ಕಲಬುರಗಿ: ಕರೋನಾ ಸೋಕಿನಿಂದ ಕಲಾವಿದರ ಜೀವನ ದುಸ್ತರವಾಗಿದ್ದು, ಅವರು ಜೀವನ ನಡೆಸಲು ಆಗುತ್ತಿಲ್ಲ. ಹೀಗಾಗಿ ಅವರ ನೆರವಿಗೆ ಸರಕಾರ ಮುಂದಾಗಬೇಕು ಎಂದು ಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ ಹೇಳಿದರು.
ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಕಲಬುರಗಿ ಆರ್ಟ್ ಥೆಟರ್, ಸಂಸ್ಕಾರ ಪ್ರತಿಷ್ಠಾನ, ನಿಮ್ಮಿಂದ ನಿಮಗೋಸ್ಕರ ಸಮಾಜ ಪರಿವರ್ತನಾ ಸೇವಾ ಸಂಘದ ಆಶ್ರಯದಲ್ಲಿ ವಿಶ್ವ ರಂಗ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಪೋರೇಟ್ ಕೊಟ್ರೆಗೌಡ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
’ಪತ್ರಿಕೋದ್ಯಮ ಮತ್ತು ರಂಗಭೂಮಿ’ ಶಿಕ್ಷಣಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಭಾಕರ ಜೋಷಿ ಮನವಿ
೧೯೬೭ರಲ್ಲಿ ವಿಶ್ವ ರಂಗಭೂಮಿ ದಿನ ಆಚರಿಸಲು ಪ್ರಾರಂಭಿಸಲಾಯಿತು. ರಾಜ್ಯದಲ್ಲಿ ೧೯೯೯ರಲ್ಲಿ ಅಸ್ತಿತ್ವಕ್ಕೆ ತರಲಾಯಿತು ಎಂದು ಹೇಳಿದರು. ಗಭೂಮಿಯೂ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದೆ. ಸಮಾಜದ ಪರಿವರ್ತನೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ವೈದ್ಯ ಸಾಹಿತಿ ಡಾ.ಎಸ್.ಎಸ್.ಗುಬ್ಬಿ ಮಾತನಾಡಿ, ಹಾಸ್ಯ ಭರಿತ ನಾಟಕ ನೋಡುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ಮನುಷ್ಯರು ನಗುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಚನ ಚಳವಳಿ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ
ಕಲಬುರಗಿ ಆರ್ಟ್ ಥೆಟರ್ ಅಧ್ಯಕ್ಷ ಸುನೀಲ ಮಾನ್ಪಡೆ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಬಿ.ವಿ.ಚಕ್ರವರ್ತಿ, ವಿಠ್ಠಲ ಚಿಕಣಿ, ಕಪಿಲ್‌ದೇವ ಚಕ್ರವರ್ತಿ, ಸಾಯಿಬಣ್ಣ ದೊಡ್ಡಮನಿ, ಸುರೇಶ, ಭೀಮಾಶಂಕರ ದುದನಿ, ಮೈಲಾರಿ ದೊಡ್ಡಮನಿ, ಸಿದ್ದಲಿಂಗ ಪಾಳ, ಅಪೂರ್ವಲಾಲ್ ನದಾಫ್ ,ವೆಂಕಟೇಶ ಜಾಧವ ,ಬಾಬಾ ಸಾಹೇಬ್ ಪಠಣ, ಇತರರು ಇದ್ದರು.