‘ಏಪ್ರಿಲ್ ಫೂಲ್ ಬದಲು ಏಪ್ರಿಲ್ ಕೂಲ್ ಡೇ’ ಆಚರಣೆ

0
51

ಕಲಬುರಗಿ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣಾ ಸಮಿತಿ(ರಿ), ಕಲಬುರಗಿ, ಸಮಾಜ ಕಾರ್ಯ ಅಧ್ಯಯನ ವಿಭಾಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ, ಹಾಗೂ ವನಸಿರಿ ಪೌಂಡೇಶನ(ರಿ) ಕಲಬುರಗಿ ಸಹಯೋಗದೊಂದಿಗೆ ಏಪ್ರಿಲ್ ಫೂಲ್ ಬದಲು ಏಪ್ರಿಲ್ ಕೂಲ್ ಡೇ ಕಾರ್ಯಕ್ರಮವನ್ನು ಪಕ್ಷಿ ಪ್ರಾಣಿಗಳಿಗೆ ನೀರು ಮತ್ತು ಆಹಾರ ಧಾನ್ಯ ಇಡುವ ಮೂಲಕ ಗುಲಬರ್ಗಾ ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಂದೆ ಆಚರಿಸಲಾಯಿತು.

ಈ ಒಂದು ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದಂತಹ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ ಶರಣಬಸಪ್ಪ ಕೊಟೆಪ್ಪಗೋಳ ಮಾತನಾಡಿ ಒಂದು ಸಂಸ್ಥೆಯು ಬೇಸಿಗೆಯ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಹಾಗೂ ಆಹಾರ ಧಾನ್ಯ ಇಡುತ್ತಿರುವುದು ಶ್ಲಾಘನೀಯವಾದ ಕಾರ್ಯ.  ನಾವು ಮಾಡುತ್ತಿರುವ ಕೆಲಸ ಸಣ್ಣದಾದರೂ ಇದೊಂದು ಅಮೂಲ್ಯವಾದ ಕಾರ್ಯವಾಗಿದೆ. ಯಾವುದೇ ಒಂದು ಒಳ್ಳೆಯ ಕೆಲಸ ಕಾರ್ಯ ಪ್ರಾರಂಭವಾಗಬೇಕಾದರೆ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ.

