ಚಿತ್ತಾಪುರ: ಪಟ್ಟಣದ ಪ್ರಾರ್ಥನಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಸಾಪ ಸದಸ್ಯರ ಸಭೆಯಲ್ಲಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಆಕಾಂಕ್ಷಿ ವೀರಭದ್ರಪ್ಪ ಸಿಂಪಿ ಅವರು ಕಳೆದ ವರ್ಷದಲ್ಲಿ 85 ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆದು ರಾಜ್ಯದಲೇ ದಾಖಲೆಯಾಗಿದೆ.ಈ ಬಾರಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವ ಗುರಿಯಿದೆ ಅನೇಕ ಯೋಜನೆಗಳು ಹಾಕಿಕೊಂಡಿದೆನೆ ಆದ್ದರಿಂದ ಎಲ್ಲಾ ಸದಸ್ಯರು ಬೆಂಬಲ ನೀಡುವ ಮೂಲಕ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಬೇಕು ಎಂದು ಕೋರಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಈಗಾಗಲೇ ಮೂರು ಅವಧಿಗೆ ಆಯ್ಕೆಯಾಗಿ ಜಿಲ್ಲೆಯಲ್ಲಿ ಸಾಹಿತ್ಯದ ಬೆಳೆವಣಿಗೆ ಜೊತೆಗೆ ಅನೇಕ ಅಭಿವೃದ್ಧಿ ಕೆಲಸಗಳು ಮಾಡಿದ್ದೇನೆ ಈ ಬಾರಿ ನಿಲ್ಲುವುದಿಲ್ಲ ಎಂದೇ ಹೇಳಿದ್ದೆ ಆದರೆ ಕಸಾಪ ಸದಸ್ಯರ ಅಭಿಮಾನಿಗಳ ಮತ್ತು ಹಿರಿಯ ಸಾಹಿತಿಗಳ ಒತ್ತಾಯದ ಮೇರೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಹೇಳಿದರು.
ಶಹೀದ್ ಭಗತ್‌ಸಿಂಗ್‌ರ ೯೧ ನೇ ಹುತಾತ್ಮ ದಿನಾಚರಣೆ
ಸಭೆಯಲ್ಲಿ ಕಸಾಪ ಜಿಲ್ಲಾ ಸಂಚಾಲಕ ಡಾ.ಭೀಮರಾವ ಅರಿಕೇರಿ, ಜಿಲ್ಲಾ ವಿಶೇಷ ಅಹ್ಹಾನಿತರಾದ ವೀರಸಂಗಪ್ಪಾ ಸುಲೇಗಾಂವ,ಚಿತ್ತಾಪುರ ಕಸಾಪ ಅಧ್ಯಕ್ಷ ಕಾಶಿನಾಥ ಗುತ್ತೆದಾರ, ಸದಸ್ಯರಾದ ಶಾಂತಕುಮಾರ ಮಳಖೇಡ, ಮಹೇಶ ಕಾಶಿ,ನರಸಪ್ಪ ಚಿನ್ನಕಟ್ಟಿ, ಮಹಮದ್ ಇಬ್ರಾಹಿಂ ರೇವಣಸಿದಪ್ಪ ರೋಣದ ಮಾತನಾಡಿದರು.
ಮಲ್ಲಿಕಾರ್ಜುನ ಎಮ್ಮೆನೂರ್,ಜಗದೇವ ದಿಗ್ಗಾಂವಕರ್,ದೇವಿಂದ್ರ ಕುಮಸಿ, ದೇವಿಂದ್ರಪ್ಪಾ ನಂದೂರಕರ್,ಮಹೇಶ ಜಾಯಿ,ಕಾಶಿರಾಯ ಕಲಾಲ್,ರವಿಶಂಕರ ಬರ್ಲಿ,ಎಂ.ಡಿ.ಮಶಾಖ ಸಿದ್ದಲಿಂಗ ಬಾಳಿ,ನರಸಿಂಹ ಆಲಮೇಲಕರ್ ಇತರರು ಇದ್ದರು.ನಂತರ ಪಟ್ಟಣದ ಕಸಾಪ ಹಿರಿಯ ಸದಸ್ಯರ ಮತ್ತು ಪ್ರಮುಖರ ಮನೆಗಳಿಗೆ ಭೇಟಿ ನೀಡಿ ಬೆಂಬಲ ನೀಡಲು ಮನವಿ ಮಾಡಿದರು.