ಶಹಾಬಾದ: ಮಹಿಳೆಯರು ಆರ್ಥಿಕವಾಗಿ ಸಬಲರಾದಲ್ಲಿ ಮಾತ್ರ ಕುಟುಂಬದ ಆರ್ಥಿಕ ಭದ್ರತೆ ಹೆಚ್ಚಾಗುವ ಮೂಲಕ ಸ್ವಾಲಂಬಿ ಬದುಕನ್ನು ನಡೆಸಲು ಸಾಧ್ಯವಾಗಲಿದೆ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ಅವರು ಸೋಮವಾರ ವಿಠ್ಠಲ್ ರುಕ್ಮಾಯಿ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಕಲಬುರಗಿ ವಿಭಾಗದ ವತಿಯಿಂದ ಶಹಾಬಾದ ತಾಲೂಕಾದ ಗ್ರಾಪಂ ಮತ್ತು ನಗರಸಭೆ ವ್ಯಾಪ್ತಿಯ ಮಹಿಳೆಯರಿಗೆ ಪ್ರಗತಿ ಕೇಂದ್ರದಿಂದ ಹೊಲಿಗೆ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಭಗತಸಿಂಗ್ ಹುತಾತ್ಮ ದಿನಾಚರಣೆ: ಗಲ್ಗಂಬಕ್ಕೆ ಮುತ್ತಿಟ್ಟ ಭಗತ್‌ಸಿಂಗ್ ಹೋರಾಟದ ಸ್ಪೂರ್ತಿ
ಈ ಹೊಲಿಗೆ ತರಬೇತಿಯಿಂದ ಮಹಿಳೆಯರು ಸ್ವಂತ ಉದ್ಯೋಗ ಹಮ್ಮಿಕೊಳ್ಳುವ ಜತೆಗೆ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುವುದರ ಮೂಲಕ ಕುಟುಂಬದ ಭದ್ರತೆಗೆ ಸಹಕಾರಿಯಾಗಲಿದೆ.ಕೇವಲ ಮಹಿಳೆಯರಿಗೆ ತರಬೇತಿ ನೀಡಿದರೇ ಸಾಲದು.ಅವರಿಗೆ ಯಂತ್ರ ಸೇರಿದಂತೆ ತಾಂತ್ರಿಕ ಸಾಮಗ್ರಿಗಳನ್ನು ಒದಗಿಸಿದರೇ ಬಹಳ ಅನುಕೂಲವಾಗುತ್ತದೆ ಎಂದು ಹೇಳಿದರು.
ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮ.ಎ.ಕಡ್ಲಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ಮಹಿಳೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಹೊಂದಲು ಅತ್ಯುತ್ತಮ ಕೌಶಲ್ಯಗಳನ್ನು ಹೊಂದಿ ಸ್ವಾಲಂಬಿಯಾಗಿ ಬದುಕಲು ಕಲಿಯಬೇಕು.ಮಹಿಳೆ ಉದ್ಯಮಶೀಲ ಮಹಿಳೆಯಾಗಬೇಕು.ಮಹಿಳೆಯರು ಸ್ವಾವಲಂಬಿ ಬದುಕಲು ನಡೆಸಲು ಸರ್ಕಾರದಿಂದ ಅನೇಕ ಯೋಜನೆಗಳಿವೆ.ಅಲ್ಲದೇ ಬ್ಯಾಂಕುಗಳು ಕೂಡ ಮಹಿಳಯರಿಗೆ ಸಾಲ ಸೌಲಭ್ಯಗಳು ನೀಡುತ್ತವೆ.ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಮಹಿಳೆ ಮುಂದುವರಿಯಬೇಕೆಂದು ತಿಳಿಸಿದರು.
ಮಾಸಿಕ ಶರಣ ಸಂಗಮ ಮತ್ತು ಎರಡು ಕೃತಿಗಳ ಲೋಕಾರ್ಪಣೆ
ತಾಲೂಕಾ ವಿಕಾಸ ಅಕಾಡೆಮಿಯ ಸಂಯೋಜಕ ಕನಕಪ್ಪ ದಂಡಗುಲಕರ್ ಮಾಥನಾಡಿ, ಮಹಿಳೆಯರು ಸ್ವಾವಲಂಬಿಗಳಾಗಬೇಕು, ಮನೆಯ ಕೆಲಸದ ಜೊತೆಗೆ ಹೊಲಿಗೆ ಹೊಲೆಯುವದಾಗಲಿ, ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳಬೇಕೆಂದು ತಿಳಿಸಿದರು.
ಹೊಲಿಗೆ ತರಬೇತಿದಾರರಾದ ಜಯಶ್ರೀ ಮಠ, ಅಣ್ಣಾರಾವ ಬಾಳಿ ರಾವೂರ, ಮಲ್ಲಿಕಾರ್ಜುನ ಇಟಗಿ ಮಾಲಗತ್ತಿ, ಸುನೀಲ ಭಂಕೂರ, ಸಂಧ್ಯಾ ತೊನಸನಹಳ್ಳಿ(ಎಸ್), ಸಿದ್ದಲಿಂಗ ಹೊನಗುಂಟಾ ಇತರರು ಇದ್ದರು. ಶರಣು ವಸ್ತ್ರದ್ ನಿರೂಪಿಸಿದರು, ಸಂಧ್ಯಾ ಸ್ವಾಗತಿಸಿದರು, ರಮೇಶ ಸಾಹು ಮರತೂರ ವಂದಿಸಿದರು.