ಶಹಾಪುರ: ದೇಶಕ್ಕೆ ಸಂವಿಧಾನವನ್ನು ನೀಡಿದ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅದ್ದೂರಿ ಆಚರಣೆ ಮಾಡಲಾಗುವುದೆಂದು ಭೀಮ್ ಆರ್ಮಿ ಯಾದಗಿರಿ ಜಿಲ್ಲೆ ಉಸ್ತುವಾರಿ ಶಿವು ಆಂದೋಲಾ ತಿಳಿಸಿದ್ದಾರೆ.
ಪತ್ರಿಕಾ ಹೇಳಿ ನೀಡಿರುವ ಅವರು ಅಂಬೇಡ್ಕರ್ ಜಯಂತಿ ಆಚರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಖ್ಯಾತೆ ತೆಗೆದಿದ್ದು, ಸರಳವಾಗಿ ಜಯಂತಿ ಆಚರಿಸುವಂತೆ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜನರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಗುಡ್ ಫ್ರಾಯಿಡೆ ನಿಮಿತ್ತ ವಿಶೇಷ ಪ್ರಾರ್ಥನೆ
ರಾಜ್ಯ ಸರ್ಕಾರವು ಹೋಳಿ ಹಬ್ಬ ಮುಗಿದ ಬಳಿಕ ಕೋವಿಡ್ ಮಾರ್ಗ ಸೂಚಿಗಳನ್ನು ಜಾರಿ ಮಾಡಿದ್ದು, ಅಂಬೇಡ್ಕರ್ ಜಯಂತಿ, ಗುಡ್ ಫ್ರೈಡೆ ಮೊದಲಾದ ಇತರ ಧರ್ಮೀಯರ ಆಚರಣೆ ಸರ್ಕಾರದ ಒಳಗಿರುವ ಮನುವಾದಿ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ತೊಂದರೆಯುಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.