ಶಹಾಬಾದ: ಸಮಾಜವಾದಿ ಭಾರತದ ಕನಸು ಭಗತ್‌ಸಿಂಗ್‌ರದಾಗಿತ್ತು ಎಂದು ಎಸ್‌ಯುಸಿಐ ಕಮೂನಿ? ಪಕ್ಷದ ಸ್ಥಳೀಯ ಕಾರ್ಯದರ್ಶಿ ಗಣಪತರಾವ.ಕೆ.ಮಾನೆ ಹೇಳಿದರು.
ಅವರು ನಗರದ ಬಸವೇಶ್ವರ ವೃತ್ತದಲ್ಲಿ ಎಐಡಿವೈಓ ಶಹಾಬಾದ ಸ್ಥಳೀಯ ಸಮಿತಿಯು ಹಮ್ಮಿಕೊಂಡ ಶಹೀದ್ ಭಗತ್‌ಸಿಂಗ್‌ರ ೯೧ ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಗತ್‌ಸಿಂಗ್‌ರು ಮಾನವನಿಂದ ಮಾನವರ ಶೋ?ಣೆ ರಹಿತ ಸಮಾಜವಾದಿ ಭಾರತ ಕನಸು ಹೊಂದಿ ಹುತಾತ್ಮ ಸಾಮ್ರಾಟರಾದರು. ಆದರೆ ದೇಶ ಸ್ವತಂತ್ರವಾಗಿ ೭೦ ವರ್ಷಗಳು ಕಳೆದರು ಬಡತನ, ನಿರುದ್ಯೋಗ ,ಬೆಲೆ ಏರಿಕೆ , ಭ್ರ?ಚಾರದಿಂದ ಜನ ತತ್ತರಿಸುತ್ತದ್ದಾರೆ. ಇದರ ವಿರುದ್ಧ ಹೋರಾಡಲು ಭಗತಸಿಂಗರ ವಿಚಾರ ಬಹಳ ಅವಶ್ಯವಿದೆ ಎಂದರು.
ಕೋವಿಡ್ ಮರಣ ಪ್ರಮಾಣ ತಗ್ಗಿಸುವತ್ತ ಹೆಚ್ಚು ಗಮನ ಕೊಡಿ: ಗೋವಿಂದ ಕಾರಜೋಳ
ಎಐಡಿವೈಓ ಜಿಲ್ಲಾ ಜಂಟಿ ಕಾರ್ಯದರ್ಶಿ ಮಲ್ಲಿನಾಥ ಹುಂಡೆಕಲ್ ಮಾತನಾಡಿ, ಭಗತ್‌ಸಿಂಗ್‌ರ ಕುಟುಂಬ, ಹೋರಾಟದ ಕುಟುಂಬವಾಗಿತ್ತು. ಜಲಿಯನ್ ವಾಲಾಭಾಗ ಘಟನೆಯಿಂದ ಭಗತ್ ಸಿಂಗ್‌ರು ಇಡಿ ಜೀವನ ಸ್ವತಂತ್ರವಾಗಿ ಹೋರಾಟಕ್ಕೆ ಮುಡುಪಾಗಿಟ್ಟಿದ್ದರು. ಇಂತಹ ಕ್ರಾಂತಿಕಾರಿಯ ವಿಚಾರ ಪಠ್ಯಪುಸ್ತಕಗಳಿಂದ ತಗೆಯುತ್ತಿರುವುದು ತೀವ್ರವಾಗಿ ವಿರೋಧಿಸಿದರು. ಎಐಡಿವೈಓ ಅಧ್ಯಕ್ಷ ಸಿದ್ದು ಚೌಧರಿ ಮಾತನಾಡಿದರು.
ಯುವಜರು ಪಂಜುಗಳು ಹಿಡಿದು ಇಂಕ್ವಿಲಾಬ ಜಿಂದಾಬಾದ್, ಭಗತ್ ಸಿಂಗ್ ಅಮರ್ ಹೇ ಎಂದು ಘೋ?ಣೆ ಕೊಗಿದರು.ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ.ಎಸ್.ಇಬ್ರಾಹಿಂಪೂರ ಭಗತ್‌ಸಿಂಗ್‌ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.ಎಐಡಿವೈಓ ಉಪಾಧ್ಯಕ್ಷ ನೀಲಕಂಠ.ಎಂ.ಹುಲಿ ನಿರೂಪಿಸಿದರು.ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಹೆಚ್, ರಾಘವೇಂದ್ರ.ಎಂ.ಜಿ , ತಿಮ್ಮಯ್ಯ ಮಾನೆ ,ವಿಶ್ವನಾಥ ಸಿಂಘೆ ,ಪ್ರವೀಣ ಬಣಮೀಕರ್, ರಘು ಪವಾರ್, ಶ್ರೀನಿವಾಸ್ ಭಾಗವಹಿಸಿದ್ದರು.