ಕಲಬುರಗಿ: ಶತಮಾನ ಪೂರೈಸಿದರೂ ಇದೂವರೆಗೂ ಮಹಿಳಾ ಸಾಹಿತಿಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗದೇ ಇರುವುದು ಖೇದನೀಯ ಎಂದು ನಾಡಿನ ಹಲವಾರು ಮಹಿಳಾ ಲೇಖಕಿಯರು ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು ಒಕ್ಕೊರಲಿನಿಂದ ಹೇಳಿದ್ದಾರೆ.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳಾ ಸಾಹಿತಿಯೊಬ್ಬರು ಅಧ್ಯಕ್ಷರಾಗಬೇಕೆಂಬ ಅಪೇಕ್ಷೆ ಅನೇಕರದ್ದು. ಆರು ತಿಂಗಳ ಹಿಂದೆಯೇ ಮಹಿಳಾ ಅಧ್ಯಕ್ಷರಾಗಲಿ ಎಂಬ ಕೂಗು ಎದ್ದಿತ್ತು. ನಾಡಿನ ಹಲವಾರು ಜಿಲ್ಲೆಗಳ ಹಿರಿಯ ಸಾಹಿತಿಗಳು ಈ ಬಾರಿ ಮಹಿಳೆ ಅಧ್ಯಕ್ಷರಾಗುವ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹಿರಿಯ ಲೇಖಕಿ, 30 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಡಾ.ಸರಸ್ವತಿ ಚಿಮ್ಮಲಗಿ ಅವರು ರಾಷ್ಟ್ರ, ರಾಜ್ಯ ಮಟ್ಟದ 29 ಪ್ರಶಸ್ತಿಗಳನ್ನು ಪಡೆದಿದ್ದು, ಕಸಾಪ ರಾಜ್ಯ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸುವಂತೆ ಕೋರಿದ್ದಾರೆ.
ಜನ್ಮಭೂಮಿ ವಿಜಯಪುರ ಜಿಲ್ಲೆಯಾದರೂ ಅವರ ಶಿಕ್ಷಣ ಮತ್ತು ವೃತ್ತಿ ಜೀವನ ನಡೆದಿದ್ದು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ. ಕಲಬುರಗಿ ಜಿಲ್ಲೆಯಲ್ಲಿ ಸುಮಾರು 36 ವರ್ಷಗಳ ಕಾಲ ಶಿಕ್ಷಕಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಲ್ಲದೇ, ಸಾಹಿತ್ಯ- ಸಾಂಸ್ಕøತಿಕ ವಾತಾವರಣವನ್ನು ಉಂಟು ಮಾಡಿದ್ದಾರೆ. ನೇರ ಮತ್ತು ದಿಟ್ಟ ಲೇಖಕಿ ಆಗಿರುವ ಅವರು, ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಇವರ ಬರೆದ ಕವಿತೆಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಪಠ್ಯಗಳಾಗಿದ್ದವು. ಇವರು ಬರೆದ ಕೆಲವು ಕವಿತೆಗಳು ಭಾರತೀಯ ಎಲ್ಲ ಭಾಷೆಗಳಲ್ಲಿ ಅನುವಾದಗೊಂಡಿವೆ.
ರೇಡಿಯೋ ಮತ್ತು ದೂರದರ್ಶನ ಕೇಂದ್ರದಲ್ಲಿ ಪ್ರಸಾರವಾದ 100 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅನೇಕ ನಾಟಕಗಳು ರೇಡಿಯೋ ಮತ್ತು ಟಿವಿಗಳಲ್ಲಿ ಬಿತ್ತರಗೊಂಡಿವೆ. ಇವರ ಕುರಿತು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಎರಡು ಎಂಫಿಲ್ ಮತ್ತು ಪಿಎಚ್‍ಡಿ ಅಧ್ಯಯನ ಮಾಡಲಾಗಿದೆ. ಇಂತಹ `ಧೀಮಂತೆ’ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವ ಹಿಡಿಯಬೇಕೆಂದು ಎಲ್ಲರ ಒಕ್ಕೊರಲಿನ ಒತ್ತಾಸೆಯಾಗಿದೆ.
