ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‌ಗಳ ಆರಂಭಿಸಿ: ಕ್ಯಾತಪ್ಪ ಮೇದಾ

0
15

ಸುರಪುರ: ಸಾರಿಗೆ ನೌಕರರ ಮುಷ್ಕರದಿಂದಾಗಿ ವಿದ್ಯಾರ್ಥಿಗಳು ಕಾಲೇಜು ಮತ್ತು ಶಾಲೆಗೆ ಹೋಗಲು ಆಗುತ್ತಿಲ್ಲಾ ಈಗಂತು ಪಿಯುಸಿಯ ಪರೀಕ್ಷೆ ನಡೆಯುತ್ತಿದ್ದೆ ಇಂತಹ ಸಮುದಲ್ಲಿ ಸರ್ಕಾರ ಮತ್ತು ನೌಕರರ ನಡುವೆ ನಡೆಯುತ್ತಿರುವ ಈ ಗುದ್ದಾಟದಲ್ಲಿ ವಿದ್ಯಾರ್ಥಿಗಳನ್ನು ಚಿಂತೆಗೀಡು ಮಾಡಿದೆ ಆದ್ದರಿಂದ ಸರ್ಕಾರ ವಿದ್ಯಾರ್ಥಿಗಳಿಗೆ ಅನೂಕೂಲ ಕಲ್ಪಸಲು ತ್ವರತವಾಗಿ ಕ್ರಮವಹಿಸಬೇಕು ಎಂದು ಎಬಿವಿಪಿಯ ಜಿಲ್ಲಾ ಸಂಚಾಲಕ ಕ್ಯಾತಪ್ಪ ಮೇದಾ ಆಗ್ರಹಿಸಿದರು.

ನಗರದ ತಹಶಿಲ್ದಾರ ಕಚೇರಿ ಸಭಾಂಗಣದಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಸಾರಿಗೆ ನೌಕರರ ಮುಷ್ಕರದಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿ ಬಹಳಷ್ಟು ಕಷ್ಟ ಅನುಭವಿಸುವಂತಾಘಿದೆ ಮೂದಲೆ ಬಡತನದಲ್ಲಿರುವ ವಿದ್ಯಾರ್ಥಿಗಳು ಪ್ರತಿ ದಿನವು ಖಾಸಗಿ ವಾಹನಗಳಿಗೆ ಹಣ ನೀಡಿ ಕಾಲೇಜಿಗೆ ಬರುವ ಮುಂಚೆಯೆ ಸರ್ಕಾರ ಎಚ್ಚೆತ್ತುಕೊಂಡು ಇದಕ್ಕೆ ಸೂಕ್ತವಾಗಿ ಕ್ರಮಕೈಗೊಳ್ಳಬೇಕು ಮತ್ತು ಕರೋನಾದಿಂದಾಗಿ ವಿದ್ಯಾರ್ಥಿಗಳು ಪಾಠ ವಿಲ್ಲದೆ ಇದ್ದರು ಇದೀಗ ಎಲ್ಲವು ಸರಿಯಾಗುವ ಹೊತ್ತಿನಲ್ಲಿ ಸಾರಿಗೆ ನೌಕರರ ಮುಷ್ಕರವು ವಿದ್ಯಾರ್ಥಿಗಳನ್ನು ಇನ್ನು ಚಿಂತೆಗೀಡು ಮಾಡಿದೆ ತಕ್ಷಣವೆ ಸಕಾರ ವಿದ್ಯಾರ್ಥಿಗಳ ಹಿತಕಾಯುವ ನಿರ್ಣಯವನ್ನು ಕೈಗೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಉಪಮುಖ್ಯಮಂತ್ರಿ ಲಕ್ಷ್ಮಣ ಸೌದಿ ಅವರಿಗೆ ಬರೆದ ಮನವಿಯನ್ನು ಗ್ರೇಡ್ ೨ ತಹಶಿಲ್ದಾರ ಸುಫಿಯಾ ಸುಲ್ತಾನ ಅವರಿಗೆ ಸಲ್ಲಿಸಲಾಯಿತು. ಈ ಸಮಯದಲ್ಲಿ ಭಿಮರಾವ್ ಮಂಗಿಹಾಳ, ಹಣಮಸಿಂಗ್ ಗೌಡಗೇರಾ, ರಾಜು ಹದ್ನೂರ, ಹುಲಗಪ್ಪ, ನಾಗರಾಜ, ನಿಂಗಯ್ಯ, ಬಿ.ಎಮ್ ಯಾದವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here