ಸುರಪುರ: ತಾಲೂಕಿನ ಮಂಜಲಾಪುರ ಬಳಿಯಲ್ಲಿನ ವಿತರಣಾ ಕಾಲುವೆ ಲ್ಯಾಟ್ರಲ್ ಸಂಖ್ಯೆ ೬ ಸಂಪೂರ್ಣ ಹಾಳಾಗಿದ್ದು ದುರಸ್ಥಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಮುಖಂಡರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬುಚ್ಚಪ್ಪ ನಾಯಕ ಅವರು,ಮಂಜಲಾಪುರ ಬಳಿಯ ಲ್ಯಾಟ್ರಲ್ ಸಂಖ್ಯೆ ೬ರ ಕಾಲುವೆ ಹೂಳು ತುಂಬಿದ್ದರಿಂದಾಗಿ ಕೊನೆಯಲ್ಲಿನ ರೈತರಿಗೆ ನೀರು ಬರುತ್ತಿಲ್ಲ ಇದರಿಂದ ರೈತರು ಬೆಳೆ ನಷ್ಟಕ್ಕೊಳಗಾಗುವಂತಾಗಿದೆ.ಆದ್ದರಿಂದ ಈ ಕಾಲುವೆಯ ಹೂಳು ತೆಗೆಯಿಸಿ ದುರಸ್ಥಿಗೊಳಿಸಬೇಕು ಎಂದು ಸಾಂಕೇತಿಕ ಪ್ರತಿಭಟನೆ ಮೂಲಕ ವಿನಂತಿಸುತ್ತೇವೆ.ಒಂದು ವೇಳೆ ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ರೈತರು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಐತಿಹಾಸಿಕ ಸಂಗಮೇಶ್ವರ ದೇವಸ್ಥಾನ ಸಂರಕ್ಷಣೆಗೆ ಮನವಿ
ನಂತರ ಕಕ್ಕೇರಾ ವಲಯದ ಕೆಬಿಜೆಎನ್ಎಲ್ ಸಹಾಯಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಪರಶುರಾಮ ಪೂಜಾರಿ ನಂದಪ್ಪ ತೇರಿನ ಭೀಮಣ್ಣ ಅಬ್ಬಿ ನಂದಪ್ಪ ಹಳ್ಳಿಗೌಡ ಸೇರಿದಂತೆ ಅನೇಕರಿದ್ದರು.