ಸುರಪುರ: ಶಿಕ್ಷಣ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಶಾಖೆ ಸುರಪೂರ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು .
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಯಾದಗಿರಿ ಜಿಲ್ಲೆ ಅಧ್ಯಕ್ಷ ಹಾಗೂ ಮಾಜಿ ಸಚಿವರಾದ ರಾಜಾ ಮದನ್ ಗೋಪಾಲ್ ನಾಯಕ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಯೋಗವನ್ನು ಮಾಡಿ ನಿರೋಗಿಯಾಗಿ,ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬೆಳವಣಿಗೆ ಅಪಾರ ಕೊಡುಗೆಯನ್ನು ನೀಡಲಿದೆ. ಇಂದಿನ ಒತ್ತಡದ ಯುಗದಲ್ಲಿ ದಿನಾಲು ಒಂದು ಗಂಟೆ ಯೋಗಾಭ್ಯಾಸವನ್ನು ಮಾಡಿದರೆ ರೋಗದಿಂದ ಮುಕ್ತರಾಗಲು ಇದು ರಾಮ ಬಾಣವಿದ್ದಂತೆ ಎಂದರು.
ಮುಖ್ಯ ಅತಿಥಿಗಳಾಗಿ ಸೋಮರೆಡ್ಡಿ ಮಂಗಿಹಾಳ, ಬಿಆರ್ ಪೊಲೀಸ್ ಪಾಟೀಲ್, ಬಸವರಾಜ ಗೋಗಿ, ರಾಜಶೇಖರ ದೇಸಾಯಿ, ಬಸವರಾಜ ಜಮದರಖಾನಿ,ಎಪಿಎಫ್‌ನ ಅನ್ವರ್ ಜಮಾದಾರ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಶಿವಶರಣ ಕುದುರಿ, ಮಹೇಶ್ ಜಾಗೀರ್ದಾರ್, ಲಕ್ಷ್ಮಣ ಬಿರಾದಾರ್,ಜೋಗಪ್ಪ,ಸಂಪತ್ ಕುಮಾರ್,ಹಣಮಂತರಾಯ ದೊರಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.