ಈ ಬಗ್ಗೆ ನಾಡಿನ ಹಿರಿಯ ಲೇಖಕಿಯರು ಮತ್ತು ಮಾಜಿ ಸಚಿವರಾದ ಲೀಲಾದೇವಿ ಆರ್.ಪ್ರಸಾದ್, ಬಿ.ಟಿ.ಲಲಿತಾನಾಯಕ, ಹಂಪಿ ಕನ್ನಡ ವಿವಿ ಮಾಜಿ ಕುಲಪತಿ ಡಾ.ಮಲ್ಲಿಕಾ ಘಂಟಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ ಬೆಂಗಳೂರು, ಜನವಾದಿ ಮಹಿಳಾ ಸಂಘಟನೆಯ ಕೆ.ನೀಲಾ ಕಲಬುರಗಿ, ಮಂಡ್ಯ ಜಿಲ್ಲೆಯ ಭಾರತೀಯ ಮಹಿಳಾ ಕಲೆ ಮತ್ತು ಸಾಹಿತ್ಯ ಟ್ರಸ್ಟ್ ಅಧ್ಯಕ್ಷೆ ವಿದೂಷಿ ಶಾರದಾ ನಿಂಗೇಗೌಡ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಸಂಕಣ್ಣವರ, ಅಖಿಲ ಭಾರತೀಯ ಕವಿಯಿತ್ರಿಯರ ಸಂಘದ ಅಧ್ಯಕ್ಷ ಡಾ.ವಿಜಯಲಕ್ಷ್ಮೀ ಕೋಸಗಿ, ರಾಯಚೂರು ಜಿಲ್ಲೆಯ ಭಗೀರಥ ವಿದ್ಯಾನಿಕೇತನ ಟ್ರಸ್ಟ್ ಅಧ್ಯಕ್ಷೆ ಸ್ಮಜಾತಾ ಶ್ರೀಕಾಂತರಾವ, ಸಾಹಿತಿಗಳಾದ ಇಂದಿರಾ ಪಾಟೀಲ ಮೈಸೂರು, ನೀಲಗಂಗಾ ಚರಂತಿ ಮಠ ಬೆಳಗಾವಿ, ಕೆ.ಸುನಂದಾ ವಿಜಯಪುರ, ನ್ಯಾಯವಾದಿ ಮತ್ತು ಲೇಖಕಿ ವಿದ್ಯಾವತಿ ಅಂಕಲಗಿ, ಸಾಹಿತಿ ಜ್ಯೋತಿ ಬದಾಮಿ ಬೆಳಗಾವಿ, ಟಿ.ಸಿ.ಮಂಜುಳಾ ತುಮಕೂರು, ಸಾಹಿತಿಗಳಾದ ಕಮಲಾ ಸುದರ್ಶನ ಬೆಂಗಳೂರು ಮತ್ತು ಮಂಜುಳಾ ಶಿವಾನಂದನ್ ಬೆಂಗಳೂರು, ಹಿರಿಯ ಸಾಹಿತಿಗಳಾದ ಹೇಮಾ ಪಟ್ಟಣಶೆಟ್ಟಿ ಧಾರವಾಡ, ಶಶಿಕಲಾ ವಸ್ತ್ರದ ಬೀದರ್, ಪುಷ್ಪಾ ಅಯ್ಯಂಗಾರ ಮೈಸೂರು, ಡಾ.ಗೀತಾಂಜಲಿ ಮೈಸೂರು, ಪ್ರೇಮಾಮಣಿ ಮೈಸೂರ, ರಂಗಕರ್ಮಿ ಶೋಭಾ ರಂಜೋಳಕರ್, ವಿಜಯಪುರ ಕಸಾಪ ಮಾಜಿ ಅಧ್ಯಕ್ಷೆ ಭಾರತಿ ಪಾಟೀಲ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ಜಿಲ್ಲಾಧ್ಯಕ್ಷ ಕೊಟ್ರೇಶ ಉಪ್ಪಾರ, ಪ್ರೊ.ಜಿ.ಟಿ.ವೀರಪ್ಪ ಮಂಡ್ಯ, ಮುದ್ದೇಗೌಡರು ಮಂಡ್ಯ, ಲೇಖಕಿ ಸುಜಾತಾ ಮಂಗಳೂರು, ಲೇಖಕ ನಾರಾಯಣಸ್ವಾಮಿ ಚಿಕ್ಕಬಳ್ಳಾಪುರ, ಹಿರಿಯ ಲೇಖಕರಾದ ಪ್ರೊ.ವಸಂತ ಕುಷ್ಟಗಿ, ಏ.ಕೆ.ರಾಮೇಶ್ವರ, ಗುಲಬU್ರ್ಪ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಚ್.ಟಿ.ಪೋತೆ, ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ರಂಗಕರ್ಮಿ, ಬರಹಗಾರ ಮಲ್ಲಿಕಾರ್ಜುನ ಕಡಕೋಳ, ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಜಿ.ಎಂ.ಶಿರಹಟ್ಟಿ, ಲೇಖಕ ಪ್ರೊ. ರಾಜೇಂದ್ರ ಬಿರಾದಾರ ವಿಜಯಪುರ, ಹಿರಿಯ ಲೇಖಕ ಎಸ್.ಪಿ.ಸುಳ್ಳದ್, ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಸಿ.ಎನ್.ಬಾಬಳಗಾಂವ ಕಲಬುರಗಿ, ಸೂರ್ಯಕಾಂತ ಪಾಟೀಲ ಆಳಂದ, ಕಲಬುರಗಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಜಯಕುಮಾರ ತೇಗಲತಿಪ್ಪಿ ಸೇರಿದಂತೆ ಅನೇಕರು ಮಹಿಳಾ ಅಧ್ಯಕ್ಷರಾಗುವ ಬಗ್ಗೆ ಒತ್ತಾಸೆ ಮಾಡಿದ್ದಾರೆ.
ಈ ಎಲ್ಲ ಹಿರಿಯರ, ಲೇಖಕರ ಒತ್ತಾಸೆಗೆ ಮಣಿದು, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತೀರ್ಮಾನಿಸಿದ್ದಾಗಿ ಡಾ.ಸರಸ್ವತಿ ಚಿಮ್ಮಲಗಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಸ್ಪರ್ಧಿಸುತ್ತಿದ್ದು, ಅವರಿಗೆ ಅವಕಾಶ ನೀಡಬೇಕೆಂದು ಚರ್ಚೆ ನಡೆಯುತ್ತಿದೆ.