ಚಿತ್ತಾಪುರ: ತಾಲ್ಲೂಕಿನ ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ವತಿಯಿಂದ ನಡೆದಾಡುವ ದೇವರು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಗಳ 114 ನೇ ಜನ್ಮ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಬಡ ಮಕ್ಕಳಿಗೆ ನೋಟ್ ಬುಕ್ ವಿತರಣೆ ಹಾಗೂ ಜಾನಪದ ಕಲಾವಿದರಿಗೆ ವಿಶೇಷ ಸನ್ಮಾನ ಸಮಾರಂಭ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ರಾವೂರಶ್ರೀಗಳು ಮಾತನಾಡಿ, ಸಿದ್ದಗಂಗಾ ಮಠವನ್ನು ತಮ್ಮ ಕಾಯಕ,ದಾಸೋಹದ ಮೂಲಕ ವಿಶ್ವವಿಖ್ಯಾತಗೊಳಿಸಿದವರು ಡಾ.ಶಿವಕುಮಾರ ಸ್ವಾಮೀಜಿ ಜೊಳಿಗೆ ಹಿಡಿದು ಊರೂರು ತಿರುಗಿ ಭಿಕ್ಷೆ ಬೇಡಿ ಮಠವನ್ನು ಮತ್ತು ಭಕ್ತರನ್ನು ಸಲುಹಿಡರು ಎಂದು ನುಡಿದರು.
ನಿವೃತ್ತ ಎಸ್.ಪಿ.ಗೆ ’ಜ್ಞಾನ ದಾಸೋಹ ರತ್ನ’ ಪ್ರಶಸ್ತಿ ಪ್ರದಾನ
ಈ ಸಂದರ್ಭದಲ್ಲಿ ಮುಖಂಡರಾದ ಅಣ್ಣಾರಾವ ಬಾಳಿ,ಗುರುನಾಥ ಗದಗಲ್,ತಿಪ್ಪಣ್ಣ ವಗ್ಗರ್,ಯುನುಸ್ ಪ್ಯಾರೆ,ಧರ್ಮಸ್ಥಳದ ಯೋಜನಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಈಶ್ವರ ದೊಡ್ಡಮನಿ, ರವಿ ನಡುವಿನಕೇರಿ,ಡಾ. ಮಲ್ಲಿನಾಥ ತಳವಾರ, ಮಹೇಶ ಬಾಳಿ,ಮನೋಹರ ಪಂಚಾಳ, ನಾಗೇಶ ಸಜ್ಜನ,ಶರಣು ಜ್ಯೋತಿ, ಶಾಂತು ಬಾಳಿ,ಅಶೋಕ ಗೋಳಾ,ದತ್ತು ಗುತ್ತೆದಾರ ಸೇರಿದಂತೆ ಹಲವಾರು ಇದ್ದರು.