- ಇಲಿಯಾಸಪಟೇಲ್, ಬಳಗಾನೂರ
ಸುರಪುರ : ಗಿರಿನಾಡು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಮೀಪದ ಬಂಡೇರದೊಡ್ಡಿ ಕ್ರಾಸ್ನಿಂದ ಕೆ.ತಳ್ಳಳ್ಳಿ ಗ್ರಾಮಕ್ಕೆ ಸಂಚರಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುರಪುರ ಪಟ್ಟಣದಿಂದ ಹುಣಸಗಿ ನಗರಕ್ಕೆ ಹಾಗೂ ಕೋಳಿಹಾಳ, ಇಸಾಂಪೂರ, ಗುಂಡಲಗೇರಾ, ಅಗ್ನಿ, ಅಗತೀರ್ಥ, ಅರಕೇರಾ, ಯಡಹಳ್ಳಿ ,ಕಚಕನೂರ ಮೂಲಕ ಸುರಪುರ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು ದಿನನಿತ್ಯ ನೂರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ.
ಪೌರಕಾರ್ಮಿಕರಿಗೆ ಗುಣಮಟ್ಟದ ಪೌಷ್ಠಿಕ ಉಪಾಹಾರ ಕೊಡಿ: ಡಿ.ಸಿ. ವಿ.ವಿ.ಜ್ಯೋತ್ಸ್ನಾ
ದಿನನಿತ್ಯ ಗ್ರಾಮೀಣ ಪ್ರದೇಶದಿಂದ ನೂರಾರು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಬಸ್ ನಲ್ಲಿ ನಗರ ಪ್ರದೇಶಕ್ಕೆ ಪ್ರಯಾಣ ಬೆಳೆಸುತ್ತಾರೆ.
ವಿದ್ಯಾರ್ಥಿಗಳು,ವೃದ್ಧರು, ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರು ರಸ್ತೆ ದುರಸ್ತಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕೆ. ತಳ್ಳಳ್ಳಿ ಗ್ರಾಮ ಸುರಪುರ ತಾಲೂಕಿನ ಕೊನೆಯ ಗಡಿ ಗ್ರಾಮವಾಗಿದ್ದು ಗ್ರಾಮೀಣ ಪ್ರದೇಶದಿಂದ ತುರ್ತು ಸಂದರ್ಭದಲ್ಲಿ ಬಾಣಂತಿಯರು ಮತ್ತು ವೃದ್ಧರಿಗೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ನರಕಯಾತನೆ ಅನುಭವಿಸುವಂತಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಅನುಮಾನಸ್ಪದ ವ್ಯಕ್ತಿಯ ಕೊಲೆ: ನಾಲ್ವರ ಬಂಧನ
ಸುಮಾರು ವರ್ಷಗಳಿಂದ ರಸ್ತೆಯಲ್ಲಿ ತಗ್ಗು ಗುಂಡಿಗಳಿಂದ ಕೂಡಿದ್ದು ರಸ್ತೆಯುದ್ದಕ್ಕೂ ಜಲ್ಲಿ ಕಲ್ಲುಗಳು ಎದ್ದು ನಿಂತಿವೆ, ರಸ್ತೆಯ ಪಕ್ಕದಲ್ಲಿ ಜಾಲಿ ಕಂಟಿಗಳು ಆವರಿಸಿದ್ದು ೨ ಕಿಲೋಮೀಟರ್ ಗಿಂತ ದೂರ ಇರುವ ರಸ್ತೆ ಸಂಪೂರ್ಣ ಹಾಳಾಗಿದೆ, ೧೦ ನಿಮಿಷದಲ್ಲಿ ಸಂಚರಿಸಬೇಕಾದ ರಸ್ತೆಯನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಕ್ರಮಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ, ಇದರಿಂದಾಗಿ ಸಾರ್ವಜನಿಕರು ಮತ್ತು ಪ್ರಯಾಣಿಕರು ಸಂಚರಿಸಲು ತೊಂದರೆಯಾಗುತ್ತಿದೆ.
ಈಗಾಗಲೇ ಕೆ. ತಳ್ಳಳ್ಳಿ ಗ್ರಾಮದ ರಸ್ತೆ ಕಾಮಗಾರಿಯ ಟೆಂಡರ್ ಕರೆಯಲಾಗಿದ್ದು ಗುತ್ತಿಗೆದಾರರಿಗೆ ನೀಡಲಾಗಿದೆ, ಆದಷ್ಟು ಬೇಗ ಕಾಮಗಾರಿ ಪ್ರಕ್ರಿಯೆ ಆರಂಭಮಾಡುವಂತೆ ಸೂಚನೆ ನೀಡಲಾಗುವುದು.-ನರಸಿಂಹ ನಾಯಕ (ರಾಜುಗೌಡ) ಶಾಸಕರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು.
ಸುಮಾರು ಹತ್ತು ವರ್ಷಗಳಿಂದ ರಸ್ತೆ ಅಭಿವೃದ್ಧಿ ಕಂಡಿಲ್ಲ, ದಿನನಿತ್ಯ ಗ್ರಾಮೀಣ ಭಾಗದಿಂದ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ನಗರಕ್ಕೆ ತೆರಳಲು ತೊಂದರೆಯಾಗುತ್ತಿದೆ. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ, ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾಗಲಿ.-ನಿಂಗಣ್ಣ ಸಾಹುಕಾರ ಮಾಲಗತ್ತಿ.
ಆದಷ್ಟು ಬೇಗ ಸರ್ಕಾರ ಹಾಗೂ ಸಂಭಂದಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಗುಂಡಿಗಳಿಗೆ ಮುಕ್ತಿ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ ಎನ್ನುವುದೇ ನಮ್ಮ ಆಶಯ.