ಕಲಬುರಗಿ: ಸುಮಾರು 111 ವರ್ಷಗಳ ಹಿಂದೆಜರ್ಮನಿಯ ಸಮಾಜವಾದಿ ದಿಟ್ಟ ಮಹಿಳೆ ’ಕ್ಲಾರಾಜೆಟಕಿನ್’ ಲಕ್ಷಾಂತರ ಮಹಿಳೆಯರನ್ನು ಸಂಘಟಿಸಿ ಮಹಿಳೆಯರಿಗಾಗಿ ಸಮಾನವೇತನ, ಮತದಾನದ ಹಕ್ಕು, ಕೆಲಸದ ಸ್ಥಳಗಳಲ್ಲಿ ವಿಶೇಷ ಸೌಲಭ್ಯಗಳು ಸಿಗಬೇಕೆಂದು ಹೋರಾಡಿಯಶಸ್ಸು ಗಳಿಸಿದ ದಿನದವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಮಹಾಗಾಂವದ ಸರ್ಕಾರಿಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಶಾಂತಾ ಅಷ್ಟಗಿ ತಿಳಿಸಿದರು.
ಅವರು ನಗರದಕೋರ್ಟ ಸಮೀಪವಿರುವ ವಿಶ್ವೇಶ್ವರ ಭವನದಲ್ಲಿರುವ ದಿ ಇನ್ಸಟಿಟ್ಯೂಟ್ ಆಫ್‌ಇಂಜಿನಿಯರ‍್ಸ್ ಇಂಡಿಯಾದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರ ಸಾಧನೆಗಳಿಗೆ ಆದರ ಸಿಗಬೇಕು, ಗಂಡು-ಹೆಣ್ಣುಎಂಬ ಭೇದಗಳಿಲ್ಲದ ಸಮಾಜ ನಿರ್ಮಾಣವಾಗಬೇಕು.ಆವತ್ತಿಗೂ-ಇವತ್ತಿಗೂ ಮಹಿಳೆಯರ ಕುರಿತು ವಿಚಾರ ಧೋರಣೆಗಳಲ್ಲಿ ಗಮನಾರ್ಹ ಬದಲಾವಣೆ ಆಗುವ ನಿಟ್ಟಿನಲ್ಲಿ ನಾವು ಸದಾ ಸಿದ್ಧರಾಗಬೇಕೆಂದು ಕರೆ ನೀಡಿದರು.
ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯಿಂದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಗೆ ಸನ್ಮಾನ
ಕಾರ್ಯಕ್ರಮದಅಧ್ಯಕ್ಷತೆಯನ್ನುಇನ್ಸಟಿಟ್ಯೂಟಆಫ್‌ಇಂಡಿಯಾದ ಕಲಬುರಗಿಕೇಂದ್ರದ ಅಧ್ಯಕ್ಷರಾದ ಪ್ರೋ.ಬಿ.ಎಸ್. ಮೋರೆ ವಹಿಸಿದರು. ವೇದಿಕೆಯ ಮೇಲೆ ಗೌರವ ಕಾರ್ಯದರ್ಶಿಗಳಾಗಿ ಡಾ. ಬಾಬುರಾವ್ ಶೇರಿಕಾರ ಮತ್ತು ಸಂಯೋಜಕಿಡಾ. ಭಾರತಿ ಹರಸೂರ ಉಪಸ್ಥಿತರಿದ್ದರು.ಶ್ರೀ ಶಿವಶಂಕರಪ್ಪ ಗುರುಗುಂಟಿಯವರು ಸ್ವಾಗತಿಸಿದರು.ಶ್ರೀ ಮತಿಕಲ್ಪನಾವಾಂಜರಖೇಡ ವಂದಿಸಿದರು.ಡಾ. ಬಾಬುರಾವ ಶೇರಿಕಾರ ಪ್ರಾಸ್ತಾವಿಕ ಮಾತನಾಡಿದರು.ಶ್ರೀಮತಿ ಸ್ನೇಹಲತಾ ಪ್ರಾರ್ಥಿಸಿದರು.ಡಾ. ಗೀತಾಪಾಟೀಲ್ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸಾಧಕ ಮಹಿಳೆಯರಾದ ಶಕುಂತಲಾ ವಾಂಜರಖೇಡ, ಅಕ್ಕಮ್ಮಗುರುಗುಂಟಿ, ಪಾರ್ವತಿ ಮೋರೆ, ನಿರ್ಮಲಾಗುರುಗುಂಟಿ, ಕೆ. ವೀಣಾ, ಪ್ರೋ.ಮಹಾದೇವಿ ಬಿರಾದಾರ, ಸರಸ್ವತಿರೆಡ್ಡಿ, ಡಾ.ಕಲ್ಪನಾ ವಾಂಜರಖೇಡ, ಡಾ.ಸುವರ್ಣಾ ನಂದ್ಯಾಳ, ಡಾ.ಗೀತಾ ಪಾಟೀಲ್, ಡಾ.ಭಾರತಿ ಹರಸೂರ, ಡಾ.ಸುಜಾತಾ ಮಲ್ಲಾಪೂರ, ಆರತಿ ಬೋಗಲೆ, ಗೌರಿಇವರನ್ನು ಸನ್ಮಾನಿಸಲಾಯಿತು.
ನಗರಸಭೆಗೆ ಜಗದೇವ ಸುಬೇದಾರ ನಾಮ ಪತ್ರ ಸಲ್ಲಿಕೆ
ಈ ಸಂದರ್ಭದಲ್ಲಿಜಿ.ಆರ್.ಮುತ್ತಗಿ, ಕಾಶೆಪ್ಪ ವಾಂಜರಖೇಡ, ಬಸವರಾಜ ಪಾಟೀಲ್, ಚಂದ್ರಶೇಖರಗುರುಗುಂಟಿ, ಡಾ.ಪ್ರಭುದೇವ ಮಹಾದೇವಪ್ಪ, ಡಾ.ವೀರೇಶ ಮಲ್ಲಾಪೂರ, ಅನಿಲಕುಮಾರ ಮಂಗಲಗಿ, ಚಂದ್ರಶೇಖರ ಬೋಗಲೆ ಉಪಸ್ಥಿತರಿದ್ದರು.