯಿಂದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಗೆ ಸನ್ಮಾನ
ಜಿಲ್ಲಾ ಅಧ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಾಡಗಿ,ನಗರಾಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಭಾಗಿರಥಿ ಗುನ್ನಾಪೂರ,ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ಪ್ರಮುಖರಾದ ಅರುಣ ಪಟ್ಟಣಕರ, ಚಂದ್ರಕಾಂತ ಗೊಬ್ಬುರಕರ, ಅನಿಲ ಬೋರಗಾಂವಕರ, ಸುಭಾಷ ಜಾಪೂರ,ಭೀಮರಾವ ನಗರಸಭೆ ಸದಸ್ಯರಾದ ಪಾರ್ವತಿ ಪವರ,ರವಿ ರಾಠೋಡ, ದತ್ತ ಫಂಡ,ಮಂಜುನಾಥ,ಶರಣು ವಸ್ತ್ರದ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕನಕಪ್ಪ ದಂಡಗುಲಕರ, ಬಸವರಾಜ ಬಿರಾದಾರ,ನಿಂಗಣ್ಣ ಹುಳಗೋಳಕರ,ಚಂದ್ರಕಾಂತ ಸುಭೆದಾರ, ಶಿವುಗೌಡ ಪಾಟೀಲ, ಭೀಮಯ್ಯ ಗುತ್ತೆದಾರ,ಶಶಿಕಲಾ ಸಜ್ಜನ, ಮಹಾದೇವ ಗೋಬ್ಬುರಕರ, ದುರ್ಗಪ್ಪ ಪವರ,ನಿಲಗಂಗಮ,ಜಯಶ್ರೀ ಸೂಡಿ,ಸುನಿತಾ,ಆರತಿ, ದಿನೇಶ ಗೌಳಿ, ಸಂತೋಷ ಪಾಟೀಲ, ಶರಣಬಸಪ್ಪ ಸುಭೆದಾರ,ಸಂಜಯ ವಿಟ್ಕರ, ರಾಜು ಕುಂಬಾರ,ಪಕ್ಷದ ಪ್ರಮುಖರು, ಹಿತೈಷಿಗಳು,ಶಕ್ತಿ ಕೇಂದ್ರ ಪ್ರಮುಖರು, ಎಲ್ಲಾ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿರಲಿದ್ದಾರೆ.