ಶಹಾಬಾದ: ತಾಲೂಕಿನ ಸಮೀಪದ ಮರತೂರ ಗ್ರಾಮದಲ್ಲಿ ಇತ್ತಚ್ಚಿಗಷ್ಟೇ ಆಕಸ್ಮಿಕವಾಗಿ ಬೆಂಕಿ ತಗುಲಿ ಕೊಟ್ಟಿಗೆ, ಮೇವು, ಆಕಳು ಸುಟ್ಟಿದ್ದರಿಂದ ಸಂಕ?ಕ್ಕೆ ಸಿಲುಕಿದ ರೈತನ ಕುಟುಂಬಕ್ಕೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಭೇಟಿಯಾಗಿ ಸಾಂತ್ವಾನ ಹೇಳಿ, ಸಂಕಷ್ಟ ರೈತನಿಗೆ ಸುಮಾರು ೫೦ ಸಾವಿರ ರೂ. ವೈಯಕ್ತಿಕ ಸಹಾಯಧನ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು, ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಮೇವು, ಕೊಟ್ಟಿಗೆ ಸುಟ್ಟು ಹೋಗಿದಲ್ಲದೇ, ಆಕಳು ಕೂಡ ಸುಟ್ಟು ಸಾವನಪ್ಪಿದ್ದು, ನಮ್ಮ ಪಕ್ಷ ಮುಖಂಡರಿಂದ ತಿಳಿದು ಬಂದಿತ್ತು.ಆದರೆ ಅಧಿವೇಶನ ಇರುವುದರಿಂದ ಬರಲು ತಡವಾಗಿದೆ.
ಗುಡ್ ಫ್ರಾಯಿಡೆ ನಿಮಿತ್ತ ವಿಶೇಷ ಪ್ರಾರ್ಥನೆ
ಆದರೆ ನನ್ನಿಂದಾಗುವ ಸಹಾಯ ಸಲ್ಲಿಸಿದ್ದೆನೆ.ಅಲ್ಲದೇ ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ.ಯಾವತ್ತಿಗೂ ನಿಮ್ಮ ಸಹಾಯಕ್ಕಾಗಿ ನಾನಿದ್ದೆನೆ.ಅಲ್ಲದೇ ಬಿಜೆಪಿ ಸರ್ಕಾರ ರೈತರ ಪರವಾಗಿ ಇದೆ. ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಆದಷ್ಟು ಶೀಘ್ರದಲ್ಲೇ ರೈತನಿಗೆ ಒದಗಿಸಲು ಅಧಿಕಾರಿಗಳು ಮುಂದಾಗಬೇಕು.ರೈತ ನಮ್ಮ ದೇಶದ ಬೆನ್ನೆಲುಬು ಆತ ಸಂಕಷ್ಟಗೆ ಒಳಗಾದರೇ ಇಡೀ ದೇಶವೆ ಸಂಕಟಕ್ಕೆ ಒಳಗಾಗುತ್ತದೆ.ಆದ್ದರಿಂದ ರೈತರು ಏನೇ ಸಮಸ್ಯೆಯಿದ್ದರೂ ನಮಗೆ ಹೇಳಿ, ಅದನ್ನು ಪರಿಹರಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಸುರೇಶ ವರ್ಮಾ, ಪಶು ವೈದ್ಯ ಮಂಜುನಾಥ, ಕಂದಾಯ ಅಧಿಕಾರಿ ವೀರಭದ್ರಪ್ಪ, ಬಿಜೆಪಿ ಶಹಾಬಾದ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಕಲಬುರಗಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ,ಕರಿಬಸಪ್ಪ ಪಾಟೀಲ, ದತ್ತು ಪಾಟೀಲ, ಅಶೋಕ ಜೇವರ್ಗಿ,ನಿಂಗಣ್ಣ ಹುಳಗೋಳಕರ್,ದೇವಾನಂದ ಮರತೂರ,ಶಿವಲಿಂಗಪ್ಪ ಮೀಣಜಗಿ, ದೇವಾನಂದ ಸಾಹು, ಚಂದು ಪಾಟೀಲ ಇತರರು ಇದ್ದರು.