ಸುರಪುರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃಧ್ಧಿ ಇಲಾಖೆ ಯಾದಗಿರಿ ಹಾಗು ಶಿಶು ಅಭಿವೃಧ್ಧಿ ಯೋಜನೆ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಸ್ತ್ರೀಶಕ್ತಿ ಭವನದಲ್ಲಿ ತಾಲೂಕು ಮಟ್ಟದ ಪೋಷಣ ಪಕ್ವಾಡಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಮಾತನಾಡಿ,ಪೋಷಣ ಅಭಿಯಾನ ಎನ್ನುವುದು ಸರಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿದ್ದು ಸಾರ್ವಜನಿಕರು ಇದನ್ನು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.
ವಿವಿಧ ದಲಿತ ಸಂಘಟನೆಗಳ ನೂತನ ಪದಾಧಿಕಾರಿಗಳ ಆಯ್ಕೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಭಿವೃಧ್ಧಿ ಯೋಜನಾಧಿಕಾರಿ ಲಾಲಸಾಬ್ ಪೀರಾಪುರ ಮಾತನಾಡಿ,ತಾಲೂಕು ಮಟ್ಟದ ಪೋಷಣ ಪಕ್ವಾಡ ಕಾರ್ಯಕ್ರಮ ಇಂದಿನಿಂದ ಮಾರ್ಚ್ ೩೧ರ ವರೆಗೆ ನಡೆಯಲಿದ್ದು ಮಹಿಳೆಯರು ಮಕ್ಕಳು ಮತ್ತು ಗರ್ಭೀಣಿ ಸ್ತ್ರೀಯರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ.ನಾಯಕ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಬಿಆರ್‌ಸಿ ಖಾದರ ಪಟೇಲ್ ಕಂದಾಯ ಇಲಾಖೆಯ ಸೋಮನಾಥ ನಾಯಕ ಸುರೇಶ ಖಾದಿ ವೇದಿಕೆ ಮೇಲಿದ್ದರು.ಮೇಲ್ವಿಚಾರಕಿಯರಾದ ಪದ್ಮಾ ಡಿ.ನಾಯಕ ಶಶಿಕಲಾ ಪಾಟೀಲ್ ಜಯಶ್ರೀ ಗುಳಬಾಳ ಸೇರಿದಂತೆ ಅನೇಕರಿದ್ದರು.