ಕಲಬುರಗಿ: ನಗರದ ಗಂಜ್ ಪ್ರದೇಶದ ಎಪಿಎಂಸಿ ಪ್ರದೇಶದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ನಾಗರಾಜ್ ಸಿಂಧೆ (35) ಕೊಲೆಯಾದ ಯುವಕ. ರಾಡಿನಿಂದ ಹೂಡೆದು ಹತ್ಯೆ ಮಾಡಲಾಗಿದೆ. ಈತ ಎಪಿಎಂಸಿ ಬಳಿ ಇರುವ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಹೇಳಲಾಗಿದೆ.
ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಚೌಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಹಿಂದೆ ಗಂಜ್ ಪ್ರದೇಶದಲ್ಲಿ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ ಯುವಕ ಕೊಲೆ ನಡೆದಿತ್ತು. ಈ ಪ್ರದೇಶದಲ್ಲೇ ಇದು ಎರಡನೇ ಕೊಲೆ ಪ್ರಕರಣ ಸಂಭವಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.