Contact Your\'s Advertisement; 9902492681

ಜಗದೇವ ಸುಬೇದಾರಗೆ ಮುಖಂಡರಿಂದ ಸನ್ಮಾನ

ಈ ಒಂದು ವಿಶ್ವವಿದ್ಯಾಲಯ ಸುಮಾರು ೮೦೦ ಎಕರೆಯಷ್ಟು ವಿಶಾಲವಾದ ಪ್ರದೇಶವಿದೆ. ಆದರೆ ಈ ಒಂದು ಪ್ರದೇಶಕ್ಕೆ ತಕ್ಕಂತೆ ಕಡಿಮೆ ಗಿಡ ಮರಗಳು ಪಕ್ಷಿಗಳು ನಾವು ಕಾಣುತ್ತಿದ್ದೇವೆ. ಈ ಒಂದು ಪ್ರದೇಶದಲ್ಲಿ ನೀರಿನ ಕೊರತೆಯನ್ನು ಕಾಣುತ್ತೇವೆ. ನಾಲ್ಕು ಐದು ಕಡೆಗೆ  ನೀರು ಸಂಗ್ರಹಣೆ ಮಾಡುವ ಕೆಲಸಕ್ಕೆ ಮುಂದಾದರೆ ಹೆಚ್ಚು ಪಕ್ಷಿ ಪ್ರಾಣಿಗಳನ್ನು ಕಾಣಬಹುದಾಗಿದೆ. ಈ ಭೂಮಿಯ ಮೇಲೆ ಪ್ರತಿಯೊಬ್ಬರೂ ಬದುಕುವ ಹಕ್ಕಿದೆ. ಪ್ರಾಣಿ ಪಕ್ಷಿ ಮನುಷ್ಯ ಆಗಿರಬಹುದು. ಈ ಹಕ್ಕು ನೈಸರ್ಗಿಕವಾಗಿ ಬಂದಂತದ್ದು. ನಾವು ಏನೆನ್ನಾದರೂ ಅಭಿವೃದ್ಧಿ ಮಾಡಿದರೂ ಕೂಡ ಮತ್ತೊಬ್ಬರ ಪಾಲುದಾರಿಕೆಯಲ್ಲಿ ನಮ್ಮ ಒಂದು ಅಭಿವೃದ್ಧಿ ಇರಬಾರದು. ಎಷ್ಟೇ ಅಭಿವೃದ್ಧಿ ಪಡಿಸಿದರು ಕೂಡ ಮುಂದಿನ ಪೀಳಿಗೆಗಾಗಿ ನಮ್ಮ ಜೊತೆಗಿರುವಂತಹ ಇತರ ಪ್ರಾಣಿ ಪಕ್ಷಿ ಸಂಕುಲನಗಳ ಹಕ್ಕು ಕಿತ್ತು ಹಾಕಿಕೊಂಡಂತಹ ಅಭಿವೃದ್ಧಿ ಅಭಿವೃದ್ಧಿಯಾಗಲೂ ಸಾಧ್ಯವಿಲ್ಲ. ಎಲ್ಲರೂ ಕೂಡ ಇಂತಹ ಒಳ್ಳೆಯ ಕಾರ್ಯ ಸ್ವಯಂ ಪ್ರೇರಣೆಯಿಂದ ಮಾಡಬೇಕಾಗಿದೆ. ೧೨ ನೇ ಶತಮಾನದ ಬಸವಾದಿ ಶರಣರು ಹೇಳಿದಂತೆ ದಯೆ ಇಲ್ಲದ ಧರ್ಮ ಯಾವುದು ಇಲ್ಲ, ಹಾಗಾಗಿ ಪಕ್ಷಿ ಪ್ರಾಣಿಗಳಿಗೂ ಕೂಡ ನಾವು ದಯೆ ತೋರಿಸಿ ಅವುUಳಿಗೆ ನೀರುಣಿಸಬೇಕಾದುದು ನಮ್ಮ ಆದ್ಯ ಕರ್ತವ್ಯಬೇಕಾಗಿದೆ ಎಂದು ಹೇಳಿದರು.

ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದಂತಹ ಗುಲಬರ್ಗಾ ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥರು, ಹಾಗೂ ಪ್ರಾದ್ಯಾಪಕರಾದ ಡಾ. ಕೆ.ಎಸ್. ಮಾಲಿಪಾಟೀಲ್ ಅವರು ಮಾತನಾಡಿ, ಈ ಉರಿಬೀಸಿಲಿನಲ್ಲಿ ಪಕ್ಷಿ ಪ್ರಾಣಿಗಳಿಗೆ ನೀರಿನ ದಾಹ ತೀರಿಸುವುದು ಅತೀ ಮುಖ್ಯವಾದ ಕೆಲಸವಾಗಿದೆ. ಸಾಕಷ್ಟು ಪಕ್ಷಿ ಪ್ರಾಣಿಗಳಿಗೆ ಈ ಬೇಸಿಗೆಯ ಸಂದರ್ಭದಲ್ಲಿ ಕುಡಿಯೋಕೆ ನೀರು ಸಿಗದೇ ಸಾವಿಗೀಡಾಗುತ್ತಿದ್ದಾವೆ. ಆದ್ದರಿಂದ ಪಕ್ಷಿ ಪ್ರಾಣಿ ಸಂಕುಲವನ್ನು ಉಳಿಸುವ ನಿಟ್ಟಿನಲ್ಲಿ ಅರವಟ್ಟಿಗೆ ಮೂಲಕ ನೀರುಣಿಸುವ ಜೊತೆಗೆ ಅವುಗಳಿಗೆ ಆಹಾರ ಧಾನ್ಯ ಇಡುತ್ತಿದ್ದೇವೆ. ಎಂದು ಹೇಳಿದರು.

