ಕಲಬುರಗಿ: ಕರ್ನಾಟಕವನ್ನು 2025 ರೊಳಗಾಗಿ ಕ್ಷಯರೋಗ ಮುಕ್ತ ರಾಜ್ಯವನ್ನಾಗಿ ಮಾಡಲು ಇಲಾಖೆಯು ಪಣ ತೊಟ್ಟಿದೆ ಎಂದು ಕಲಬುರಗಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ ಅವರು ತಿಳಿಸಿದರು.
ಸೋಮವಾರ ಇಲ್ಲಿನ ಜಿಲ್ಲಾ ಸಮೀಕ್ಷಣಾ ಘಟಕದಲ್ಲಿ ವಿಶ್ವ ಕ್ಷಯರೋಗ ದಿನದ ಅಂಗವಾಗಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 24 ರಂದು “ಕ್ಷಯರೋಗ ನಿರ್ಮೂಲನೆಗೊಳಿಸಲು “ಕಾಲ ಘಟ್ಟಿಸುತ್ತಿದೆ”, ಟಿ. ಬಿ. ಸೋಲಿಸಿ ಕರ್ನಾಟಕ ಗೆಲ್ಲಿಸಿ” ಎಂಬ ಘೋಷ ವಾಕ್ಯದೊಂದಿಗೆ ಕ್ಷಯ ಮುಕ್ತ ರಾಜ್ಯವಾಗಲು ನಾವೆಲ್ಲರೂ ಜೊತೆಯಾಗೋಣ ಎಂದು ಅವರು ಕರೆ ನೀಡಿದರು.
ಮಾವಿನ ಹಣ್ಣಿನ ನೊಣದ ಹತೋಟಿಗೆ ಕೈಗೊಳ್ಳುವ ಕ್ರಮಗಳು
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ರೀತಿಯ ಜಾಥಾ, ರ್ಯಾಲಿಗಳು ಇರುವುದಿಲ್ಲ. ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕ್ಷಯರೋಗದ ಕುರಿತ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಗುವುದು. ಗ್ರಾಮ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಚುನಾಯಿತ ಪ್ರತಿನಿಧಿಗಳಿಗೂ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ತಾಲೂಕಿನ ಬಸ್‍ಸ್ಟಾಂಡ್‍ಗಳಲ್ಲಿಯೂ ಶ್ರವ್ಯ ಮಾಧ್ಯಮದ ಮೂಲಕ ಕ್ಷಯರೋಗ ಕುರಿತ ಜಿಂಗಲ್ಸ್ ಪ್ರಸಾರ ಮಾಡಲಾಗುತ್ತಿದೆ ಎಂದರು.
2015ರಲ್ಲಿ ದೇಶದಲ್ಲಿ ಪ್ರತಿ ಲಕ್ಷಕ್ಕೆ 192 ಕ್ಷಯರೋಗಿಗಳು ಇದಿದ್ದನ್ನು, 2025ಕ್ಕೆ ಪ್ರತಿ ಲಕ್ಷಕ್ಕೆ 44 ಕ್ಕೆ ಇಳಿಸುವ ವಿಶ್ವಾಸ ಹೊಂದಲಾಗಿದೆ. ಅದೇ ರೀತಿ ಸಾವಿನ ಸಂಖ್ಯೆ ಪ್ರತಿ ಲಕ್ಷಕ್ಕೆ 15 ರಿಂದ 3ಕ್ಕೆ ಇಳಿಸಲು ಎಲ್ಲಾ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ 2019 ರಲ್ಲಿ 4640 ಕ್ಷಯ ರೋಗಿಗಳಿದ್ದರು, 2020ರಲ್ಲಿ ಕೋವಿಡ್ ಸೋಂಕಿನ ಕಾರಣ ಹೆಚ್ಚಿನ ರೋಗಿಗಳು ಆಸ್ಪತ್ರೆಗೆ ಬರದಿರುವುದರಿಂದ ಕೇವಲ 2714 ಪ್ರಕರಣಗಳು ಮಾತ್ರ ದಾಖಲಾಗಿವೆ. ಇನ್ನೂ 2021ರ ಮಾರ್ಚ್ 19ರ ವರೆಗೆ 741 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ಅಂಕಿ ಸಂಖ್ಯೆ ವಿವರಿಸಿದರು.
ಗುರು ವ್ಯಕ್ತಿಯಲ್ಲ ಅದೊಂದು ತತ್ತ್ವ: ಜಯಶ್ರೀ ದಂಡೆ
ಕ್ಷಯರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರು ಮನೆ-ಮನೆ ಭೇಟಿ ನೀಡುವರು. ತಲಾ 10 ಜನರ ಎನ್.ಎಸ್.ಎಸ್. ತಂಡ ಅಂಗಡಿ, ಮುಂಗಟ್ಟು ಸೇರಿದಂತೆ ವಿವಿಧ ಕಡೆ ಭೇಟಿ ನೀಡಿ ರೋಗದ ಕುರಿತು ಅರಿವು ಮೂಡಿಸಲಿದ್ದಾರೆ. ಸರ್ಕಾರವು ಕ್ಷಯರೋಗಿಗೆ ನಿಕ್ಷಯ ಪೋಷಣಾ ಯೋಜನೆಯಡಿ ಪ್ರತಿ ತಿಂಗಳು 500 ರೂ. ಗಳ ಧನಸಹಾಯ ಹಾಗೂ ಕ್ಷಯರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಖಾಸಗಿ ಹಾಗೂ ಆಶಾ ಕಾರ್ಯಕರ್ತೆಯರಿಗೆ 1000 ರೂ. ಗಳ ಗೌರವ ಧನ ನೀಡಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ವಿವೇಕಾನಂದ ರೆಡ್ಡಿ, ಜಿಲ್ಲಾ ಕ್ಷಯರೋಗ ಆಪ್ತ ಸಮಾಲೋಚಕ ಮಂಜುನಾಥ ಕಂಬಳಿಮಠ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಅಬ್ದುಲ್ ಜಬ್ಬಾರ್, ಸಂಯೋಜಕ ಶಶಿಧರ ಕಮಲಾಪೂರ, ಜಿಲ್ಲಾ ಹಿರಿಯ ಮೇಲ್ವಿಚಾರಕ ಸಂತೋಷ ಕಾಳಗಿ ಇದ್ದರು.