ಸುರಪುರ: ಶರಣ ಸೇವಾ ಸಂಸ್ಥೆಯಿಂದ ಶರಣು ಗ್ರಂಥಾಲಯ ಆರಂಭ

0
60

ಸುರಪುರ: ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯ ಬಸ್ ಡಿಪೋ ಬಳಿಯಲ್ಲಿ ಶರಣು ಸೇವಾ ಸಂಸ್ಥೆಯಿಂದ ಶರಣು ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು.

ಗ್ರಂಥಾಲಯವನ್ನು ಉದ್ಘಾಟಿಸಿದ ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಓದಿನ ಅನುಕೂಲ ಕಲ್ಪಿಸುವುದು ತುಂಬಾ ಅವಶ್ಯಕವಾಗಿದೆ.ಇದನ್ನು ಗಮನದಲ್ಲಿಟ್ಟುಕೊಂಡು ಶಿವರಾಜ ಕಲಕೇರಿ ನೇತೃತ್ವದಲ್ಲಿ ಶರಣ ಸೇವಾ ಸಂಸ್ಥೆಯಿಂದ ಶರಣು ಗ್ರಂಥಾಲಯ ಆರಂಭಿಸಿರುವುದು ತುಂಬಾ ಸಂತೋಷವಾಗಿದೆ,ಇಲ್ಲಿಯ ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಹಾಗು ಗ್ರಂಥಾಲಯದ ಬೆಳವಣಿಗೆಗೆ ನಮ್ಮ ಶ್ರೀಮಠದಿಂದ ಕೃತಿಗಳ ಖರೀದಿಗಾಗಿ ೧೧ ಸಾವಿರ ರೂಪಾಯಿಗಳ ದೇಣಿಗೆ ನೀಡುವುದಾಗಿ ತಿಳಿಸಿದರು.

Contact Your\'s Advertisement; 9902492681

ನಂತರ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ,ಶಿವರಾಜ ಕಲಕೇರಿ ಮಾಡಿದ ಕಾರ್ಯ ಮಾದರಿಯಾಗಿದೆ. ಸಂಸ್ಥೆಯಿಂದ ಇನ್ನೂ ಉತ್ತಮವಾದ ಕಾರ್ಯಗಳು ನಡೆಯಲಿ,ಗ್ರಂಥಾಲಯದ ಬೆಳವಣಿಗೆಗೆ ೧೦ ಸಾವಿರ ರೂಪಾಯಿಗಳ ಸಹಾಯಧನ ನೀಡುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ವಿಶ್ವರಾಧ್ಯ ದೇವರು ಚಟ್ನಳ್ಳಿ ಮಹಾಂತ ದೇವರು ಲೋಕಾಪುರ ಹಾಗು ಮುಖಂಡರಾದ ಸೂಗುರೇಶ ವಾರದ ರಂಗನಗೌಡ ಪಾಟೀಲ್ ದೇವಿಕೇರಾ ಕಾಂತು ಪಾಟೀಲ್ ಮಲ್ಲು ದಂಡೀನ್ ಮತ್ತು ಶಿವರಾಜ ಕಲಕೇರಿ ಮಾತನಾಡಿದರು.

ಉದ್ಯೋಗ ಖಾತ್ರಿ ಸಮರ್ಪಕ ಜಾರಿಗೆ ಆಗ್ರಹಿಸಿ 9ಕ್ಕೆ ಪ್ರತಿಭಟನೆ

ಇದೇ ಸಂದರ್ಭದಲ್ಲಿ ಕುಡಿಯುವ ನೀರಿನ ಅರವಂಟಿಗೆಯನ್ನು ಆರಂಭಿಸಲಾಯಿತು ಹಾಗು ಶರಣಪ್ಪ ಕಲಕೇರಿ ದಂಪತಿಗಳನ್ನು ಹಾಗು ಅನೇಕ ಜನ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಬಸವರಾಜಪ್ಪ ನಿಷ್ಠಿ ದೇಶಮುಖ ಬಸವರಾಜ ಜಮದ್ರಖಾನಿ ಶಾಂತಪ್ಪ ಬೂದಿಹಾಳ ಶಾಂತುಗೌಡ ಮಲ್ಲಣ್ಣ ಸಾಹು ಮುಧೋಳ ಚನ್ನಪಟ್ಟಣ ಬಲಭೀಮ ನಾಯಕ ಬೈರಿಮಡ್ಡಿ ಶರಣು ನಾಯಕ ಬೈರಿಮಡ್ಡಿ ಆರ್.ಮಹಾದೇವಪ್ಪ ಸೂಗುರೇಶ ಗುಳಗಿ ಮಹೇಶ ಆನೆಗುಂದಿ ಮಂಜುನಾಥ ಜಾಲಹಳ್ಳಿ ಶ್ರವಣಕುಮಾರ ನಾಯಕ ಚಂದ್ರಶೇಖರ ಡೊಣೂರ ಶಿವರುದ್ರ ಉಳ್ಳಿ ರಮೇಶಗೌಡ ವಾಸುದೇವ ನಾಯಕ ದೇವು ನಾಯಕ ರಾಘವೇಂದ್ರ ದೊರೆ ಆನಂದ ಮಡ್ಡಿ ಮಲ್ಲಿಕಾರ್ಜುನ ಸುಬೇದಾರ ರಾಜು ಗುಡೂರ ಭಾಗೇಶ ಕಾಳಗಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here