ತ್ರಿವಿಧ ದಾಸೋಹದ ಮೂಲಕ ಡಾ.ಶಿವಕುಮಾರ ಸ್ವಾಮೀಜಿಗಳು ಅಜರಾಮ: ರಾವೂರಶ್ರೀಗಳು

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣಾ ಸಮಿತಿ(ರಿ)ಯ ಜಿಲ್ಲಾ ಘಟಕದ ಅಧ್ಯಕ್ಷರಾದ ಶಿವಶರಣ ಪರಪ್ಪಗೋಳ ಮಾತನಾಡಿ, ಈ ದಿನವನ್ನು ನಾವು ಇನ್ನೊಬ್ಬರಿಗೆ ಏಪ್ರಿಲ್ ಫೂಲ್ ಮಾಡಿ ಅವರನ್ನು ತಪ್ಪು ದಾರಿಗೆ ಕರೆದುಕೊಮಡು ಹೋಗುವ ಬದಲು ಏಪ್ರಿಲ್ ಕೂಲ್ ಡೇ ಮಾಡಿ ಪಕ್ಷಿ ಪ್ರಾಣಿಗಳಿ ನೀರಿಡುವ ಹಾಗೂ ಆಹಾರ ಧಾನ್ಯಗಳನ್ನ ಇಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕಿದೆ.

ಜಾಗತೀಕ ತಾಪಮಾನದಿಂದಾಗಿ ಅತೀಯಾದ ಉಷ್ಣತೆ ಹಾಗೂ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಶುದ್ಧವಾದ ಗಾಳಿ ನೀರು ಸಿಗುತ್ತಿಲ್ಲ ಇನ್ನೊಂದೆಡೆ ಮನುಷ್ಯನ ಅತೀ ಆಸೆಯಿಂದ ಪರಿಸರ ನಾಶ ಮಾಡಿರುವುದರಿಂದ ಸರಿಯಾದ ಸಮಯಕ್ಕೆ ಮಳೆ ಬರುತ್ತಿಲ್ಲ. ವಾಯುಮಾಲಿನ್ಯ ಹದಗೆಡುತ್ತಿದೆ. ಹಾಗಾಗಿ ಪರಿಸರ ಸಂರಕ್ಷಣೆ ಮಾಡುವ ಜೊತೆಗೆ ಸಸಿ ನೆಟ್ಟು ಪೋಷಿಸಬೇಕಾಗಿದೆ ಹಾಗೂ ಪಕ್ಷಿ ಪ್ರಾಣಿ ಸಂಕುಲವನ್ನು ಉಳಿಸಬೇಕಾದ ಅನಿವಾರ್ಯತೆ ಇದೆ. ಮುಂದಿನ ದಿನಮಾನಗಳಲ್ಲಿ ಜಿಲ್ಲಾದ್ಯಂತ ಪರಿಸರದ ಬಗ್ಗೆ ಪಕ್ಷಿ ಪ್ರಾಣಿ ಸಂಕುಲವನ್ನು ಉಳಿಸುವ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಕೂಡ ಕಾರ್ಯಕ್ರಮ ಮಾಡುತ್ತೇವೆ. ಪಕ್ಷಿ ಪ್ರಾಣಿಗಳು ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಅವುಗಳನ್ನು ನಾವು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಡಿ.ಸಿ. ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣಾ ಸಮಿತಿ(ರಿ)ಯ ಸದಸ್ಯರಾದ ನಾಗೇಶ ಹರಳಯ್ಯಾ ಮಾತನಾಡಿ, ಈ ಒಂದು ಕಾರ್ಯಕ್ರಮವು ಬರೀ ನಗರಕ್ಕೆ ಮಾತ್ರ ಸಿಮೀತ ಮಾಡದೇ ಹಳ್ಳಿಗಳಿಗೆ ಹೋಗಿ ಶಾಲಾ ಕಾಲೇಜುಗಳಲ್ಲಿ  ವಿದ್ಯಾರ್ಥಿಗಳಿಗೆ ಈ ಒಂದು ಪಕ್ಷಿ ಪ್ರಾಣಿ ಉಳಿಸುವ ನಿಟ್ಟಿನಲ್ಲಿ  ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಪಕ್ಷಿ ಪ್ರಾಣಿಗಳಿಗೆ ಅರವಟ್ಟಿಗೆ ಇಡುವಂತಹ ಸಂದರ್ಭ ಸಂದರ್ಭ ಯಾಕೆ ಬಂದಿದೆ ಎಂಬುವುದನ್ನ ನಾವು ಅರಿತಾಗ ಕೆರೆಗಳನ್ನು, ನದಿಗಳನ್ನು ಮುಚ್ಚಿ ಹಾಕಿ ಅವುಗಳ ಮೇಲೆ ಕಟ್ಟಡ ನಿರ್ಮಾಣ ಮಾಡುವುದೇ ಅಭಿವೃದ್ಧಿ ಅಂತ ನವು ಅಂದುಕೊಂಡಿದ್ದೇವೆ. ಆದರೆ ಮನುಷ್ರಾದ ನಾವುಗಳು ಪಕ್ಷಿ ಪ್ರಾಣಿಗಳಿಗೂ ಕೂಡ ಬದುಕುವ ಹಕ್ಕಿದೆ ಎಂಬುದನ್ನ ಮರೆಯಬಾರದು. ಈ ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಹಾಗಾಗಿ ಪಕ್ಷಿ ಪ್ರಾಣಿಗಳಿಗೆ ನೀರು ಆಹಾರ ಧಾನ್ಯಗಳನ್ನು ಇಡಬೇಕಾಗಿದೆ ಎಂದು ಹೇಳಿದರು.

