ಸುರಪುರ: ಎಸ್ಸಿ ಎಸ್ಟಿ ನಿಗಮಗಳಿಗೆ ಅನುದಾನ ಹೆಚ್ಚಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ವತಿಯಿಂದ ನಗರದಲ್ಲಿರುವ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವವಹಿಸಿದ್ದ ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ರಾಜ್ಯದಲ್ಲಿರುವ ಯಡಿಯೂರಪ್ಪನವರ ಸರಕಾರ ಎಸ್ಸಿ ಎಸ್ಟಿ ಸೇರಿ ಹಿಂದುಳಿದ ಒಟ್ಟು ೧೨ ನಿಗಮಗಳಿಗೆ ಬರೀ ಐದು ನೂರು ಕೋಟಿ ಅನುದಾನ ನೀಡಿದರೆ ಮೇಲ್ವರ್ಗದ ಜಾತಿಗಳ ನಿಗಮಗಳಿಗೆ ಒಂದೊಂದಕ್ಕೆ ಐದು ನೂರು ಕೋಟಿ ರೂಪಾಯಿಗಳ ಅನುದಾನ ನೀಡುವ ಮೂಲಕ ರಾಜ್ಯದಲ್ಲಿನ ದಲಿತರ ಏಳಿಗೆಗೆ ಕೊಡಲಿಪೆಟ್ಟು ನೀಡುತ್ತಿದ್ದಾರೆ.
ತಾಲೂಕು ಮಟ್ಟದ ಪೋಷಣ ಪಕ್ವಾಡಾ ಅಭಿಯಾನಕ್ಕೆ ಚಾಲನೆ
ಆದ್ದರಿಂದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇದನ್ನು ಖಂಡಿಸುತ್ತದೆ ಮತ್ತು ಇಂದು ಸುರಪುರ ಶಾಸಕರ ಮನೆಯ ಮುಂದೆ ಪ್ರತಿಭಟನೆ ನಡೆಸಿದರೆ ಮುಂದಿನ ದಿನಗಳಲ್ಲಿ ದೇವದುರ್ಗ ಶಾಸಕ ಶಿವನಗೌಡ ನಾಯಕ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ಸೇರಿದಂತೆ ಎಲ್ಲಾ ಶಾಸಕರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ,ಈ ಎಲ್ಲಾ ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಹೆಚ್ಚಿನ ಅನುದಾನ ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳ ನಿಗಮಗಳಿಗೆ ತರುವಂತೆ ಒತ್ತಾಯಿಸುವುದಾಗಿ ತಿಳಿಸಿದರು.
ನಂತರ ಶಾಸಕರಿಗೆ ಬರೆದ ಮನವಿಯನ್ನು ಶಾಸಕರ ಆಪ್ತರಾದ ವಿರುಪಾಕ್ಷಿ ಕೋನಾಳ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಿಗಿ ಜೆಟ್ಟೆಪ್ಪ ನಾಗರಾಳ ಮಾನಪ್ಪ ಬಿಜಾಸಪುರ ಬುದ್ಧಿವಂತ ನಾಗರಾಳ ಸೇರಿದಂತೆ ಅನೇಕರಿದ್ದರು.