ಶಾಸಕ ಅಜಯಸಿಂಗ್ ಗೆ ಭೇಟಿ: ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಅಭಿಯಾನಕ್ಕೆ ಸ್ಪಂದನೆ

0
39

ಕಲಬುರಗಿ :ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯ ಮತ್ತು ಮಲತಾಯಿ ಧೋರಣೆಯನ್ನು ಪ್ರತಿಭಟಿಸಿ ಸಮಿತಿ ಮೊದಲನೆಯ ಹಂತವಾಗಿ ಹಮ್ಮಿಕೊಂಡ ಹೋರಾಟದಂತೆ  ಕಲ್ಯಾಣ ಮಾಡಿ ಇಲ್ಲವೆ ಪ್ರತ್ಯೇಕ ರಾಜ್ಯ ಕೊಡಿ ಎಂಬ ಘೋಷಣೆಗೆ ಪ್ರತೀಕವಾಗಿ ಸರಕಾರದ ಮೇಲೆ ಒತ್ತಡ ತರಲು ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಎಂಬ ಅಭಿಯಾದಂತೆ ಇಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಜೇವರ್ಗಿ ಮತಕ್ಷೇತ್ರದ ಶಾಸಕರಾದ ಅಜಯಸಿಂಗ ರವರಿಗೆ ನಿವಾಸಕ್ಕೆ ಭೇಟಿ ಕೊಟ್ಟು ಕಲ್ಯಾಣ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಮಲತಾಯಿ ಧೋರಣೆಯ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಪಕ್ಷಾತೀತ ಧೋರಣೆಯಂತೆ ಸಮಿತಿ ಹಮ್ಮಿಕೊಂಡಿರುವ ಈ ಅಭಿಯಾನಕ್ಕೆ ಸ್ಪಂದಿಸಲು ಅಗ್ರಹಿಸಿ ಅವರಿಗೆ ವಿವರವಾದ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಸಾಸಕರಾದ ಅಜಯಸಿಂಗ್ ಅವರ ನಿವಾಸದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆದ ಸಭೆಯಲ್ಲಿ ಸಮಿತಿಯ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಅವರು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ತಮಗೂ ಬಹಳ ಖೇದವಾಗಿದೆ ಪ್ರಸ್ತುತ ಸರಕಾರ ಮಾಡುತ್ತಿರುವ ನಿರ್ಲಕ್ಷತನ, ಮಲತಾಯಿ ಧೋರಣೆಗೆ ಕಾಂಗ್ರೇಸ್ ಪಕ್ಷ ಸೇರಿದಂತೆ ನಮ್ಮ ಭಾಗದ ಬಿ.ಜೆ.ಪಿ., ಜನತಾ ದಳ ಎಲ್ಲಾ ಪಕ್ಷದವರು ಸಂಘಟಿತವಾಗಿ ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸಬೇಕೆಂಬ ಸಮಿತಿಯ ಧೋರಣೆಗೆ ತಾವು ಬದ್ಧವಾಗಿರುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ಸಚಿವ ಸಿ.ಪಿ. ಯೋಗೇಶ್ವರಗೆ ಅಂಬಾರಾಯ ಅಷ್ಠಗಿ ಸನ್ಮಾನ

ಕಲ್ಯಾಣ ಕರ್ನಾಟಕದಿಂದ ಸ್ಥಳಾಂತರವಾಗಿರುವ ಕಚೇರಿಗಳು ಮತ್ತು ಸ್ಥಳಾಂತರವಾಗಿರುವ ಏಮ್ಸ, ಐ.ಐ.ಟಿ. ಮುಂತಾದ ಯೋಜನೆಗಳು ಕಲ್ಯಾಣ ಕರ್ನಾಟಕಕ್ಕೆ ಸಿಗುವ ನಿಟ್ಟಿನಲ್ಲಿ ತಮ್ಮ ಪಕ್ಷ ಬದ್ಧತೆ ಪ್ರದರ್ಶಿಸುತ್ತದೆ. ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಸೇರಿದಂತೆ ೩೭೧ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ತಾವು ಸೇರಿದಂತೆ ತಮ್ಮ ಪಕ್ಷ ರಾಜಕಿಯ ಇಚಾಶಕ್ತಿ ಪ್ರದರ್ಶಿಸುವುದಾಗಿ ತಿಳಿಸಿದರು.

ಸಮಿತಿ ಹಮ್ಮಿಕೊಳ್ಳಲು ನಿರ್ಧರಿಸಿರುವ ಸರ್ವ ಪಕ್ಷ ಜನಪ್ರತಿನಿಧಿಗಳ ನಾಯಕರ ಪೂಜ್ಯರ, ಆಯಾ ಕ್ಷೇತ್ರದ ಪ್ರಮುಖರ ಉಪಸ್ಥಿತಿಯಲ್ಲಿ ನಡೆಸಬೇಕೆಂದು ನಿರ್ಧರಿಸಿರುವ ಮಹಾ ಅಧಿವೇಶನಕ್ಕೆ ತಮ್ಮ ಸಂಪೂರ್ಣ ಬೆಂಬಲವಿದ್ದು ತಾವು ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದರ ಜೊತೆಗೆ ತಮ್ಮ ಪಕ್ಷದ ಎಲ್ಲ ಮುಖಂಡಾರು ಭಾಗವಹಿಸುವುದಾಗಿ ತಿಳಿಸಿದರು.

ಜೀವನೋಪಾಯಕ್ಕಾಗಿ ಪೊಲೀಸ್ ಇಲಾಖೆ ಸಲ್ಲದು, ಜನಸೇವೆಯೇ ಮುಖ್ಯ: ಬಿ. ದಯಾನಂದ್

ಈ ಅಭಿಯಾನದಲ್ಲಿ ಸಮಿತಿಯ ಮುಖಂಡರುಗಳಾದ  ಮನೀಷ ಜಾಜು, ಲಿಂಗರಾಜ ಸಿರಗಾಪೂರ, ಡಾ. ಮಾಜಿದ್ ದಾಗಿ, ಶಿವಲಿಂಗಪ್ಪ ಬಂಡಕ್, ಮಹಮ್ಮದ ಮಿರಾಜೊದ್ದೀನ್, ಭದ್ರಶೆಟ್ಟಿ, ಶಾಮ್ ನಾಟಿಕಾರ, ಮಲ್ಲಿನಾಥ ಸಂಗಶೆಟ್ಟಿ, ಭಗವಂತ್ರಾವ ಪಾಟೀಲ್, ಜ್ಞಾನಮಿತ್ರ ಸ್ಯಮ್ಯುವೆಲ್, ಅಬ್ದುಲ ರಹೀಮ್, ಭವಾನಿಕುಮಾರ ವಳಕೇರಿ, ಶಾಂತಪ್ಪ ಕಾರಭಾಸಗಿ, ಲಿಂಗಣ್ಣ ಉದ್ದನೂರ, ಅಸ್ಲಂ ಚೌಂಗೆ, ವೀರೇಶ ಪುರಾಣಿಕ, ಶಿವಾನಂದ ಕಾಂದೆ, ರಾಜು ಜೈನ, ಸಬೀರ, ಅಂದ್ರಶೇಖರ ಮೇಕಿನ್, ಆಕಾಶ ರಾಠೋಡ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here