ಕೊರೊನಾ 2ನೇ ಅಲೆ: ಗಂಭೀರವಾಗಿ ಪರಿಗಣಿಸಲು ಆಗ್ರಹ

0
22

ಕಲಬುರಗಿ : ಕರೊನಾ ಎರಡನೆಯ ಅಲೆ ಆರಂಭವಾಗಿ ತೀವ್ರ ಗತಿಯಿಂದ ದಿನೆ ದಿನೆ ಹೆಚ್ಚಾಗುತ್ತಿದೆ. ಇದರಿಂದ ಸೊಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯೂ ಸಹ ಹೆಚ್ಚುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಮಹಾರಾಷ್ಟ್ರ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಕಲ್ಯಾಣ ಕರ್ನಾಟಕದ ಬೀದರ, ಕಲಬುರಗಿ ಜಿಲ್ಲೆಯ ಜನರು ಎಚ್ಚರ ವಹಿಸಬೇಕಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಾದೇಶಿಕ ಆಯುಕ್ತರು ಸೇರಿದಂತೆ ಆಯಾ ಜಿಲ್ಲೆಯ ಜಿಲ್ಲಾಡಳಿತ ಕೊರೊನಾ ಎರಡನೆಯ ಅಲೆ ತಡೆಗಟ್ಟುವ ವಿಷಯದಲ್ಲಿ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಕೈಗೊಳ್ಳಬೇಕು ದ್ದಾರೆ.

Contact Your\'s Advertisement; 9902492681

ಕೊರೊನಾ ಮೊದಲನೇ ಅಲೆಯ ಮಹಾಮಾರಿಯಿಂದ ಬಲಿಯಾಗಿರುವುದು ಇಡೀ ದೇಶ ದಲ್ಲಿಯೇ ಕಲಬುರಗಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಈ ಹಿಂದೆ ಕೊರೊನಾ ಮಹಾಮಾರಿಯ ತಡೆಗಟ್ಟಲು ಆರಂಭದಲ್ಲಿ ಏಕಮಾತ್ರ ಮಾರ್ಗ ಲಾಕ ಡೌನ ಎಂದು ಪರಿಗಣಿಸಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ಮಾಡಲಾಗಿತ್ತು.

ದೇಶದ ಎಲ್ಲಾ ಜನರು ಸಹಕರಿಸಿದರು. 2020-2021ನೇ ಸಾಲಿನ ಒಂದುವರೆ ವರ್ಷದ ಅವಧಿಯಲ್ಲಿ ಕೊರೊನಾ ಹರಡುವಿಕೆ ಮತ್ತು ಇದನ್ನು ತಡೆಗಟ್ಟುವ ವಿಷಯಕ್ಕೆ ಸಂಬಂಧಿಸಿ ಸರಕಾರಕ್ಕೆ ಹಾಗೂ ಆರೋಗ್ಯ ಇಲಾಖೆಗೆ ಅಪಾರ ಪ್ರಮಾಣದ ಅನುಭವವು ಸಹ ಆಗಿದೆ, ಜನರಿಗೂ ಇದರ ಮನವರಿಕೆಯಾಗಿದೆ.

ಈ ಮಧ್ಯೆ ಪ್ರಸ್ತುತ ದಿನಗಳಲ್ಲಿ ಕೊರೊನಾ ತಡೆಗಟ್ಟುವಿಕೆಗೆ ಸರಕಾರ ವೈಜ್ಞಾನಿಕ ಮಾದರಿಯ ಕ್ರಮಗಳನ್ನು ಅನುಸರಿಸುವ ಮುಖಾಂತರ ಜನರ ಜೀವನ ನಡೆಯುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡುವದರ ಬಗ್ಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಸಂಘಟನೆಯ ಲಕ್ಷ್ಮಣ ದಸ್ತಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here