ಸುರಪುರ: ಆದಷ್ಟು ಬೇಗನೆ ಶುದ್ಧೀಕರಣ ಯಂತ್ರವನ್ನು ದುರಸ್ಥಿಗೊಳಿಸಿ ನಗರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕೆಲಸ ಮಾಡುವಂತೆ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ ತಿಳಿಸಿದರು.
ನಗರದ ಕುಂಬಾರಪೇಟೆಯ ಬಳಿಯ ಜಲ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಮಾತನಾಡಿದ ಅವರು,ಈಗಾಗಲೇ ಯಂತ್ರಗಳ ದುರಸ್ಥಿಕಾರ್ಯ ಆರಂಭಗೊಂಡಿದೆ,ಇನ್ನೆನು ನಗರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು.ಈಗಾಗಲೇ ಯಂತ್ರ ದುರಸ್ಥಿ ಕಾರ್ಯದಲ್ಲಿ ತೊಡಗಿರುವವರಿಗೂ ಆದಷ್ಟು ಶೀಘ್ರವೆ ಯಂತ್ರ ದುರಸ್ಥಿಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಬೇಸಿಗೆಗೆ ಈಬಾರಿ ಸಾಧ್ಯವಾದಷ್ಟು ಜನರಿಗೆ ನೀರಿನ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ನಗರಸಭೆ ಅಭಿಯಂತರ ಶಾಂತಪ್ಪ ಹಾಗು ಮಹೇಶ ಸೇರಿದಂತೆ ಅನೇಕರಿದ್ದರು.