ಈ ಒಂದು ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರು ಪ್ರೋ. ಜಗನ್ನಾಥ ಶಿಂಧೆ, ರಾಜ್ಯಶಾಸ್ತ್ರದ ವಿಭಾಗದ ಮುಖ್ಯಸ್ಥರಾದ, ಪ್ರೊ. ರಾಮುಲು, ಗಣಿತಶಾಸ್ತೃ ವಿಭಾಗದ ಮುಖ್ಯಸ್ಥರಾದ ಪ್ರೊ. ಜಾಡಪ್ರತಾಪ, ಪ್ರೊ.ದಶರಥ ನಾಯಕ, ಡಾ.ಎನ್.ಎಚ್.ಪಾಟೀಲ್, ಡಾ.ಬಸಲಿಂಗಮ್ಮಾ ಹಳಿಮನಿ, ಶಿವಶರಣ ಪರಪ್ಪಗೋಳ, ಡಾ.ರಾಜಶೇಖರ ಕಟ್ಟಿಮನಿ, ಡಾ.ಅರೂಣಕೂಮಾರ ಜಾಧವ, ಡಾ.ಸಂತೋಷ ರಾಠೋಡ, ಯುವರಾಜ ಕಟ್ಟಿಮನಿ, ಹಣಮಂತ ಭೈರವಡಗಿ, ಇತರರು ಇದ್ದರು.

ಶ್ರೀ ಗುರುಲಿಂಗಯ್ಯಾ ಸ್ವಾಮಿ ನಿರೂಪಿಸಿದರು, ಡಾ.ಯಲ್ಲಾಲಿಂಗ ಕಾಳನೂರ ಸ್ವಾಗತಿಸಿದರು, ಡಾ.ಕೆ.ಎಸ್. ಮಾಲಿಪಾಟೀಲ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here