ಶಹಾಬಾದ: ನಗರದ ಮಡ್ಡಿ ಪ್ರದೇಶದ ಮಥೋಡಿಸ್ಟ್ ಚರ್ಚ್‌ನಲ್ಲಿ ಶುಕ್ರವಾರ ಗುಡ್ ಫ್ರಾಯಿಡೆ ನಿಮಿತ್ತ ವಿಶೇಷ ಪ್ರಾರ್ಥನೆ ಕ್ರೈಸ್ತ ಬಾಂಧವರಿಂದ ನಡೆಯಿತು.
ಈ ಸಂದರ್ಭದಲ್ಲಿ ಚರ್ಚ್‌ನ ಸಭಾಪಾಲಕರಾದ ಹೆಚ್.ಎಸ್.ಸ್ಯಾಮ್ಯುವಲ್ ಮಾತನಾಡಿ, ಯೇಸು ಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣ ಬಿಟ್ಟ ದಿನ ಇಡೀ ವಿಶ್ವಕ್ಕೆ ಬೇಸರದ ದಿನವಾಗಿ ಪರಿಣಮಿಸಿದರೂ, ಶಿಲುಬೆಯ ಮುಖಾಂತರ ಯೇಸುಕ್ರಿಸ್ತರ ಪ್ರಾಣ ತ್ಯಾಗ ಮನುಜನ ಪಾಪ ಪರಿಹಾರಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಂಡು ಜನರಲ್ಲಿ ಪರಸ್ಪರ ಸೌಹಾರ್ದತೆ, ಮಾನವೀಯತೆ, ಪ್ರೀತಿ, ಕ್ಷಮಾಪಣಾ ಗುಣವನ್ನು ಬೋಧಿಸಿದ್ದು ಕ್ರೈಸ್ತ ಬಾಂಧವರಿಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ.
ಸುರಪುರ ಮೆಥೋಡಿಸ್ಟ್ ಕೇಂದ್ರದಲ್ಲಿ ಗುಡ್‌ಪ್ರೈಡೆ ಆಚರಿಸಲಾಯಿತು.
ಯೇಸು ಕ್ರಿಸ್ತರ ಬದುಕಿನ ಉದ್ದೇಶ ಮನುಕುಲವನ್ನು ಉದ್ಧಾರ ಹಾಗೂ ಮನುಕುಲದ ರಕ್ಷಣೆ ಮಾಡುವುದಾಗಿತ್ತು. ಶಾಂತಿ, ಪ್ರೀತಿ, ತ್ಯಾಗ, ಸೇವೆ,ವಿಶ್ವಾಸ ಮತ್ತು ಭರವಸೆಗಳಿಂದ ಕೂಡಿದ ದೇವರ ರಾಜ್ಯದತ್ತ ನಡೆಸುವುದಾಗಿತ್ತು.ಯೇಸುಕ್ರಿಸ್ತರು ತಮ್ಮ ಜೀವಿತಾವಧಿಯಲ್ಲಿ ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲದೆ ಎಲ್ಲರನ್ನು ಒಂದೇ ರೀತಿಯಾಗಿ ನೋಡಿದ್ದಾರೆ.ಹಣದ ಹಾಗೂ ಅಧಿಕಾರದ ಬಲದಿಂದ ಎಲ್ಲರನ್ನೂ ಒಟ್ಟುಗೂಡಿಸಲು ಸಾಧ್ಯವಿಲ್ಲ.ಆದರೆ ನಿಷ್ಕಲ್ಮಶ ಪ್ರೀತಿ ಎಲ್ಲರನ್ನು ಒಟ್ಟುಗೂಡಿಸುತ್ತದೆ ಎಂಬುದನ್ನು ಅರಿಯಬೇಕೆಂದು ತಿಳಿಸಿದ್ದಾರೆ.ಆದರೆ ಇಂದು ಪ್ರಭು ಕ್ರಿಸ್ತರ ಪ್ರೀತಿ, ತ್ಯಾಗದ ಆಳವನ್ನು ಅರಿಯದೇ ಮಾನವ ಬದುಕಿನಲ್ಲಿ ತೊಳಲಾಡುತ್ತಿದ್ದಾನೆ.ಇದರಿಂದ ಹೊರಬರಬೇಕಾದರೆ ಪ್ರಭುಕ್ರಿಸ್ತರ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಶಿಲುಬೆಯ ಮೇಲೆ ನುಡಿದ ಸಪ್ತ ನುಡಿಗಳನ್ನು ಇಮ್ಯಾನುವೆಲ್.ಎಸ್, ಸುಧಾಕರ್ ಡೇವಿಡ್, ಸುಶೀಲಾ ಪಾಸ್ಟರ್,ಶಾಂತರಾಜ ಬಾಗೋಡಿ,ಸ್ಟೀವ್ ಜಾಯವಂತ,ಮೇರಿ ಜಾನ್ ಭಾಸ್ಕರ್ ಹೇಳಿದರು.
ಜಾಲಿಬೆಂಚಿ ಭಕ್ತರ ಮಲ್ಲಿಕಾರ್ಜುನ ದರ್ಶನಕ್ಕೆ ಶ್ರೀಶೈಲಕ್ಕೆ ಪಾದಯಾತ್ರೆ
ಇಮ್ಯಾನುವೆಲ್ ಜಾನಪಾಲ್, ವಿದ್ಯಾ ಸಾಗರ, ಶೀಲಾ ಮಾರ್ಟಿನ್,ಸ್ಟ್ಯಾನ್ಲಿ, ಜಾನ್ ಸೋಮನ್, ಯೇಜಿಕಲ್, ಜೇಸುದಾಸ,ಜಾನಪ್ಪ,ರೂಪಾ ಜಯರಾಜ, ರಾಣಿ ಭಾಸ್ಕರ್, ಸತೀಶ ವೈದ್ಯ ಸೇರಿದಂತೆ ಅನೇಕ ಮಹಿಳೆಯರು ಇದ್ದರು.