ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ಗೋಪಾಲಪುರ ಚರ್ಚಿನಲ್ಲಿ ಗುಡ್ ಪ್ರೈಡೆ ಅಂದು ಚರ್ಚಿನಲ್ಲಿ ಬೆಳಿಗ್ಗೆಯಿಂದಲೇ ಆರಾಧನೆ ಸಂಜೆ 3ಗಂಟೆಯವರೆಗೆ ನಡೆಯಿತು.
ಸಂಜೆ 3ಗಂಟೆಯ ನಂತರ 14 ಶಿಲುಬೆಯ ಪ್ರಾರ್ಥನೆಯು ಗೋಪಾಲಪುರ ಚರ್ಚಿನ ಹಿಂಬದಿಯ ಬೆಟ್ಟದ 14ಪ್ರಾರ್ಥನಾ ಸ್ಥಳದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.
ಪ್ರಾಣ ಹೋದರೂ ಪರವಾಗಿಲ್ಲ ಅದ್ಧೂರಿ ಅಂಬೇಡ್ಕರ್ ಜಯಂತಿ ಆಚರಣೆ
ಈ ಸಂದರ್ಭದಲ್ಲಿ ಚರ್ಚ್ ನ ಫಾದರ್ ಜಾಕಬ್ ಕೊಳನೂರು 1 ರಿಂದ 14 ವರೆಗೆ ಶಿಲುಬೆಯ ಪ್ರಾರ್ಥನೆಯನ್ನು ಮಾಡಿದರು ಕ್ರೈಸ್ತ ಬಾಂಧವರು ಪ್ರತಿ ಶಿಲುಬೆಯ ಮುಂದೆ ಮೊಣಕಾಲೂರಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ ಶಿಲುಬೆಯ ಪ್ರಾರ್ಥನೆಯನ್ನು ನೆರವೇರಿಸಿದರ.ಇದಾದ ಮೇಲೆ ಚರ್ಚಿನಲ್ಲಿ ಬಲಿಪೂಜೆಯನ್ನು ನೆರವೇರಿಸಿದರು.
ಗೋಪಾಲಪುರ ಚರ್ಚಿನ ಹಿಂಬದಿ ಇರುವ ಈ ಬೆಟ್ಟದ ಶಿಲುಬೆಯ ಪ್ರಾರ್ಥನೆಯನ್ನು ಸುಮಾರು 50 ಹೆಚ್ಚುನ ವರ್ಷದಿಂದ ಕ್ರೈಸ್ತ ಭಕ್ತರು ನೆರವೇರಿಸುತ್ತಾ ಬಂದಿರುತ್ತಾರೆ.